2017ರ ರಿಂದ ತುರ್ತು ಸಹಾಯ ಕರೆಗೆ 112 ನಂಬರ್ ಮಾತ್ರ

ಹೊಸದಿಲ್ಲಿ, ಮೇ9: ತುರ್ತು ಸಂದರ್ಭದಲ್ಲಿ ಸಹಾಯ ಪಡೆಯುವ ಏಜೆನ್ಸಿ ನಂಬರ್‌ನ್ನು ಏಕೀಕರಿಸಲಾಗುತ್ತಿದೆ. ಮುಂದೆ 112 ಹೊಸ ಎಮೆರ್ಜನ್ಸಿ ನಂಬರ್ ಬಳಕೆಗೆ ಬರಲಿದೆ ಎಂದು ವರದಿಯಾಗಿದೆ. 2017 ಜನವರಿ ಒಂದರ ನಂತರ ಹೊಸ ನಂಬರ್ ಜಾರಿಗೆ ಬರಲಿದ್ದು ಈಗ ಪೊಲೀಸರ ಸಹಾಯವನ್ನು ಬಳಸಲು 100, ಅಗ್ನಿಶಾಮಕ ದಳಕ್ಕೆ101,ಆ್ಯಂಬುಲೆನ್ಸ್‌ಗೆ 102 ಎಂಬ ನಂಬರುಗಳ ಬಳಕೆ ನಡೆಯುತ್ತಿದೆ.
2017ರ ನಂತರ ಎಲ್ಲದ್ದಕ್ಕೂ 112 ನಂಬರ್‌ಗೆ ಫೋನ್ ಮಾಡಿದರೆ ಆಯಾ ನೆರವು ಸಿಗಲಿದೆ. ಹೊಸ ತುರ್ತುಕರೆ ಸಂಖ್ಯೆ ಜಾರಿಗೆ ಬಂದ ಒಂದು ವರ್ಷದೊಳಗೆ 100,101,102 ಎಂಬ ನಂಬರ್‌ಗಳ ಬಳಕೆ ಸಂಪೂರ್ಣ ಸ್ಥಗಿತ ಗೊಳಿಸಲಾಗುವುದು. ದೇಶದಲ್ಲಿ ಎಲ್ಲಿಯೂ 112 ನಂಬರ್‌ಗೆ ಕರೆ ಮಾಡಬಹುದಾಗಿದೆ. ಲ್ಯಾಂಡ್‌ಲೈನ್‌ನಿಂದಲೂ ಮೊಬೈಲ್‌ನಿಂದಲೂ ಫೋನ್ ಮಾಡಿದರೆ ಸೇವೆ ಲಭಿಸಲಿದೆ. ಮೊಬೈಲ್‌ನಿಂದ ಎಸ್ಸೆಮ್ಮೆಸ್ ಕಳುಹಿಸಿ ನೆರವನ್ನು ಪಡೆಯಬಹುದು. 112ಕ್ಕೆ ಮಾಡುವ ಕರೆಗಳು ಸಮೀಪದ ಸಹಾಯ ಕೇಂದ್ರಗಳಿಗೆ ಲಭಿಸಲಿದೆ ಎಂದು ವರದಿಯಾಗಿದೆ.
Next Story





