ಹಿಂದೂ ಭಯೋತ್ಪಾದನೆ, ಮುಸ್ಲಿಂ ಭಯೋತ್ಪಾದನೆ ಎಂಬುದಿಲ್ಲ: ಎನ್‌ಐಎ ಮುಖ್ಯಸ್ಥ ಶರತ್‌ಕುಮಾರ್

ಹೊಸದಿಲ್ಲಿ, ಮೇ 9: ಹಿಂದೂ ಭಯೋತ್ಪಾದನೆ , ಮುಸ್ಲಿಂ ಭಯೋತ್ಪಾದನೆ ಎಂಬುದಿಲ್ಲ , ಭಯೋತ್ಪಾದಕರು ಭಯೋತ್ಪಾದಕರೇ ಆಗಿದ್ದಾರೆ ಎಂದು ಎನ್‌ಐಎ ಮುಖ್ಯಸ್ಥ ಶರತ್ ಕುಮಾರ್ ಹೇಳಿದ್ದಾರೆಂದು ವರದಿಯಾಗಿದೆ. ಐಸಿಸ್ ಭಾರತಕ್ಕೊಂದು ಆತಂಕವಾಗಿದ್ದರೂ ಅದು ದೊಡ್ಡ ಬೆದರಿಕೆಯೇನಲ್ಲ. ಸಮಾಜದಲ್ಲಿ ಸಾರ್ವಜನಿಕವಾಗಿ ಆಸಕ್ತಿಯಿಲ್ಲದವರಿದ್ದಾರೆಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಡೈರೆಕ್ಟರ್ ಜನರಲ್ ಶರತ್‌ಕುಮಾರ್ ಹೇಳಿದ್ದಾರೆ. ಕೆಲವು ಭಯೋತ್ಪಾದನೆ ಕೇಸ್‌ಗಳ ಆರೋಪಿಗಳು ಆರೆಸ್ಸೆಸ್ ಸದಸ್ಯರಾಗಿದ್ದರೂ ಅವರನ್ನು ಸಂಘಟನೆ ಹೊರಗೆ ಹಾಕಿತ್ತೆಂದು ಅವರು ತಿಳಿಸಿದ್ದಾರೆ. ಇಂಡಿಯನ್ ಮುಜಾಹಿದೀನ್,ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯ ಎಂಬಿವೇ ಪ್ರಕರಣಗಳ ತನಿಖೆ ಸಮಯದಲ್ಲಿ ಎನ್ ಐಎಯ ಮುಖ್ಯಸ್ಥನಾಗಿರುವ ಶರತ್‌ಕುಮಾರ್ ಪ್ರಮಾದಕರವಾದ ಭಯೋತ್ಪಾದನೆ ಪ್ರಕರಣ ಕುರಿತು ತನ್ನ ನಿಲುವನ್ನು ಹೀಗೆ ಸ್ಪಷ್ಟಪಡಿಸಿದರೆಂದು ವರದಿಯಾಗಿದೆ. ಹಿಂದುತ್ವ ಭಯೋತ್ಪಾದನೆಯಲ್ಲಿ ತಿರುಗಿಬಿದ್ದ ಸಾಕ್ಷಿಗಳ ವಿಚಾರ, ಸಾಕ್ಷಿದಾರನಿಗೂ ಕೋರ್ಟಿಗೂ ಮತ್ತು ಪ್ರಾಸಿಕ್ಯೂಟರ್ ಗಳೊಳಗಗಿನ ವಿಷಯವಾಗಿದೆ ಎಂದ ಅವರು ಅದರಲ್ಲಿ ಎನ್‌ಎಐಯ ಪಾತ್ರವಿಲ್ಲ ಎಂದೂ ಅವರು ಹೇಳಿದ್ದಾರೆ.
ಹಿಂದುತ್ವ ಭಯೊತ್ಪಾದನೆ ಕೇಸುಗಳ ಸಾಕ್ಷಿಗಳು ಸಾಕ್ಷ್ಯ ಬದಲಾಯಿಸುತ್ತಿರುವುದು ನಮಗೂ ಆತಂಕದ ವಿಚಾರವೇ ಆಗಿದೆ.ಆದರೆ ಇದು ಎಲ್ಲ ಕೇಸುಗಳಲ್ಲಿ ಸಂಭವಿಸುವಂತಹದ್ದೇ ಆಗಿದೆ. ಹಿಂದುತ್ವ ಕೇಸ್‌ನಲ್ಲಿ ನಿಧಾನವಾಗಿ ವ್ಯವಹರಿಸಲು ಎನ್‌ಐಎಗೆ ನಿರ್ದೇಶಿಸಲಾಗಿತ್ತು ಎಂದು ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ವ್ಯವಹರಿಸುವ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ರೋಹಿನಿ ಸಾಲಿಯಾನ್ರವರ ಆರೋಪವನ್ನು ತಳ್ಳಿಹಾಕಿದ ಶರತ್ ಕುಮಾರ್ ಕಾಲಾವಧಿಯನ್ನು ವಿಸ್ತರಿಸಲು ಕೋರಿದಾಗ ಅವಧಿ ವಿಸ್ತಣೆ ಆಗದಿದ್ದಾಗ ಅವರು ಇಂತಹ ಒಂದು ವಾದದೊಂದಿಗೆ ಸಾರ್ವಜನಿಕವಾಗಿ ಮಾತಾಡಿದರು ಎಂದು ಶರತ್ ಕುಮಾರ್ ಪ್ರತ್ಯಾರೋಪ ಹೊರಿಸಿದ್ದಾರೆ ಎಂದು ವರದಿಯಾಗಿದೆ.







