Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮೇ 10 ರಿಂದ ಸೈಯದ್ ತ್ವಾಹಿರುಲ್ ತಂಙಳ್...

ಮೇ 10 ರಿಂದ ಸೈಯದ್ ತ್ವಾಹಿರುಲ್ ತಂಙಳ್ ಅವರ 10ನೆ ಉರೂಸ್

ವಾರ್ತಾಭಾರತಿವಾರ್ತಾಭಾರತಿ9 May 2016 2:30 PM IST
share
ಮೇ 10 ರಿಂದ  ಸೈಯದ್ ತ್ವಾಹಿರುಲ್ ತಂಙಳ್ ಅವರ 10ನೆ ಉರೂಸ್

ಕಾಸರಗೋಡು, ಮೇ 9: ಪ್ರಮುಖ ಆಧ್ಯಾತ್ಮಿಕ ನೇತಾರ ಝೈನುಲ್ ಮುಹಖ್ಖಿಖೀನ್ ಅಸೈಯದ್ ತ್ವಾಹಿರುಲ್ ಅಹ್ದಲ್ ತಂಙಳ್‌ರ 10ನೆ ಉರೂಸ್ ಮುಬಾರಕ್ ಮೇ 10ರಿಂದ 14ರವರೆಗೆ ಜಿಲ್ಲೆಯ ಪುತ್ತಿಗೆ ಮುಹಿಮ್ಮಾತ್ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಮೇ 10ರಂದು ಬೆಳಗ್ಗೆ 6:30ಕ್ಕೆ ಸೈಯದ್ ಇಬ್ರಾಹೀಂ ಅಲ್ ಹಾದಿ ತಂಙಳ್‌ರ ನೇತೃತ್ವದಲ್ಲಿ ನಡೆಯುವ ತಾಜುಲ್ ಉಲಮಾ ಮಖಾಂ ಝಿಯಾರತ್‌ನೊಂದಿಗೆ ಪಂಚದಿನ ಉರೂಸ್ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಸ್ವಾಗತ ಸಮಿತಿಯ ಚೆಯರ್‌ಮಾನ್ ಸೈಯದ್ ಮುಹಮ್ಮದ್ ಇಬ್ರಾಹೀಂ ಪೂಕುಂಞಿ ತಂಙಳ್ ಅಲ್ ಹೈದ್ರೋಸಿ ಕಲ್ಲಕಟ್ಟ ಧ್ವಜಾರೋಹಣ ಗೈಯ್ಯಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಖತ್ಮುಲ್ ಖುರ್‌ಆನ್ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬೆಳ್ಳಿಪ್ಪಾಡಿ ಅಬ್ದುಲ್ಲಾ ಮುಸ್ಲಿಯಾರ್‌ರ ಅಧ್ಯಕ್ಷತೆಯಲ್ಲಿ ಳಿಯಾಉಲ್ ಮುಸ್ತಫಾ ಸೈಯದ್ ಹಾಮಿದ್ ಕೋಯಮ್ಮ ತಂಙಳ್ ಮಾಟೂಲ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ರಫೀಕ್ ಸಅದಿ ದೇಲಂಪಾಡಿ ಭಾಗವಹಿಸಲಿದ್ದಾರೆ. ಅಪರಾಹ್ನ 2 ಗಂಟೆಗೆ ಸೈಯದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕಣ್ಣವಂರ ಪ್ರಾರ್ಥನೆಯೊಂದಿಗೆ ಪ್ರವಾಸಿ ಸಂಗಮ ಪ್ರಾರಂಭಗೊಳ್ಳಲಿದು, ಹಾಜಿ ಅಮೀರಲಿ ಚೂರಿಯ ಅಧ್ಯಕ್ಷತೆಯಲ್ಲಿ ಸೈಯದ್ ಅತಾವುಲ್ಲ ತಂಙಳ್ ಉದ್ಯಾವರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಪ್ರವಾಸಿ ಲೋಕದ ಸಮಸ್ಯೆಗಳು ಹಾಗೂ ಪರಿಹಾರಗಳು ಎಂಬ ವಿಷಯದಲ್ಲಿ ಡಾ.ಅಬ್ದುಸ್ಸಲಾಮ್ ಮುಸ್ಲಿಯಾರ್ ಉಪನ್ಯಾಸವನ್ನು ನೀಡುವರು.

ಮಂಗಳವಾರ, ಬುಧವಾರ ಹಾಗೂ ಗುರುವಾರ ರಾತ್ರಿ 7 ಗಂಟೆಗೆ ನಡೆಯುವ ವಅಳ್ ಕಾರ್ಯಕ್ರಮಗಳಲ್ಲಿ ಹಾಫಿಳ್ ಸುಫ್ಯಾನ್ ಸಖಾಫಿ, ಹಂಝ ಮಿಸ್ಬಾಹಿ ಓಟಪದವು, ಮುಳ್ಳೂರ್‌ಕೆರೆ ಮುಹಮ್ಮದಲಿ ಸಖಾಫಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ.

ಮೇ 13ರಂದು ಅಪರಾಹ್ನ 1:30ಕ್ಕೆ ಸೈಯದ್ ಇಸ್ಮಾಯೀಲ್ ಬಾಫಖೀ ತಂಙಳ್ ಕೊಯ್ಲಾಂಡಿರ ನೇತೃತ್ವದಲ್ಲಿ ಇಚ್ಚಿಲಂಗೋಡು ಮಖಾಂ ಝಿಯಾರತ್, ಹಾಫಿಳ್ ಸೈಯದ್ ಫಖ್ರುದ್ದೀನ್ ಹದ್ದಾದ್ ತಂಙಳ್‌ರ ನೇತೃತ್ವದಲ್ಲಿ ಪೊಸೋಟ್ ತಂಙಳ್ ಮಖಾಂ ಝಿಯಾರತ್ ನಡೆಯಲಿದೆ.

ಸಂಜೆ 4 ಗಂಟೆಗೆ ಸೈಯದ್ ಹಸನುಲ್ ಅಹ್ದಲ್ ತಂಙಳ್‌ರ ಅಧ್ಯಕ್ಷತೆಯಲ್ಲಿ ಅನುಸ್ಮರಣಾ ಸಂಗಮ ನಡೆಯಲಿದೆ. ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಅನುಸ್ಮರಣಾ ಪ್ರಭಾಷಣವನ್ನು ನಡೆಸುವರು. ಮಾಣಿಕ್ಕೋತ್ ಅಬ್ದುಲ್ಲಾ ಮುಸ್ಲಿಯಾರ್ ಹಾಗೂ ಶಾಫಿ ಸಅದಿ ಬೆಂಗಳೂರು ಭಾಷಣಗೈಯ್ಯಲಿದ್ದಾರೆ.

ರಾತ್ರಿ 7 ಗಂಟೆಗೆ ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿಯ ಅಧ್ಯಕ್ಷತೆಯಲ್ಲಿ ತಝ್‌ಕಿಯತ್ ಸಮ್ಮೇಳನ ನಡೆಯಲಿದ್ದು ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಎ.ಪಿ. ಮುಹಮ್ಮದ್ ಮುಸ್ಲಿಯಾರ್ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ.

ಮೇ 14ರಂದು ಬೆಗ್ಗೆ 6ಕ್ಕೆ ರಾತೀಬ್ ನಡೆಯಲಿದೆ. ಸೈಯದ್ ಅಹ್ಮದುಲ್ ಕಬೀರ್ ಜಮಲುಲ್ಲೈಲಿ ತಂಙಳ್ ಕರರ ಪ್ರಾರ್ಥನೆಯೊಂದಿಗೆ ಅಬ್ದುರ್ರಹ್ಮಾನ್ ಅಹ್ಸನಿ ಸಾರಥ್ಯದಲ್ಲಿ ರಾತೀಬ್ ಕಾರ್ಯಕ್ರಮ ನಡೆಯಲಿದ್ದು ಅಬ್ದುಲ್ ಖಾದರ್ ಸಖಾಫಿ ಕಾಟಿಪ್ಪಾರ ಭಾಗವಹಿಸಲಿದ್ದಾರೆ. ಬೆಳಗ್ಗೆ 7:30ಕ್ಕೆ ಅಬೂಬಕರ್ ಕಾಮಿಲ್ ಸಖಾಫಿಯ ಅಧ್ಯಕ್ಷತೆಯಲ್ಲಿ ಹಿಮಮಿ ಸಂಗಮ ನಡೆಯಲಿದ್ದು ಬಿ.ಎಸ್. ಅಬ್ದುಲ್ಲ ಕುಂಞಿ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಅಬ್ದುಸ್ಸಲಾಮ್ ಅಹ್ಸನಿ ಕಾಮಿಲ್ ಸಖಾಫಿ ಹಾಗೂ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಭಾಷಣ ಮಾಡಲಿದ್ದಾರೆ.

ಬೆಳಗ್ಗೆ 9:30ಕ್ಕೆ ಪೂರ್ವ ವಿದ್ಯಾರ್ಥಿ ಸಂಗಮ ನಡೆಯಲಿದೆ. ಸೈಯದ್ ಹಬೀಬುಲ್ ಅಹ್ದಲ್ ತಂಙಳ್‌ರ ಅಧ್ಯತಕ್ಷತೆಯಲ್ಲಿ, ಆದಂ ಸಖಾಫಿ ಪಳ್ಳಪ್ಪಾಡಿ ಉದ್ಘಾಟಿಸುವರು. ಸುಲೈಮಾನ್ ಕರಿವಳ್ಳೂರು, ಎಸ್.ಪಿ. ಹಂಝ ಸಖಾಫಿ ಬಂಟ್ವಾಳ, ಸಯ್ಯದ್ ಶಾಹುಲ್ ಹಮೀದ್ ತಂಙಳ್, ಸಿ.ಎನ್. ಜಹ್‌ಫರ್, ತಾಜುದ್ದೀನ್ ಮಾಸ್ಟರ್, ಉಮರ್ ಸಖಾಫಿ ಕಾಜೂರ್ ಭಾಷಣವನ್ನು ಮಾಡಲಿದ್ದಾರೆ. 

ಬೆಳಗ್ಗೆ 10:30ಕ್ಕೆ ಮೌಲೀದ್ ನಡೆಯಲಿದೆ. ಸೈಯದ್ ಇಸ್ಮಾಯೀಲ್ ಹಾದಿ ತಂಙಳ್ ಪ್ರಾರ್ಥಿಸುವರು. ಸ್ವಾಲಿಹ್ ಸಅದಿ ತಳಿಪ್ಪರಂಬ್ ಉದ್ಭೋದನೆಯನ್ನು ನೀಡಲಿದ್ದಾರೆ. ಮದ್ಯಾಹ್ನ 12 ಗಂಟೆಗೆ ಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಅಲ್ ಬುಖಾರಿ ಬಾಯಾರ್‌ರ ಸಾರಥ್ಯದಲ್ಲಿ ಖತ್ಮುಲ್ ಖುರ್‌ಆನ್ ಪ್ರಾರ್ಥನೆ ನಡೆಯಲಿದೆ.

ಅಪರಾಹ್ನ 2:30ಕ್ಕೆ ದಅ್ವಾ ಸಂಗಮ ನಡೆಯಲಿದೆ. ಸಿ.ಅಬ್ದುಲ್ಲ ಮುಸ್ಲಿಯಾರ್ ಅಧ್ಯಕ್ಷತೆಯನ್ನು ವಹಿಸಲಿದ್ದು, ಸೈಯದ್ ಪಿ.ಎಸ್. ಆಟಕೋಯ ತಂಙಳ್ ಬಾಹಸನ್ ಉದ್ಘಾಟಿಸಲಿರುವರು. ಡಾ.ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ, ಮುಹಮ್ಮದಲಿ ಸಖಾಫಿ ತ್ರಿಕರಿಪ್ಪೂರ್, ಪಿ.ಕೆ. ಅಬೂಬಕರ್ ಮುಸ್ಲಿಯಾರ್ ಅಲ್‌ಮಖರ್ ವಿಷಯ ಮಂಡನೆಯನ್ನು ನಡೆಸಲಿದ್ದಾರೆ.

ಸಂಜೆ 5 ಗಂಟೆಗೆ ದಿಕ್ರ್ ದುಆ ಸಮ್ಮೇಳನ ನಡೆಯಲಿದೆ. ಕಂಝುಲ್ ಉಲಮ ಕೆ.ಪಿ. ಹಂಝ ಮುಸ್ಲಿಯಾರ್ ಚಿತ್ತಾರಿ ಅಧ್ಯಕ್ಷತೆಯನ್ನು ವಹಿಸಲಿದ್ದು ಸೈಯದ್ ಅಲಿ ಬಾಫಖಿ ತಂಙಳ್ ಪ್ರಾರ್ಥಿಸಲಿರುವರು. ಬಿ.ಎಸ್. ಕುಂಞಿ ಫೈಝಿ ಸ್ವಾಗತಿಸಲಿದ್ದು. ತಾಜುಶ್ಶರೀ ಎಂ.ಅಲಿಕುಂಞಿ ಮುಸ್ಲಿಯಾರ್ ಶಿರಿಯಾ ಉದ್ಘಾಟಿಸಲಿದ್ದಾರೆ. ಖಮರುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯ ಪ್ರಭಾಷಣವನ್ನು ಮಾಡಲಿದ್ಧಾರೆ. ಬೇಕಲ್ ಇಬ್ರಾಹಿಮ್ ಮುಸ್ಲಿಯಾರ್, ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಹಾಗೂ ವಡಶ್ಶೇರಿ ಹಸನ್ ಮುಸ್ಲಿಯಾರ್ ಭಾಷಣಗೈಯ್ಯಲಿದ್ದಾರೆ. ಕರ್ನಾಟಕ ಆರೋಗ್ಯ ಮಂತ್ರಿ ಯು.ಟಿ.ಖಾದರ್ ಹಾಗೂ ಯೇನಪೋಯ ಅಬ್ದುಲ್ಲ ಕುಂಞಿ ಹಾಜಿ, ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್,. ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಪಟ್ಟುವಂ ಕೆ.ಪಿ. ಅಬೂಬಕರ್ ಮುಸ್ಲಿಯಾರ್, ಬೆಳ್ಳಿಪ್ಪಾಡಿ ಅಬ್ದುಲ್ಲ ಮುಸ್ಲಿಯಾರ್ ಮತ್ತಿತರ ಅತಿಥಿಗಳು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸೈಯದ್ ಇಬ್ರಾಹಿಂ ಪೂಕುಂಞಿ ತಂಙಳ್ ಕಲ್ಲಕಟ್ಟ, ಬಿ.ಎಸ್. ಅಬ್ದುಲ್ಲ ಕುಂಞಿ ಫೈಝಿ, ಹಾಜಿ ಅಮೀರಲಿ ಚೂರಿ, ಸೈಯದ್ ಮುನೀರುಲ್ ಅಹ್ದಲ್ ತಂಙಳ್, ಅಬ್ದುರ್ರಹೀಂ ಸಖಾಫಿ ಚಿಪ್ಪಾರ್, ಮೂಸ ಸಖಾಫಿ ಕಳತ್ತೂರ್, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್ ಹಾಗೂ ಸುಲೈಮಾನ್ ಕರಿವೆಳ್ಳೂರ್ ಮತ್ತಿತರರು ಉಪಸ್ಥಿತರಿದ್ದರು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X