ಅಫ್ಘಾನಿಸ್ತಾನ: 60 ಮಂದಿಯನ್ನು ಕೊಂದ 6ಮಂದಿ ತಾಲಿಬಾನಿಗಳಿಗೆ ಗಲ್ಲು

ಕಾಬೂಲ್, ಮೇ 9: ಅಫ್ಘಾನಿಸ್ತಾನದಲ್ಲಿ ಆರು ಮಂದಿ ತಾಲಿಬಾನಿಗಳಿಗೆ ಗಲ್ಲು ಶಿಕ್ಷೆ ನೀಡಲಾಗಿದೆ. ಎಪ್ರಿಲ್‌ನಲ್ಲಿ ಅರುವತ್ತು ಮಂದಿಯನ್ನು ಕೊಂದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದವರನ್ನು ಕಳೆದ ದಿವಸ ಗಲ್ಲಿಗೇರಿಸಲಾಗಿದೆ. ಸಾಮಾನ್ಯ ನಾಗರಿಕರನ್ನೂ ಕೊಂದಿದ್ದಾರೆ ಎಂದು ಇವರ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿತ್ತೆಂದು ವರದಿಯಾಗಿದೆ.
ತಾಲಿಬಾನ್ ಸದಸ್ಯರ ಸಹಿತ ಗಲ್ಲುಶಿಕ್ಷೆಗುರಿಯಾದ ನೂರಕ್ಕೂ ಅಧಿಕ ಮಂದಿ ಇದ್ದಾರೆ.ಇವರ ಕೇಸ್ ಕೋರ್ಟ್ ಪರಿಗಣನೆಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೊದಲು ಬಾಂಬ್ ದಾಳಿಯ ವಿಷಯದಲ್ಲಿ ಮಾತಾಡುತ್ತಿದ್ದ ವೇಳೆ ಪಾರ್ಲಿಮೆಂಟ್‌ನಲ್ಲಿ ಗಲ್ಲು ಶಿಕ್ಷೆಯನ್ನು ಬೇಗನೆ ಜಾರಿಗೊಳಿಸಲಾಗುವುದು ಎಂದು ಅಧ್ಯಕ್ಷ ಅಶ್ರಫ್ ಗನಿ ಹೇಳಿದ್ದರು. ಗಲ್ಲು ಶಿಕ್ಷೆ ಜಾರಿಯಾಗಬೇಕಿದ್ದರೆ ಅಪಘಾನ್ ಅಧ್ಯಕ್ಷರ ಸಹಿ ಅಗತ್ಯವಿದೆ. ಗಲ್ಲುಶಿಕ್ಷೆ ಜಾರಿಮಾಡಿದ್ದರಿಂದಾಗಿ ತಾಲಿಬಾನ್ ಮತ್ತು ಅಫಘಾನ್ ಸರಕಾರದ ನಡುವಿನ ಮಾತಕತೆ ಸಾಧ್ಯತೆ ದೂರವಾಗಿದೆ. ಅಮೆರಿಕದ ಅತಿಕ್ರಮಣದಿಂದಾಗಿ ತಾಲಿಬಾನಿಗಳು 2001ರಲ್ಲಿ ಆಳ್ವಿಕೆಯನ್ನು ಕಳಕೊಳ್ಳಬೇಕಾಗಿ ಬಂದಿತ್ತು.





