ಹೆಣ್ಣು ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು ಬಳಸುವುದು ವಿವಾಹವಿಚ್ಛೇದನ ಹೆಚ್ಚಳಕ್ಕೆ ಕಾರಣವಾಗುತ್ತಿದೆ: ಜಗೀರ್ ಕೌರ್!

ಚಂಡಿಗಡ, ಮೇ 9: ಹೆಣ್ಣುಮಕ್ಕಳಿಗೆ ಶಿಸ್ತು ಕಲಿಸಬೆಕೆಂದೂ ಮೊಬೈಲ್ ಫೋನ್ ಉಪಯೋಗಿಸುವುದನ್ನು ಕಡಿಮೆಗೊಳಿಸಬೇಕೆಂದು ಶೀರೋಮಣಿ ಅಕಾಲಿದಳ ಮಹಿಳಾನಾಯಕಿ ಜಾಗೀರ್ ಕೌರ್ ಹೇಳಿದ್ದಾರೆ. ಹಿಮಾಚಲ ಪ್ರದೇಶದ ಪಾವೋಂಟ್ ಸಾಹಿಬ್‌ನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಶಾಸಕರು ಮತ್ತು ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರ ಸಹಿತ ಇನ್ನೂರರಷ್ಟು ಮಹಿಳೆಯರನ್ನು ಉದ್ದೇಶಿಸಿ ಮಾತಾಡುತ್ತಿದ್ದಾಗ ಹೀಗೆ ಹೇಳಿದ್ದಾರೆಂದು ವರದಿಯಾಗಿದೆ.
ಉತ್ತಮರಾಜಕಾರಣಿಯಾಗಲು ಮೊದಲು ಮನೆಯ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಬೇಕಾಗಿದೆ. ಈಗಿದೋ ಪತಿಗೆ ಒಂದು ಚಾ ಕೊಡಲು ಹಿಂದೇಟು ಹಾಕುತ್ತಾರೆ. ಮಹಿಳೆಯರು ನೈತಿಕವಾಗಿ ಸಶಕ್ತೀಕರಣಗೊಳ್ಳಬೇಕಾಗಿದೆ. ನೀವು ನಿಮ್ಮ ಊರಿಗೆ ಹೋಗುವಾಗ ವೋಟು ಕೇಳುವುದು ಮಾತ್ರವಲ್ಲ. ಇಂತಹ ಮೌಲ್ಯಗಳನ್ನು ಇತರ ಮಹಿಳೆಯರಿಗೆ ಕಲಿಸಲಿಕ್ಕೂ ಸಿದ್ಧರಾಗಬೇಕು. ಹೆಣ್ಣುಮಕ್ಕಳಿಗೆ ತುಂಬಾ ಸಹನಾಶಕ್ತಿ ಇಲ್ಲದಾಗಿದೆ ಎಂದ ಅವರು ಹೇಳಿದ್ದಾರೆ. ಪತಿಯೊಂದಿಗೆ ಚಿಕ್ಕಪುಟ್ಟ ಸಮಸ್ಯೆಯಾದಾಗಲೂ ಅವರು ಮೊಬೈಲ್‌ಫೋನ್ ತೆಗೆದು ಹೆತ್ತವರಿಗೆ ತಿಳಿಸುತ್ತಿದ್ದಾರೆ. ಹಲವಾರು ಸಂಬಂಧಗಳು ವಿವಾಹವಿಚ್ಛೇದನದಲ್ಲಿ ಕೊನೆಗೊಳ್ಳಲಿಕ್ಕೆ ಬೇರೆ ಯಾವುದೂ ಕಾರಣವಲ್ಲ ಎಂದು ಜಾಗೀರ್‌ಕೌರ್ ಹೇಳಿದ್ದಾರೆ.
2000ದಲ್ಲಿ ಮೃತಳಾದ ಮಗಳು ಹರ್‌ವೀತ್ ಕೌರ್‌ರನ್ನು ಕೊಲೆ ನಡೆಸಲು ಸಂಚು ನಡೆಸಿದ ಕೇಸಿನಲ್ಲಿ ಜಾಗೀರ್ ಕೌರ್‌ರನ್ನುಆರೋಪಿ ಪಟ್ಟಿಯಲ್ಲಿ ಸೇರಿಸಿತ್ತು. ಇದರ ವಿರುದ್ಧ ಅವರುಕಾನೂನು ಹೋರಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.





