Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಈಶ್ವರಮಂಗಲ ದೇವಾಲಯದಲ್ಲಿ ಲಕ್ಷಾಂತರ...

ಈಶ್ವರಮಂಗಲ ದೇವಾಲಯದಲ್ಲಿ ಲಕ್ಷಾಂತರ ರೂ.ಮೌಲ್ಯದ ಸಾಮಗ್ರಿ ಕಳವು

ವಾರ್ತಾಭಾರತಿವಾರ್ತಾಭಾರತಿ9 May 2016 4:48 PM IST
share
ಈಶ್ವರಮಂಗಲ ದೇವಾಲಯದಲ್ಲಿ ಲಕ್ಷಾಂತರ ರೂ.ಮೌಲ್ಯದ ಸಾಮಗ್ರಿ ಕಳವು

ಪುತ್ತೂರು, ಮೇ 9: ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟಿರುವ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದ ಶ್ರೀ ಪಂಚಲಿಂಗೇಶ್ವರ ದೇವಾಲಯಕ್ಕೆ ನುಗ್ಗಿದ ಕಳ್ಳರು ಬೆಳ್ಳಿಯ ವಸ್ತುಗಳು, ದೈವದ ಆರಣಗಳು ಹಾಗೂ ಕಾಣಿಕೆ ಹುಂಡಿಯ ಹಣವನ್ನು ದೋಚಿದ ಘಟನೆ ರವಿವಾರ ರಾತ್ರಿ ಸಂಭವಿಸಿದೆ. ಕಳವಾದ ಸೊತ್ತುಗಳ ಒಟ್ಟು ವೌಲ್ಯ ಸುಮಾರು 3.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಪುತ್ತೂರು ತಾಲೂಕಿನ ಗಡಿ ಪ್ರದೇಶವಾಗಿರುವ ಈಶ್ವರಮಂಗಲ ಪೇಟೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ , ಎರಡು ವರ್ಷಗಳ ಹಿಂದೆಯಷ್ಟೇ ಜೀರ್ಣೋದ್ಧಾರಗೊಂಡು ಪುನರ್‌ಪ್ರತಿಷ್ಠಾ ಬ್ರಹ್ಮಕಲಶ ನೆರವೇರಿರುವ ಶ್ರೀ ಪಂಚಲಿಂಗೇಶ್ವರ ದೇವಾಲಯದಿಂದ ಕಳ್ಳತನ ನಡೆದಿದೆ. ಸೋಮವಾರ ಬೆಳಗ್ಗೆಯಷ್ಟೇ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ದೇವಾಲಯದ ಎದುರು ಭಾಗದ ಬಾಗಿಲಿನ ಬೀಗದ ಕೀ ತುಂಡರಿಸಿ ಒಳನುಗ್ಗಿದ ಕಳ್ಳರು ಗರ್ಭಗುಡಿಯ ಹೆಬ್ಬಾಗಿಲಿಗೆ ಅಳವಡಿಸಲಾಗಿದ್ದ ಬೆಳ್ಳಿಯ ಕವಚಗಳ ಪೈಕಿ ಮೇಲ್ಭಾಗದ ಎರಡು ಬದಿಯ ಹೊದಿಕೆ ಹಾಗೂ ಹೆಬ್ಬಾಗಿನ ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದ ಬೆಳ್ಳಿಯ ಪ್ರಭಾವಳಿಯನ್ನು ಕಳವುಗೈದಿದ್ದಾರೆ. ದೇವಾಲಯದ ಅಂಗಣದಲ್ಲಿ ಅಳವಡಿಸಲಾಗಿದ್ದ ಮೂರು ಕಾಣಿಕೆ ಹುಂಡಿಗಳನ್ನು ದೋಚಿದ್ದಾರೆ. ದೇವಾಲಯದ ಹೊರಂಗಣದ ಬದಿಯಲ್ಲಿರುವ ಪೂಮಾಣಿ-ಕಿನ್ನಿಮಾಣಿ ದೈವದ ಭಂಡಾರ ಕೊಠಡಿಯ ಬಾಗಿಲು ಮುರಿದ ಕಳ್ಳರು ಪೂಮಾಣಿ ಕಿನ್ನಿಮಾಣಿ ದೈವಗಳ ಬೆಳ್ಳಿಯ ಬಿಲ್ಲು-ಬಾಣ ಮತ್ತು ಖಡ್ಗಗಳನ್ನು ದೋಚಿದ್ದಾರೆ. ಪಕ್ಕದಲ್ಲಿರುವ ಹುಲಿಭೂತ ದೈವದ ಭಂಡಾರ ಕೊಠಡಿಯ ಬಾಗಿಲು ಮುರಿಯುವ ಸಾಹಸಕ್ಕೆ ಕಳ್ಳರು ಕೈಹಾಕದೆ ತೆರಳಿದ್ದಾರೆ.

ಪಂಚಲಿಂಗೇಶ್ವರ ದೇವಾಲಯದ ಗರ್ಗುಡಿಯ ಮರದ ಹೆಬ್ಬಾಗಿಲಿಗೆ ಸುಮಾರು 10 ಕೆಜಿ ತೂಕದ ಬೆಳ್ಳಿಯ ಕವಚ ಅಳವಡಿಸಲಾಗಿತ್ತು. ಹೆಬ್ಬಾಗಿಲನ್ನು ದೂಡಿ ಹೊರತೆಗೆದ ಕಳ್ಳರು ಹೆಬ್ಬಾಗಿಲಿನ ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದ ಬೆಳ್ಳಿಯ ಪ್ರಬಾವಳಿ ಮತ್ತು ಎರಡು ಬದಿಯ ಕವಚಗಳು ಸೇರಿದಂತೆ ಸುಮಾರು 3 ಕೆಜಿಯಷ್ಟು ಬೆಳ್ಳಿಯನ್ನು ಮಾತ್ರ ಹೊರತೆಗೆಂುುವಲ್ಲಿ ಯಶಸ್ವಿಯಾಗಿದ್ದು, ಹೆಬ್ಬಾಗಿಲಿನ ಉಳಿದ ಬಾಗಕ್ಕೆ ಅಳವಡಿಸಲಾಗಿದ್ದ ಬೆಳ್ಳಿಯ ಕವಚವನ್ನು ಹೊರತೆಗೆದು ದೋಚಲು ವಿಫಲ ಯತ್ನ ನಡೆಸಿದ್ದಾರೆ. ಆದರೆ ದೇವಾಲಯದ ಗರ್ಗುಡಿಯೊಳಗಿನ ದೇವರ ಮೂರ್ತಿಗೆ ಅಳವಡಿಸಲಾಗಿದ್ದ ಆಭರಣಗಳನ್ನು ಮುಟ್ಟುವ ಪ್ರಯತ್ನ ನಡೆಸಿಲ್ಲ. ಕಳವಾಗಿರುವ ಕಾಣಿಕೆ ಹುಂಡಿಗಳಲ್ಲಿ ಸುಮಾರು 45 ಸಾವಿರ ರೂ. ಇದ್ದಿರಬಹುದೆಂದು ಅಂದಾಜಿಸಲಾಗಿದೆ. ಕಳವಾದ ಸೊತ್ತುಗಳ ಒಟ್ಟು ವೌಲ್ಯ 3.50 ಲಕ್ಷ ರೂ. ಎಂದು ತಿಳಿದು ಬಂದಿದೆ.

ದೇವಾಲಯದ ಆಡಳಿತಾಧಿಕಾರಿಯಾಗಿರುವ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಅವರು ಘಟನೆಯ ಕುರಿತು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅಡಿಶನಲ್ ಎಸ್ಪಿ ವಿನ್ಸೆಂಟ್ ಶಾಂತಕುಮಾರ್, ಎಎಸ್ಪಿರಿಷ್ಯಂತ್, ಪುತ್ತೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆೆಕ್ಟರ್ ಅನಿಲ್.ಎಸ್.ಕುಲಕರ್ಣಿ, ಸಂಪ್ಯ ಠಾಣೆಯ ಪ್ರಬಾರ ಎಸ್‌ಐ ಚೆಲುವಯ್ಯ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ.

ಉಪಯೋಗಕ್ಕೆ ಬಾರದ ಸಿಸಿ ಕ್ಯಾಮರ..

ಪಂಚಲಿಂಗೇಶ್ವರ ದೇವಾಲಯದ ಒಳಗಡೆ ಎರಡು ಹಾಗೂ ಹೊರಗಡೆ ಒಂದು ಸೇರಿದಂತೆ ದೇವಾಲಯದ ಭದ್ರತೆಗೆ ಸಂಬಂಧಿಸಿ ಮೂರು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಹಿಂದಿನ ವ್ಯವಸ್ಥಾಪನಾ ಸಮಿತಿಯ ಆಡಳಿತಾವಧಿಯಲ್ಲಿ ಈ ಕೆಲಸ ನಡೆದಿತ್ತು. ಆದರೆ ದೇವಾಲಯದ ಒಳಗಡೆ ಅಳವಡಿಸಲಾಗಿದ್ದ ಎರಡೂ ಸಿಸಿ ಕ್ಯಾಮರಾಗಳು ಕೆಟ್ಟು ಹೋಗಿ ಮೂರು ತಿಂಗಳು ಕಳೆದು ಹೋಗಿದೆ ಎಂದು ತಿಳಿದು ಬಂದಿದೆ. ಹೊರಗಡೆ ಅಳವಡಿಸಲಾಗಿರುವ ಸಿಸಿ ಕ್ಯಾಮರಾ ಕೂಡ ಸರಿಯಾಗಿಲ್ಲ ಎನ್ನಲಾಗಿದ್ದು, ಕಳ್ಳತನದ ಚಿತ್ರಣ ಅದರಲ್ಲಿ ಸೆರೆಯಾಗಿಲ್ಲ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ತನಿಖೆಗಾಗಿ ಪೊಲೀಸರು ಅದನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ.

ಕಾಲುದಾರಿಯಾಗಿ ಬಂದ ಕಳ್ಳರು

ಘಟನಾ ಸ್ಥಳಕ್ಕೆ ಕರೆಸಿಕೊಂಡಿದ್ದ ಶ್ವಾನದಳ ದೇವಾಲಯದ ಗರ್ಭಗುಡಿಯ ಬಳಿಯಿಂದ ಎದುರು ಬಾಗಿಲಿನ ಮೂಲಕ ದೇವಾಲಯಕ್ಕೆ ಸುತ್ತು ಹೊಡೆದು ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಕಾಲು ದಾರಿಯ ಮೂಲಕ ಬೆಡಿಗದ್ದೆಯ ಬಳಿಯಿಂದ ಕಾಲು ದಾರಿಯಾಗಿ ಮುಂದುವರಿದಿದೆ. ಕಳ್ಳರು ಈ ದಾರಿಯಾಗಿ ನಡೆದುಕೊಂಡು ಹೋಗಿ ರಸ್ತೆ ಸಂಪರ್ಕಿಸಿ ಮುಂದೆ ವಾಹನದಲ್ಲಿ ತೆರಳಿರುವ ಸಾಧ್ಯತೆಯ ಬಗ್ಗೆ ಶಂಕಿಸಲಾಗಿದೆ. ಈ ಕಳವು ಪ್ರಕರಣದಲ್ಲಿ ನಾಲ್ಕೈದು ಮಂದಿ ಬಾಗಿಯಾಗಿರುವ ಸಾಧ್ಯತೆಗಳಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ದೇವಾಲಯದ ಸಿಸಿ ಕ್ಯಾಮರಾ ಕೆಟ್ಟು ಹೋಗಿರುವ ಸಂದಭರ್ದಲ್ಲಿಯೇ ಈ ಕಳವು ನಡೆದಿರುವುದರಿಂದ ದೇವಾಲಯದ ಬಗ್ಗೆ ಸ್ಪಷ್ಟ ಮಾಹಿತಿ ಇರುವ ಮಂದಿ ಇದರಲ್ಲಿ ಶಾಮೀಲಾಗಿರುವ ಸಾಧ್ಯತೆ ಹೆಚ್ಚಾಗಿದೆ.

ಇಬ್ಬರು ಪೊಲೀಸ್ ವಶಕ್ಕೆ?

ರವಿವಾರ ರಾತ್ರಿ ಈಶ್ವರ ಮಂಗಲ ಬಸ್ ನಿಲ್ದಾಣದ ಬಳಿ ತಿರುಗಾಡುತ್ತಿದ್ದ, ಹಿಂದಿ ಮಾತನಾಡುತ್ತಿದ್ದ ಉತ್ತರ ಭಾರತ ಮೂಲದ ಇಬ್ಬರನ್ನು ಪೊಲೀಸರು ತನಿಖೆಯ ದೃಷ್ಟಿಯಿಂದ ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ. ಪಂಚಲಿಂಗೇಶ್ವರ ದೇವಾಲಯದಿಂದ ಕೆಲವು ವರ್ಷಗಳ ಹಿಂದೊಮ್ಮೆ ಸಣ್ಣ ಪ್ರಮಾಣದ ಕಳವು ನಡೆದಿತ್ತು. ಕಳವು ನಡೆದು ಕೆಲ ಸಮಯಗಳ ಬಳಿಕ ಗ್ರಾಮಸ್ಥನೇ ಆಗಿದ್ದ ಕಳ್ಳ ಸಿಕ್ಕಿ ಬಿದ್ದಿದ್ದ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X