ತನ್ನನ್ನು ಮರೆತು ಬಿಡಿ, ನೀವು ಅಳುವುದರಿಂದ ನನ್ನ ಬಿಡುಗಡೆಯಾಗುವುದಿಲ್ಲ : ತಾಯಿಗೆ ಹಾರ್ದಿಕ್ ಪಟೇಲ್ ಪತ್ರ

ಅಹ್ಮದಾಬಾದ್, ಮೇ 9: ಗುಜಾರಾತ್ ಪಾಟಿದಾರ್ ಮೀಸಲಾತಿ ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಮದರ್ಸ್‌ಡೇಯಂದು ತನ್ನ ತಾಯಿಗೆ ಬರೆದ ಪತ್ರದಲ್ಲಿ ತನ್ನನ್ನು ಶಹೀದ್(ಹುತಾತ್ಮ) ಎಂದು ತಿಳಿಯಿರಿ ಎಂದು ಹೇಳಿಕೊಂಡಿದ್ದಾರೆ. ಹಾರ್ದಿಕ್ ಪಟೇಲ್ ಇದೇ ಪತ್ರದಲ್ಲಿ ಮನೆಯವರಿಗೂ ತನ್ನನ್ನು ಮರೆತು ಬಿಡಲು ಸೂಚಿಸಿದ್ದಾರೆ. ಪಾಟಿದಾರ್ ಅನಾಮತ್ ಆಂದೋಲನ ಸಮಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಎರಡು ಪುಟಗಳ ಈ ಪತ್ರವನ್ನು ಪೋಸ್ಟ್ ಮಾಡಿದೆ ಎಂದು ವರದಿಯಾಗಿದೆ. ಹಾರ್ದಿಕ್ ಹೀಗೆ ಬರೆದಿದ್ದಾರೆ" ಹೈಕೋರ್ಟ್ ನನ್ನ ಜಾಮೀನು ಅರ್ಜಿಯನ್ನು ಒಂದು ತಿಂಗಳ ಬಳಿಕ ವಿಚಾರಣೆಗೆತ್ತಿಕೊಳ್ಳಲಿದೆೆ ಎಂದು ತಿಳಿದು ಅಮ್ಮ ಅಳತೊಡಗಿದ್ದಾರೆ ಎಂದು ನನಗೆ ತಿಳಿಯಿತು. ಅಪ್ಪಾ, ಅಮ್ಮನನ್ನು ಸಮಾಧಾನಿಸಿ. ಅವರು ಅಳುವುದರಿಂದ ನನಗೆ ಬಿಡುಗಡೆಯಾಗದು. ಅಳುವುದರಿಂದ ದುಃಖ ಕಡಿಮೆ ಯಾಗಬಹುದು. ನಮಗೆ ಅನ್ಯಾಯದ ವಿರುದ್ಧ ಹೋರಾಡಲೇ ಬೇಕಾಗಿದೆ"
ಪತ್ರದಲ್ಲಿ ತನ್ನನ್ನು ಸ್ವಯಂ ಅವರು ಸೈನಿಕನಿಗೆ ಹೋಲಿಸಿಕೊಂಡಿದ್ದಾರೆ. ಹಾರ್ದಿಕ್‌ರು"ಸಮಾಜ ಸೇವೆಯ ಮೂಲಕ ದೇಶ ನಿರ್ಮಾಣ ಮಾಡುವುದು ಸೇನೆಯಲ್ಲಿ ಸೇವೆ ನಡೆಸುವ ರೀತಿಯೇ ಆಗಿದೆ. ನಾನು ನಿಮ್ಮೊಂದಿಗೆ ವಿನಂತಿಸುತ್ತಿದ್ದೇನೆ, ನನ್ನನ್ನು ಸಂಪೂರ್ಣ ಮರೆತು ಬಿಡಿ. ಈ ಅನ್ಯಾಯ ಮತ್ತು ನಿರಂಕುಶತೆಯ ಎದುರು ತಲೆತಗ್ಗಿಸಲು ನಾನು ಬಯಸುವುದಿಲ್ಲ" ಅದೇ ರೀತಿ ಪತ್ರದಲ್ಲಿ ತನ್ನ ತಂದೆ ಮುಖ್ಯಮಂತ್ರಿ ಆನಂದಿ ಬೆನ್ ಪಾಟಿಲ್‌ರಿಗಾಗಿ ಪ್ರಚಾರ ಮಾಡುತ್ತಿದ್ದುದನ್ನು ಕೂಡಾ ಹಾರ್ದಿಕ್ ಪಾಟೀಲ್ ಸ್ಮರಿಸಿಕೊಂಡಿದ್ದಾರೆ.
" ಅಪ್ಪಾ ಒಂದು ಮಾತು ಸ್ಪಷ್ಟವಾಗಿದೆ. ನಾವು ಬಿಜೆಪಿಗೆ ತಲೆ ಬಗ್ಗಿಸೆವು ಅವರನ್ನು ನಾವು ಹೊಗಳಲಾರೆವು. ರಾಜ್ಯದ ಜನರು ಇವರ ಅನ್ಯಾಯವನ್ನು ಸಹಿಸುತ್ತಿದ್ದಾರೆ. ಯಾಕೆಂದರೆ ಅವರು ವ್ಯಾಪಾರಿಗಳು .ಆದರೆ ನಾವು ರೈತರು. ಮತ್ತು ಹೋರಾಟ ನಮ್ಮ ರಕ್ತದಲ್ಲಿದೆ.’’ ಎಂದ ಪಾಟಿದಾರ್‌ನಾಯಕ ಹಾರ್ದಿಕ್ ಜೊತೆಗೆ ನ್ಯಾಯವ್ಯವಸ್ಥೆಯಲ್ಲಿ ಬಹಳ ಭ್ರಷ್ಟಾಚಾರ ಇದೆಯೆಂದು ಆರೋಪಿಸಿರುವುದಾಗಿ ವರದಿಯಾಗಿದೆ.







