ಮುಲ್ಕಿ: ಅಲ್ ಬದ್ರಿಯಾ ಯೂತ್ ಅಸೋಸಿಯೇಶನ್‌ನ ಬೆಳ್ಳಿಹಬ್ಬದ ಸಮಾರೋಪ

ಮುಲ್ಕಿ, ಮೇ 9: ಬದ್ರಿಯಾ ಜುಮಾ ಮಸೀದಿಯ ಅಧೀನ ಸಂಸ್ಥೆ ಅಲ್ ಬದ್ರಿಯಾ ಯೂತ್ ಅಸೋಸಿಯೇಶನ್ ಸಾಗ್‌ನ ಬೆಳ್ಳಿಹಬ್ಬದ ಸಮಾರೋಪ ಸಮಾರಂಭ ಹಾಗೂ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧಾಕೂಟ ಮಸೀದಿಯ ವಠಾರದಲ್ಲಿ ಜರಗಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕದಿಕೆ ಕೇಂದ್ರ ಜುಮಾ ಮಸೀದಿಯ ಖತೀಬ್ ಕೆ.ಎಚ್.ಅಬ್ದುರ್ರಹ್ಮಾನ್ ಫೈಝಿ ವಹಿಸಿದ್ದರು. ಸಾಗ್ ಬದ್ರಿಯಾ ಜುಮಾ ಮಸೀದಿಯ ಖದೀಬ್ ಇ.ಎಂ. ಅಬ್ದುಲ್ಲಾ ಮದನಿ ಸಮಾರಂಭವನ್ನು ಉದ್ಘಾಟಿಸಿದರು. ಬೊಳ್ಳೂರು ಜುಮಾ ಜುಮಾ ಮಸೀದಿಯ ಖತೀಬ್ ಶೈಖುನಾ ಅಲ್ ಹಾಜಿ ಮುಹಮ್ಮದ್ ಅಝ್‌ಹರ್ ಫೈಝಿ ದುವಾ ಆಶೀರ್ವನಗೈದರು.
ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಮೀನುಗಾರಿಕೆ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ, ಮಾಜಿ ಸಚಿವ ಅಮರನಾಥ ಶೆಟ್ಟಿ, ಜಿಪಂ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಪಂ ಸದಸ್ಯ ಜೀವನ್ ಪ್ರಕಾಶ್, ಉಡುಪಿ ವಕ್ಫ್ ಸಮಿತಿ ಸದಸ್ಯ ಗುಲಾಮ್ ಮುಹಮ್ಮದ್, ಉದ್ಯಮಿ ಹಾಜಿ ಮುಮ್ತಾಝ್ ಅಲಿ ಕೃಷ್ಣಾಪುರ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸಂತ್ ಬೆರ್ಣಾರ್ಡ್, ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುರ್ರಹ್ಮಾನ್ ಸಾಗ್, ಅಬ್ದುರ್ರಝಾಕ್ ಮೂಡುತೋಟ ಸಾಗ್, ಇಸ್ಮಾಯೀಲ್ ದಾರಿಮಿ, ಕೆ.ಎಂ. ಹಬೀನುರ್ರಹ್ಮಾನ್, ಹನೀಫ್ ದಾರಿಮಿ, ಅಬ್ದುಲ್ ಹಮೀದ್ ಮುಸ್ಲಿಯಾರ್, ಅಬ್ದುರ್ರಹ್ಮಾನ್ ಮದನಿ ಮೊದಲಾದವರು ಉಪಸ್ಥಿತರಿದ್ದರು.







