ಉತ್ತರ ಕೊರಿಯ ಆಡಳಿತ ಪಕ್ಷದ ಅಧ್ಯಕ್ಷನಾಗಿ ಕಿಮ್ ಜಾಂಗ್ ಉನ್

ಪ್ಯಾಂಗ್‌ಯಾಂಗ್, ಮೇ 9: ಉತ್ತರ ಕೊರಿಯದ ಆಡಳಿತ ಪಕ್ಷದ ಉನ್ನತ ಮಟ್ಟದ ಸಭೆಯೊಂದರಲ್ಲಿ ಸೋಮವಾರ ಆ ದೇಶದ ನಾಯಕ ಕಿಮ್ ಜಾಂಗ್-ಉನ್‌ರಿಗೆ ‘‘ವರ್ಕರ್ಸ್ ಪಾರ್ಟಿಯ ಅಧ್ಯಕ್ಷ’’ ಎಂಬ ನೂತನ ಹುದ್ದೆಯನ್ನು ನೀಡಲಾಯಿತು.
ದೇಶದ ಸರಕಾರಿ ಮುಖ್ಯಸ್ಥ ಕಿಮ್ ಯಾಂಗ್-ನಾಮ್ ಈ ಹುದ್ದೆಯನ್ನು ಘೋಷಿಸಿದರು. ಇಂಥ ಹುದ್ದೆಯೊಂದನ್ನು ನೀಡಿರುವುದು 36 ವರ್ಷಗಳಲ್ಲಿ ಮೊದಲ ಬಾರಿಯಾಗಿದೆ.
ಪಕ್ಷದ ಕಾಂಗ್ರೆಸ್‌ನಲ್ಲಿ ನಡೆದ ಸಮಾರಂಭದಲ್ಲಿ ಬಿರುದು ಪ್ರದಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಕಿರು ಅವಧಿಗೆ ವಿದೇಶಿ ಪತ್ರಕರ್ತರು ವೀಕ್ಷಿಸಿದರು.
1948ರಲ್ಲಿ ಉತ್ತರ ಕೊರಿಯ ಸ್ಥಾಪನೆಯಾದಂದಿನಿಂದ ಅದನ್ನು ಆಳಿಕೊಂಡು ಬರುತ್ತಿರುವ ಮನೆತನದ ಮೂರನೆ ತಲೆಮಾರು ಕಿಮ್ ಜಾಂಗ್-ಉನ್ ಆಗಿದ್ದಾರೆ. ಇದಕ್ಕೂ ಮೊದಲು ಅವರು ಪಕ್ಷದ ಪ್ರಥಮ ಕಾರ್ಯದರ್ಶಿಯಾಗಿದ್ದರು.
ಈ ಹುದ್ದೆಯು ದೇಶದ ಮೇಲಿನ ಅವರ ಹಿಡಿತವನ್ನು ಇನ್ನಷ್ಟು ಬಲಪಡಿಸಲಿದೆ. ತಂದೆ ಕಿಮ್ ಜಾಂಗ್-ಇಲ್‌ರ ಮರಣದ ಬಳಿಕ 2011 ಡಿಸೆಂಬರ್‌ನಲ್ಲಿ ಯುವ ನಾಯಕ ಅಧಿಕಾರಕ್ಕೆ ಬಂದಿದ್ದಾರೆ
Next Story





