ಉ. ಕೊರಿಯ: ಬಿಬಿಸಿ ಪತ್ರಕರ್ತನ ಬಂಧನ, ಗಡಿಪಾರು

ಸಿಯೋಲ್ (ದಕ್ಷಿಣ ಕೊರಿಯ), ಮೇ 9: ಉತ್ತರ ಕೊರಿಯದ ಆಡಳಿತಾರೂಢ ಪಕ್ಷದ ಬೃಹತ್ ಸಮಾವೇಶ ಕುರಿತ ವರದಿಯಿಂದ ಅತೃಪ್ತಿಗೊಂಡಿರುವ ಸರಕಾರವು, ಆ ದೇಶದ ಬಿಬಿಸಿ ವರದಿಗಾರನನ್ನು ಬಂಧಿಸಿ ಎಂಟು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿ ಬಳಿಕ ಗಡಿಪಾರು ಮಾಡಿದೆ ಎಂದು ಬ್ರಿಟಿಶ್ ಟಿವಿ ಜಾಲ ಸೋಮವಾರ ಹೇಳಿದೆ.
ಉತ್ತರ ಕೊರಿಯದಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಪತ್ರಕರ್ತರು ಯಾವಾಗಲೂ ಒತ್ತಡದಲ್ಲೇ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಯನ್ನು ಹೊಂದಿದ್ದಾರೆ. ನಿರ್ದಿಷ್ಟ ವರದಿಗಳು ಉತ್ತರ ಕೊರಿಯದ ನಾಯಕರಿಗೆ ತೃಪ್ತಿ ತಾರದ ಹಿನ್ನೆಲೆಯಲ್ಲಿ ಹಲವಾರು ಪತ್ರಕರ್ತರನ್ನು ಮತ್ತೊಮ್ಮೆ ದೇಶಕ್ಕೆ ಮರಳುವುದರಿಂದ ನಿರ್ಬಂಧಿಸಲಾಗಿತ್ತು. ಆದರೆ, ವರದಿಗಾರರೊಬ್ಬರನ್ನು ಬಂಧಿಸಿ ಉಚ್ಚಾಟಿಸಿರುವುದು ಅಭೂತಪೂರ್ವ ಕ್ರಮವಾಗಿದೆ.
ಬಿಬಿಸಿ ವರದಿಗಾರ ರೂಪರ್ಟ್ ವಿಂಗ್‌ಫೀಲ್ಡ್ ಹೇಯಸ್ ಇತರ ಇಬ್ಬರು ಬಿಬಿಸಿ ಸಿಬ್ಬಂದಿಯೊಂದಿಗೆ ಶುಕ್ರವಾರ ಪ್ಯಾಂಗ್‌ಯಾಂಗ್ ವಿಮಾನ ನಿಲ್ದಾಣದಲ್ಲಿ ವಿಮಾನವೊಂದನ್ನು ಹತ್ತುವ ಸ್ವಲ್ಪ ಹೊತ್ತಿನ ಮೊದಲು ಬಂಧಿಸಲಾಯಿತು.
ಅವರನ್ನು ಅವರನ್ನು ವರದಿಯೊಂದಕ್ಕೆ ಸಂಬಂಧಿಸಿ ಎಂಟು ಗಂಟೆಗಳ ಕಾಲ ಪ್ರಶ್ನಿಸಲಾಯಿತು ಎಂದು ಬಿಬಿಸಿ ಹೇಳಿದೆ.





