ಕಾಣಿಯೂರು: ನವೀಕೃತ ನೂರುಲ್ ಇಸ್ಲಾಂ ಮದರಸ ಉದ್ಘಾಟನೆ
.jpg)
ಕಡಬ, ಮೇ 9. ಕಾಣಿಯೂರು ಪುಣ್ಚತ್ತಾರು ಸಮೀಪದ ಮಾಲೆಂಗ್ರಿ ಎಂಬಲ್ಲಿ ನವೀಕೃತ ನೂರುಲ್ ಇಸ್ಲಾಂ ಮದರಸ ಉದ್ಘಾಟನೆ ಹಾಗೂ ಸ್ವಲಾತ್ ವಾರ್ಷಿಕೋತ್ಸವವು ಸೋಮವಾರ ರಾತ್ರಿ ನಡೆಯಿತು.
ಅಸೈಯ್ಯದ್ ಝೈನುಲ್ ಆಬಿದೀನ್ ತಂಙಳ್ ಎಣ್ಮೂರು ಮದರಸವನ್ನು ಉದ್ಘಾಟಿಸಿ ಸ್ವಲಾತ್‌ಗೆ ನೇತೃತ್ವ ನೀಡಿದರು.
ಬೈತಡ್ಕ ಮುದರ್ರಿಸ್ ಇಬ್ರಾಹೀಂ ಫೈಝಿ ದುಆ ನೆರವೇರಿಸಿದರು. ಕಾರ್ಯಕ್ರಮವನ್ನು ಉಮ್ಮರ್ ಮುಸ್ಲಿಯಾರ್ ಮರ್ಧಾಳ ಉದ್ಘಾಟಿಸಿದರು. ಅಶ್ರಫ್ ಸಅದಿ ಮಲ್ಲೂರು ಮುಖ್ಯ ಪ್ರಭಾಷಣಗೈದರು. ಸಿದ್ದೀಕ್ ಸಖಾಫಿ ಮಾಲೆಂಗ್ರಿ ಹಾಗೂ ಹಸನ್ ಝುಹುರಿ ಪುಣ್ಚತ್ತಾರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಮುಹಮ್ಮದ್ ಸಖಾಫಿ ಸಮಹಾದಿ, ರಮಳಾನ್, ಹಮೀದ್ ಹಾಜಿ, ಕೆ.ಎಂ.ಎಚ್ ಝುಹುರಿ ಕೊಂಬಾಳಿ, ಇಬ್ರಾಹೀಂ ಅಂಜದಿ, ಫಾರೂಕ್ ಹನೀಫೀ ಕಲ್ಪಡ, ಯೂಸುಫ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು. ಬಶೀರ್ ಸಖಾಫಿ ಸುಳ್ಯ ಸ್ವಾಗತಿಸಿದರು.
Next Story





