ಬ್ರೆಝಿಲ್: ಯುವ ಫುಟ್ಬಾಲ್ ಆಟಗಾರ ನಿಧನ

ರಿಯೊ ಡಿಜನೈರೊ, ಮೇ 9: ಬ್ರೆಝಿಲ್‌ನಲ್ಲಿ ನಡೆದ ಫುಟ್ಬಾಲ್ ಪಂದ್ಯದಲ್ಲಿ ಆಡಿದ್ದ 26ರ ಹರೆಯದ ಫುಟ್ಬಾಲ್ ಆಟಗಾರ ಬೆರ್ನಾಡೊ ರಿಬೆರೊ ಎಂಬಾತ ಜ್ವರದಿಂದಾಗಿ ಮೃತಪಟ್ಟಿರುವುದಾಗಿ ಫ್ರಿಲ್‌ಬರ್ಗುನೆಸ್ ಕ್ಲಬ್ ಹೇಳಿದೆ.
ಶನಿವಾರ ನಡೆದ ಅಮೆಚೂರ್ ಪಂದ್ಯದಲ್ಲಿ ಫ್ರಿಲ್‌ಬರ್ಗುನೆಸ್ ಕ್ಲಬ್ ಪರ ಆಡುತ್ತಿದ್ದಾಗಲೇ ರಿಬೆರೊಗೆ ಜ್ವರ ಕಾಣಿಸಿಕೊಂಡಿತ್ತು. ಪಂದ್ಯದ ದ್ವಿತೀಯಾರ್ಧದಲ್ಲಿ ರಿಬೆರೊ ಬದಲಿಗೆ ಬೇರೊಬ್ಬ ಆಟಗಾರ ಪಂದ್ಯದಲ್ಲಿ ಆಡಿದ್ದ. ರಿಬೆರೊಗೆ ಮೈದಾನದೊಳಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಅವರು ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ರಿಬೆರೊ ಸಾವಿಗೆ ನಿಖರವಾದ ಕಾರಣ ಏನೆಂದು ಗೊತ್ತಾಗಿಲ್ಲ. ‘ದಿಢೀರ್ ಜ್ವರ’ದಿಂದಾಗಿ ಅವರು ಮೃತಪಟ್ಟಿರಬಹುದು ಎಂದು ಮೂಲಗಳು ತಿಳಿಸಿವೆ.
ರಿಬೆರೊ ಈ ವರ್ಷಾರಂಭದಲ್ಲಿ ಬ್ರೆಝಿಲ್‌ನ ಎರಡನೆ ಪ್ರಮುಖ ಟೂರ್ನಿ ರಿಯೊ ಡಿ ಜನೈರೊ ಪ್ರಾಂತೀಯ ಚಾಂಪಿಯನ್‌ಶಿಪ್‌ನಲ್ಲಿ ಆಡಿದ್ದರು.
Next Story





