ಭಡ್ತಿ ಹೊಂದಿದ ಆರೋಗ್ಯ ಸಹಾಯಕಿಗೆ ವಿದಾಯ

ಕಾರ್ಕಳ, ಮೇ 9: ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 28 ವರ್ಷಗಳಿಂದ ಕಿರಿಯ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿ ಹಿರಿಯ ಆರೋಗ್ಯ ಸಹಾಯಕಿಯಾಗಿ ಡ್ತಿ ಹೊಂದಿದ ಅನ್ನಾ ಕುಟ್ಟಿ ಪಿ.ಜೆ.ರಿಗೆ ವಿದಾಯ ಕಾರ್ಯಕ್ರಮ ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಅನ್ನಾ ಕುಟ್ಟಿ ಪಿ.ಜೆ. ಅವರನ್ನು ಸ್ಮರಣಿಕೆ ಹಾಗೂ ಚಿನ್ನದ ಉಂಗುರ ನೀಡಿ ಗೌರವಿಸಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಯಶೋಧರ ಎಂ. ಅಧ್ಯಕ್ಷತೆ ವಹಿಸಿದ್ದರು. ಪುರಸಭೆಯ ಹಿರಿಯ ಆರೋಗ್ಯ ಪರವೀಕ್ಷಕ ಎಂ.ಸುಂದರ ಪೂಜಾರಿ, ಸಿಬ್ಬಂದಿಯಾದ ತಾರಾನಾಥ್, ವಿನಯಾ, ಶ್ಯಾಮಲಾ, ಸಿದ್ಧೇಶ್, ಜ್ಯೋತಿ ಉಪಸ್ಥಿತರಿದ್ದರು.
ಸ್ಮಿತಾ ಸ್ವಾಗತಿಸಿದರು. ನರಸಿಂಹ ಕಿಣಿ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಲತಾ ಜೆ. ವಂದಿಸಿದರು.
Next Story





