ಕಾರ್ಕಳ: ದೂರವಾಣಿ ಕಚೇರಿಯಲ್ಲಿ ಬೀಳ್ಕೊಡುಗೆ
ಕಾರ್ಕಳ, ಮೇ : ಸ್ಥಳೀಯ ದೂರವಾಣಿ ವಿಭಾಗದಲ್ಲಿ ಆರೂವರೆ ವರ್ಷಗಳಿಂದ ಉಪಮಂಡಲ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಸ್ವಇಚ್ಛೆಯಿಂದ ಹುಬ್ಬಳ್ಳಿಗೆ ವರ್ಗಾವಣೆಯಾದ ಲಕ್ಷ್ಮಣ್ ಎನ್.ಕಲ್ಲಿಮನಿ ಹಾಗೂ ಕಾರ್ಕಳ ವಿಭಾಗದಿಂದ ಎಜಿಎಂ ಆಗಿ ಭಡ್ತಿ ಹೊಂದಿ ಸುಳ್ಯಕ್ಕೆ ತೆರಳುತ್ತಿರುವ ಎಚ್. ದಿವಾಕರ ರಾವ್‌ರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಕಳ ದೂರವಾಣಿ ಮನೋರಂಜನಾ ಕೂಟದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಭಾಗೀಯ ಇಂಜಿನಿಯರ್ ಎಚ್.ಸತ್ಯನಾರಾಯಣ ಉಪಾಧ್ಯ ಸ್ಮರಣಿಕೆ ನೀಡಿ ಗೌರವಿಸಿದರು.
ಉಪಮಂಡಲ ಅಧಿಕಾರಿಗಳಾದ ಯಶೋಧ ಆರ್.ಭಟ್, ವೆಂಕಟರಮಣ, ಸಹೋದ್ಯೋಗಿಗಳಾದ ಗೋಪಾಲ ಪೂಜಾರಿ, ಶಿವರಾಮ ಸಫಳಿಗ, ಹಿತೇಶ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ಕೆ. ನಂಬಿಯಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗೋಪಾಲ ಪೂಜಾರಿ ವಂದಿಸಿದರು.
Next Story





