ಗೋವಾ: ನಾಳೆ ಮಳೆಯಾಗುವ ಸಾಧ್ಯತೆ
ಪಣಜಿ,ಮೇ 9: ಗೋವಾದಲ್ಲಿ ಮೇ 11ರಂದು ಅಲ್ಲಲ್ಲಿ ಮಳೆ ಅಥವಾ ಗುಡುಗು-ಸಿಡಿಲಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಸೋಮವಾರ ದೈನಂದಿನ ಹವಾಮಾನ ವರದಿಯಲ್ಲಿ ತಿಳಿಸಿದೆ.
ವಾರದ ಇತರ ದಿನಗಳಲ್ಲಿ ಒಣಹವೆಯಿರಲಿದೆ ಎಂದು ಅದು ಹೇಳಿದೆ.
ಗೋವಾದಲ್ಲಿ ಸೋಮವಾರ 35.2 ಡಿ.ಸೆ.ಗರಿಷ್ಠ ತಾಪಮಾನ ದಾಖಲಾಗಿದ್ದು,ಇದು ರವಿವಾರದ ತಾಪಮಾನಕ್ಕಿಂತ 0.3 ಡಿ.ಸೆ.ಅಧಿಕವಾಗಿದೆ.ರಾಜ್ಯದಲ್ಲಿ ತೇವಾಂಶ ಶೇ.71ರಷ್ಟಿದೆ ಎಂದು ಇಲಾಖೆಯು ತಿಳಿಸಿದೆ. ಗೋವಾದಲ್ಲಿ ಪ್ರತಿವರ್ಷ ಜೂನ್ ಮೊದಲ ವಾರದಲ್ಲಿ ನೈಋತ್ಯ ಮುಂಗಾರು ಕಾಲಿರಿಸುತ್ತದೆ.
Next Story





