ಬಂಟ್ವಾಳ ಕಾಮಾಜೆಯಲ್ಲಿ ಬೆಂಕಿ ಆಕಸ್ಮಿಕ: ಎಂಟು ಎಕರೆ ಕಂಗು, ತೆಂಗು, ಮರ ಗಿಡ ನಾಶ

ಬಂಟ್ವಾಳ, ಮೇ 9: ಆಕಸ್ಮಿಕ ಕಾಡ್ಗಿಚ್ಚಿನಿಂದ ಜನ ವಸತಿ ಪ್ರದೇಶದಲ್ಲಿ ತೆಂಗು, ಕಂಗು ತೋಟ ಸೇರಿದಂತೆ ಸುಮಾರು 8 ಎಕರೆ ಪ್ರದೇಶದ ಗಿಡ ಮರಗಳು ಸುಟ್ಟು ಕರಕಲಾದ ಘಟನೆ ಸೋಮವಾರ ಮಧ್ಯಾಹ್ನ ಬಿ ಮೂಡ ಗ್ರಾಮದ ಕಾಮಾಜೆಯಲ್ಲಿ ನಡೆದಿದೆ. ಇಲ್ಲಿನ ದಿ. ಪಿಳ್ಳೆ ಎಂಬವರಿಗೆ ಸೇರಿದ 8 ಎಕರೆ ಜಾಗದಲ್ಲಿ ಈ ಅವಘಡ ನಡೆದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮಧ್ಯಾಹ್ನ ಸುಡು ಬಿಸಿಲಿನ ವೇಳೆಯಲ್ಲೇ ಬೆಂಕಿ ಕಾಣಿಸಿಕೊಂಡಿದ್ದು, ಗಾಳಿಯ ತೀವ್ರತೆಗೆ ಪರಿಸರವನ್ನು ಆವರಿಸಿಕೊಂಡಿದೆ. ಘಟನೆಯಿಂದ ಅಪಾರ ಪ್ರಮಾಣದ ಕೃಷಿ ಮತ್ತು ಕಾಡು ನಾಶವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಬಂಟ್ವಾಳ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬಂಟ್ವಾಳ ಪುರಸಭೆ ಮತ್ತು ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Next Story





