ಸುಳ್ಯ: ಮಳೆಗಾಗಿ ವಿಶೇಷ ಪ್ರಾರ್ಥನೆ

ಸುಳ್ಯ, ಮೇ 10: ಭಾರತೀಯ ಜನತಾ ಪಾರ್ಟಿ ಸುಳ್ಯ ನಗರ ಸಮಿತಿಯ ವತಿಯಿಂದ ನಗರದ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಮಳೆಗಾಗಿ ವಿಶೇಷ ಪ್ರಾರ್ಥನೆಯನ್ನು ಗ್ರಾಮ ದೇವಸ್ಥಾನ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಸಲಾಯಿತು.
ದೇವಸ್ಥಾನದ ಅರ್ಚಕ ಗಣೇಶಕೃಷ್ಣ ದೀಕ್ಷಿತ್ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಎಸ್. ಅಂಗಾರ, ನಗರ ಬಿಜೆಪಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಪ್ರಧಾನ ಕಾರ್ಯದರ್ಶಿ ಹರೀಶ್ ಬೂಡುಪನ್ನೆ, ಕಾರ್ಯದರ್ಶಿ ನವೀನ ಕುದ್ಪಾಜೆ, ನಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಪಕ್ಷದ ಪ್ರಮುಖರಾದ ಪಿ.ಕೆ. ಉಮೇಶ್, ಎನ್.ಎ. ರಾಮಚಂದ್ರ, ನಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ನಪಂ ಸದಸ್ಯರಾದ ಗಿರೀಶ್ ಕಲ್ಲಗದ್ದೆ, ಗೋಪಾಲ ನಡುಬೈಲು, ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು.
Next Story





