ಹೈಕೋರ್ಟ್‌ಗಳ ನ್ಯಾಯಾಧೀಶರ ವರ್ಗಾವರ್ಗಿ

ಹೊಸದಿಲ್ಲಿ,ಮೇ.10: ಎರಡು ಉಚ್ಚನಾಯಾಲಯಗಳ ಇಬ್ಬರು ಮುಖ್ಯ ನ್ಯಾಯಾಧೀಶರು ಮತ್ತು ಮೂರು ಉಚ್ಚ ನ್ಯಾಯಾಲಯಗಳ ಮೂವರು ನ್ಯಾಯಾಧೀಶರನ್ನು ಮಂಗಳವಾರ ವರ್ಗಾವಣೆಗೊಳಿಸಲಾಗಿದೆ.
ಛತ್ತೀಸಗಡ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನವೀನ ಸಿನ್ಹಾ ಅವರನ್ನು ರಾಜಸ್ಥಾನ ಉಚ್ಚ ನ್ಯಾಯಾಲಯಕ್ಕೆ ಮತ್ತು ತ್ರಿಪುರಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ದೀಪಕ ಗುಪ್ತಾ ಅವರನ್ನು ಸಿನ್ಹಾರ ಸ್ಥಾನಕ್ಕೆ ವರ್ಗಾಯಿಸಲಾಗಿದೆ ಎಂದು ಕಾನೂನು ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ. ರಾಜಸ್ಥಾನ ಉಚ್ಚ ನ್ಯಾಯಾಲಯದಲ್ಲಿ ಪ್ರಸ್ತುತ ನ್ಯಾ.ಅಜಯ ರಸ್ತೋಗಿ ಅವರು ಪ್ರಭಾರ ಮುಖ್ಯ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತನ್ಮಧ್ಯೆ ಗುವಾಹಟಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ತಿನ್ಲಿಯಾನ್‌ಥಾಂಗ್ ವೈಫೆಹಿ ಅವರನ್ನು ತ್ರಿಪುರಾ ಉಚ್ಚ ನ್ಯಾಯಾಲಯಕ್ಕೆ, ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ವೇದ ಪ್ರಕಾಶ ವೈಶ್ ಅವರನ್ನು ಮೇಘಾಲಯ ಉಚ್ಚ ನ್ಯಾಯಾಲಯಕ್ಕೆ ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಸತೀಶಕುಮಾರ ಅಗ್ನಿಹೋತ್ರಿ ಅವರನ್ನು ಸಿಕ್ಕಿಂ ಉಚ್ಚ ನ್ಯಾಯಾಲಯಕ್ಕೆ ವಗಾವಣೆಗೊಳಿಸಲಾಗಿದೆ.





