ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿಯ ಮಾರ್ಗಸೂಚಿಗಳು
ಕೆರಿಯರ್ ಗೈಡೆನ್ಸ್

ಮಂಗಳೂರು, ಮೇ 10: ಕೇಂದ್ರ ಮತ್ತು ಕರ್ನಾಟಕ ಲೋಕಸೇವಾ ಆಯೋಗಗಳು ಹಾಗೂ ಇತರ ನೇಮಕಾತಿ ಪ್ರಾಧಿಕಾರಗಳು ನಡೆಸುವ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರವು ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ಸರಕಾರದ ವಿವಿಧ ಇಲಾಖೆಗಳ ಪರೀಕ್ಷಾ ತರಬೇತಿ ಕೇಂದ್ರಗಳು ಹಾಗೂ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳ ಮೂಲಕ ತರಬೇತಿ ನೀಡಲು ಉದ್ದೇಶಿಸಿದೆ.
ಈ ಕಾರ್ಯಕ್ರಮಕ್ಕೆ ಸಂಸ್ಥೆಗಳ ಶುಲ್ಕಗಳು, ಅಭ್ಯರ್ಥಿಗಳ ಸ್ಟೈಫೆಂಡ್ ಹಾಗೂ ಇತರೆ ಸಂಬಂಧಿಸಿದ ಖರ್ಚುಗಳನ್ನು ಸರಕಾರ ಭರಿಸಲಿದ್ದು, ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳನ್ನು ದೆಹಲಿ, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರು ಇತ್ಯಾದಿ ಸ್ಥಳಗಳಿಗೆ ಅಭ್ಯರ್ಥಿಗಳ ಇಚ್ಛಾನುಸಾರ ಕಳುಹಿಸಿಕೊಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕದ ಹೊರಗಿನ ಸ್ಥಳಗಳಿಗೆ ಮಾಸಿಕ 13,000 ರೂ. ಸ್ಟೈಫಂಡ್ ಹಾಗೂ ಕರ್ನಾಟಕದೊಳಗಿನ ಸ್ಥಳಗಳಿಗೆ ಮಾಸಿಕ 6,000 ರೂ.ಗಳಂತೆ ಸ್ಟೈಫಂಡ್ ಒಂದು ವರ್ಷದ ಅವಧಿಯವರೆಗೆ ನೀಡಲಾಗುವುದು.
ಅಭ್ಯರ್ಥಿಗಳ ಅರ್ಹತೆ
ಅಭ್ಯರ್ಥಿಗಳು ಸಂಬಂಧಿಸಿದ ಪ್ರಾಧಿಕಾರದಿಂದ ಜಾತಿ ಮತ್ತು ಆದಾಯ ಪತ್ರಗಳನ್ನು ಪಡೆದು ಸಲ್ಲಿಸುವುದು.
ವಾರ್ಷಿಕ 2.00 ಲಕ್ಷ ರೂ.ಗಿಂತ ಕಡಿಮೆ ಆದಾಯವುಳ್ಳ ಅಲ್ಪಸಂಖ್ಯಾತ ಅಭ್ಯರ್ಥಿಗಳು ಮಾತ್ರ ಈ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಬಹುದು.
ಅಭ್ಯರ್ಥಿಯು ಯುಪಿಎಸ್ಸಿ, ಕೆಪಿಎಸ್ಸಿ, ಪಿಎಸ್‌ಯು ಮಾರ್ಗಸೂಚಿಯಂತೆ ಯಾವುದೇ ಒಂದು ಪದವಿಯನ್ನು ಹೊಂದಿರಬೇಕು.
ಉದ್ಯೋಗದ ಪ್ರಕಟನೆಯಂತೆ ಅಭ್ಯರ್ಥಿಯ ವಯೋಮಿತಿ ಕನಿಷ್ಠ 21 ವರ್ಷಗಳಿದ್ದು, ಗರಿಷ್ಠ ವಯೋಮಿತಿಯು ಪ್ರಾಧಿಕಾರ ನಿಗದಿಪಡಿಸಿದಂತೆ ಇರಬೇಕು.
ಮೇ 16ರ ಒಳಗಡೆ ಅರ್ಜಿಯನ್ನು ಅನ್‌ಲೈನ್ ಮೂಲಕ ಭರ್ತಿ ಮಾಡಿ Director, Directorate Of Minorities, 20th Floor, V.V. Towers, Dr. B.R. Ambedkar Veedhi, Bangalore- 560001 ವಿಳಾಸಕ್ಕೆ ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್ ಕ್ರೌನ್, ಕೊಚ್ಚಿನ್ ಬೇಕರಿ ಹತ್ತಿರ, ಯೆನೆಪೊಯ ನರ್ಸಿಂಗ್ ಹೋಂ ಎದುರುಗಡೆ, ಕಂಕನಾಡಿ ಮಂಗಳೂರು ದೂ.ಸಂ.: 08244267883 ಅಥವಾ www.trfmangalore.org, email: trfmangalore@gmail.comನ್ನು ಸಂಪರ್ಕಿಸಬಹುದು.







