ಮಂಜೇಶ್ವರ: ಕೊಳವೆ ಬಾವಿ ಕೊರೆಸುವ ವಿಚಾರದಲ್ಲಿ ಘರ್ಷಣೆ; ಇಬ್ಬರಿಗೆ ಗಾಯ
ಮಂಜೇಶ್ವರ, ಮೇ 10: ಮಂಜೇಶ್ವರ ಗ್ರಾಪಂ ವ್ಯಾಪ್ತಿಯ ಅಂಗಡಿಪದವು ಶಾಂತಿನಗರದಲ್ಲಿ ಗ್ರಾಪಂನ ಅನುದಾನದಲ್ಲಿ ಕೊಳವೆಬಾವಿ ನಿರ್ಮಿಸುವ ವಿಷಯಕ್ಕೆ ಸಂಬಂಧಿಸಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಶಾಂತಿನಗರ ನಿವಾಸಿಗಳಾದ ರಹೀಂ ಎಂಬವರ ಪುತ್ರ ಮುಹಮ್ಮದ್ ಸಮೀರ್(42) ಮತ್ತು ಕುಟ್ಟಿ ಎಂಬವರ ಪುತ್ರ ಬಾಲಚಂದ್ರ (38) ಎಂಬವರು ಗಾಯಗೊಂಡಿದ್ದು, ಗಾಯಾಳುಗಳನ್ನು ಕುಂಬಳೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಳವೆ ಬಾವಿ ನಿರ್ಮಿಸುವ ವಿಷಯಕ್ಕೆ ಸಂಬಂಧಿಸಿದಂತೆ 5 ಮಂದಿಯ ತಂಡ ಹಲ್ಲೆಗೈದಿರುವುದಾಗಿ ಮುಹಮ್ಮದ್ ಸಮೀರ್ ದೂರಿದ್ದಾರೆ. ಜಾತಿ ಹೆಸರಲ್ಲಿ ನಿಂದಿಸಿ ತಂಡ ಹಲ್ಲೆಗೈದಿದೆಯೆಂದು ಬಾಲಚಂದ್ರ ಆರೋಪಿಸಿದ್ದಾರೆ.
Next Story





