ಮಂಜೇಶ್ವರ: ನಾಪತ್ತೆಯಾಗಿದ್ದ ಗೃಹಿಣಿಯ ಮೃತದೇಹ ಪತ್ತೆ
ಮಂಜೇಶ್ವರ, ಮೇ 10: ಮನೆಯಿಂದ ಕಾಣೆಯಾಗಿದ್ದ ಗೃಹಿಣಿಯೋರ್ವರ ಮೃತದೇಹ ಮಂಗಳವಾರ ಮನೆಯಿಂದ ಅಲ್ಪದೂರದ ಕಾಡಲ್ಲಿ ಪತ್ತೆಯಾಗಿದೆ. ಬದಿಯಡ್ಕ ಸಮೀಪದ ವಳಮಲೆ ರಾಘವ ಎಂಬವರ ಪತ್ನಿ ಸುಶೀಲಾ (50)ಮೃತ ಗೃಹಿಣಿ.ಮಾನಸಿಕ ಅಸ್ವಸ್ಥೆಯಾಗಿದ್ದ ಈಕೆ ಫೆ.13 ರಂದು ನಾಪತ್ತೆಯಾಗಿದ್ದರು.
ಮಂಗಳವಾರ ಈಕೆಯ ಮೃತದೇಹ ಮನೆ ಸಮೀಪದ ಚಂಬಲ್ತಿಮಾರ್ ಎಂಬಲ್ಲಿಯ ಗೇರು ತೋಟವೊಂದರ ಚರಂಡಿಯಲ್ಲಿ ಒಣಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬದಿಯಡ್ಕ ಪೊಲೀಸರು ದೂರು ದಾಖಲಿಸಿ ಮಹಜರು ನಡೆಸಿದರು. ಮೃತರು ಪತಿ, ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story





