ರಾಯಭಾರಿ ಆಗಲು ಐಒಎ ಆಹ್ವಾನ ನೀಡಿಲ್ಲ: ರಹ್ಮಾನ್

ಮುಂಬೈ, ಮೇ 10:ರಿಯೋ ಒಲಿಂಪಿಕ್ಸ್‌ನಲ್ಲಿ ಸದ್ಭಾವನಾ ರಾಯಭಾರಿ ಆಗಲು ಭಾರತೀಯ ಒಲಿಂಪಿಕ್ಸ್ ಅಸೋಸಿ ಯೇಶನ್‌ನಿಂದ ನಾನು ಯಾವುದೇ ಕೊಡುಗೆಯನ್ನು ಸ್ವೀಕರಿಸಿಲ್ಲ ಎಂದು ಹೇಳಿರುವ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರಹ್ಮಾನ್ ಈಗಾಗಲೇ ರಾಯಭಾರಿ ಆಗಿ ಆಯ್ಕೆಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
‘‘ಪೀಲೆ: ಬರ್ತ್ ಆಫ್ ಲೆಜಂಡ್’’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಹ್ಮಾನ್‌ರಲ್ಲಿ ಒಲಿಂಪಿಕ್ಸ್ ರಾಯಭಾರಿ ಆಗಲು ತಮ್ಮನ್ನು ಸಂಪರ್ಕಿಸಲಾಗಿದೆಯೇ ಎಂದು ಕೇಳಿದಾಗ, ನಾನು ಇದನ್ನು ಮಾಧ್ಯಮಗಳ ಮೂಲಕ ಕೇಳಿದ್ದೇನೆ. ನನಗೆ ಇ-ಮೇಲ್ ಕೂಡ ಬಂದಿಲ್ಲ ಎಂದರು.
ಈ ವರ್ಷ ರಿಯೋ ಡಿಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ರಾಯಭಾರಿಯಾಗುವಂತೆ ಐಒಎ ರಹ್ಮಾನ್, ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್, ಶೂಟರ್ ಅಭಿನವ್ ಬಿಂದ್ರಾರನ್ನು ಸಂಪರ್ಕಿಸಿತ್ತು ಎಂದು ವರದಿಯಾಗಿತ್ತು.
Next Story





