Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘ನಮ್ಮ ಮೆಟ್ರೊ’ಗೆ ಬಸವಣ್ಣನವರ ಹೆಸರಿಡಲಿ

‘ನಮ್ಮ ಮೆಟ್ರೊ’ಗೆ ಬಸವಣ್ಣನವರ ಹೆಸರಿಡಲಿ

ವಾರ್ತಾಭಾರತಿವಾರ್ತಾಭಾರತಿ10 May 2016 11:48 PM IST
share
‘ನಮ್ಮ ಮೆಟ್ರೊ’ಗೆ ಬಸವಣ್ಣನವರ ಹೆಸರಿಡಲಿ

ಇಂದಿನ ವಿಶ್ವ ಪ್ರಸಿದ್ದಿಯ ಬೆಂಗಳೂರು ನಗರ ನಮ್ಮ ಕಣ್ಣ ಮುಂದಿರುವುದಕ್ಕೆ ಅದರ ನಿರ್ಮಾತೃರಾದ ಕೆಂಪೇಗೌಡರು ಮೂಲ ಕಾರಣರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಗೌರವಾರ್ಹರು. ಸ್ಮರಣಾರ್ಹರೂ ಕೂಡ. ಅವರಿಗೆ ಗೌರವ ಸಲ್ಲಿಸುವ ದ್ಯೋತಕವಾಗಿ ಸರಕಾರ ಕೂಡ ಬೆಂಗಳೂರಿನ ಪ್ರಮುಖ ಸ್ಥಳಗಳಿಗೆ ಅವರ ಹೆಸರನ್ನಿಟ್ಟು, ಕೆಂಪೇಗೌಡರನ್ನು ಜನಮಾನಸದಲ್ಲಿ ಅಜರಾಮರಗೊಳಿಸಿದೆ. ಮೆಯೋಹಾಲ್‌ನಲ್ಲಿರುವ ಮ್ಯೂಸಿಯಮ್, ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಹಾಗೂ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಕೆಂಪೇಗೌಡರ ಹೆಸರನ್ನು ಪೂರ್ವಪ್ರತ್ಯಯವನ್ನಾಗಿ ಮಾಡಕೊಳ್ಳಲಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಗೆ ಕೆಂಪೇಗೌಡರ ಹೆಸರಿದೆ. ಅಷ್ಟೇ ಅಲ್ಲದೇ ಕೆಂಪೇಗೌಡರ ಹೆಸರಿನಲ್ಲಿ ಬೆಂಗಳೂರಿನಲ್ಲಿ ‘ಕೆಂಪೇಗೌಡ ನಗರ’ ನಿರ್ಮಾಣ ಮಾಡಲಾಗಿದೆ.
ಇತ್ತೀಚಿನ ಕೆಲವು ದಿನಗಳಿಂದ ಬೆಂಗಳೂರಿನ ಮೆಟ್ರೊ(ರಾಜ್ಯದ ಮೆಟ್ರೊ)ಗೂ ಸಹ ಕೆಂಪೇಗೌಡರ ಹೆಸರಿಡಬೇಕೆಂಬ ಕೂಗು ಜೋರಾಗಿಯೇ ಕೇಳಿಬರುತ್ತಿದೆ.ಮಾಗಡಿ ರಸ್ತೆ-ಮೈಸೂರು ರಸ್ತೆ ನಡುವೆ ‘ನಮ್ಮ ಮೆಟ್ರೊ’ ರೈಲು ಸಂಚಾರಕ್ಕೆ ಚಾಲನೆ ನೀಡಿ ನಾಯಂಡಹಳ್ಳಿಯಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ವಿಜಯನಗರದ ಶಾಸಕ ಕೃಷ್ಣಪ್ಪನವರು ಮೊದಲು ಈ ಬೇಡಿಕೆಯನ್ನು ಮುಂದಿಟ್ಟರು. ನಂತರ ಸಂಬಂಧಿತ ಜಾತಿ ಸಂಘಟನೆಯೊಂದು ಇದನ್ನು ತನ್ನ ಪ್ರತಿಷ್ಠೆಯ ಪ್ರಶ್ನೆಯೆಂಬಂತೆ ಪರಿಗಣಿಸಿ ನಿರಂತರವಾಗಿ ಸರಕಾರದ ಮೇಲೆ ಒತ್ತಡ ಹೇರತೊಡಗಿತು. ಇದಕ್ಕೆ ಅವರ ಸ್ವಾಮೀಜಿಗಳೂ ಕೂಡ ದನಿಗೂಡಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯನವರೂ ಕೂಡ ಇದಕ್ಕೆ ಸ್ಪಂದಿಸಿ ‘ನಮ್ಮ ಮೆಟ್ರೊ’ಗೆ ಬೆಂಗಳೂರು ಸಂಸ್ಥಾಪಕ ಕೆಂಪೇಗೌಡರ ಹೆಸರನ್ನು ಇಡಲು ಸರಕಾರ ಮುಕ್ತ ಮನಸ್ಸಿನಿಂದ ಇದೆ ಎಂದಿದ್ದರು.
ನಂತರದ ದಿನಗಳಲ್ಲಿ ರಾಜ್ಯ ಒಕ್ಕಲಿಗರ ಸಂಘವು 2015ರ ನವೆಂಬರ್30ರಂದು ಮಾಗಡಿಯಿಂದ ಕೆಂಪಾಪುರದವರೆಗೆ ಬೃಹತ್‌ಪಾದಯಾತ್ರೆ ಕೈಗೊಂಡು ಸರಕಾರದ ಮೇಲೆ ಒತ್ತಡ ಹಾಕಿತ್ತು. ಪಕ್ಷಾತೀತವಾಗಿ ಶಾಸಕರು, ಬಿಬಿಎಂಪಿ ಸದಸ್ಯರು, ಸಚಿವರು ಸೇರಿದಂತೆ ವಿವಿಧ ರಾಜಕಾರಣಿಗಳು ಕೆಂಪೇಗೌಡರ ಪ್ರಾಧಿಕಾರ ರಚನೆಗೆ ಒತ್ತಾಯಿಸಿದ್ದರು. ಈ ಪಾದಯಾತ್ರೆಯ ಸಮಯದಲ್ಲಿ ಕೆಂಪೇಗೌಡರ ಕುರಿತಾಗಿ ಕೆಲ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿತ್ತು. ಅವುಗಳೆಂದರೆ 1. ಕೆಂಪೇಗೌಡರ ಜಯಂತಿಯನ್ನು ಸರಕಾರದ ವತಿಯಿಂದಲೇ ಆಚರಿಸಬೇಕು. 2.ಕೆಂಪೇಗೌಡರ ಹೆಸರಿನಲ್ಲಿ ಪ್ರಾಧಿಕಾರ ರಚಿಸಲು ಸರಕಾರ ಮನಸ್ಸು ಮಾಡಬೇಕು. 3.ರಾಜ್ಯದಲ್ಲಿ ಕನಕದಾಸರು ಮತ್ತು ಬಸವಣ್ಣನವರ ಐಕ್ಯ ಸ್ಥಳಗಳನ್ನು ರಾಜ್ಯ ಸರಕಾರ ಅಭಿವೃದ್ಧಿ ಮಾಡಿದ ಮಾದರಿಯಲ್ಲಿಯೇ ಕೆಂಪೇಗೌಡರ ಐಕ್ಯ ಸ್ಥಳವನ್ನು ಅಭಿವೃದ್ದಿ ಮಾಡಬೇಕು ಮತ್ತು ಈ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಸ್ಥಳ ಎಂದು ಘೋಷಿಸಲು ಕ್ರಮ ಕೈಗೊಳ್ಳಬೇಕು. ಈ ಬೇಡಿಕೆಗಳನ್ನು ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿಯ ಬಜೆಟ್‌ನಲ್ಲಿ ಪ್ರಾಧಿಕಾರ ರಚನೆ ಕುರಿತು ಪ್ರಸ್ತಾಪಿಸಿದ್ದಾರೆ. ಅಲ್ಲದೆ ಕೆಂಪೇಗೌಡ ಪ್ರಾಧಿಕಾರಕ್ಕೆ 5 ಕೋಟಿಯನ್ನು ಒದಗಿಸಿದ್ದಾರೆ. ಬೆಂಗಳೂರಿಗೆ ಕೆಂಪೇಗೌಡರ ಕೊಡುಗೆಯನ್ನು ಪರಿಗಣಿಸಿ, ಒಕ್ಕಲಿಗರ ಸಂಘದ ಈ ಮೇಲಿನ ಇನ್ನುಳಿದ ಬೇಡಿಕೆಗಳತ್ತ ಸರಕಾರ ಗಮನ ಹರಿಸಬಹುದು. ತಮ್ಮ ಸಮಾಜದ ವರೇಣ್ಯರೊಬ್ಬರ ಹೆಸರು ಹಿಡಿದುಕೊಂಡು ಬರುವ ಜಾತಿಸಂಘಟನೆಗಳ ಮಾತಿಗೆ ಯಾವುದೇ ಸರಕಾರ, ಸರಕಾರಿ ಸಂಸ್ಥೆ ಅಥವಾ ಪ್ರಾಧಿಕಾರಗಳು ಮಣಿದು ಅವರಿಗೆ ಅತಿಯಾಗಿ ಸ್ಪಂದಿಸುವುದರಿಂದ, ಎಲ್ಲರಿಗೂ ಮಾದರಿಯಾಗಬೇಕಾದ ಆ ವ್ಯಕ್ತಿತ್ವ ಕೇವಲ ಒಂದು ಜಾತಿಗೆ ಸೀಮಿತಗೊಳ್ಳುವ ಅಪಾಯವಿದೆ ಎಂಬ ಅರಿವಿದ್ದುಕೊಂಡೇ ಈ ಮಾತನ್ನು ಹೇಳುತ್ತಿದ್ದೇನೆ.
ಬೆಂಗಳೂರಿನಲ್ಲಿರುವ ಪ್ರಮುಖ ಸ್ಥಳ, ನಿಲ್ದಾಣ,ಉದ್ಯಾನವನ,ರಸ್ತೆ,ಸಂಗ್ರಹಾಲಯಗಳಿಗೆ ಮೂಲ ಬೆಂಗಳೂರಿಗರಲ್ಲದ ಅನೇಕ ಮಹನೀಯರ ಹೆಸರನ್ನು ಇಡಲಾಗಿದೆ. ಅದರ ಮುಂದುವರಿಕೆಯೆಂಬಂತೆ ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಸಂಗೊಳ್ಳಿರಾಯಣ್ಣನವರ ಹೆಸರಿಡಬೇಕೆಂದು ರಾಜ್ಯ ಸರಕಾರ ಇತ್ತೀಚೆಗೆ ಕೇಂದ್ರ ಸರಕಾರವನ್ನು ಕೇಳಿಕೊಂಡಿತ್ತು. ಕೇಂದ್ರ ಸರಕಾರ ಇದಕ್ಕೆ ಹಸಿರು ನಿಶಾನೆ ತೋರಿದ್ದರಿಂದ ಬೆಂಗಳೂರು ನಗರ ರೈಲ್ವೆ ನಿಲ್ದಾಣ ಎಂಬುದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಎಂದು ಮರುನಾಮಕರಣಕ್ಕೊಳಪಟ್ಟಿದೆ. ಈ ವಿಷಯದಲ್ಲಿ ಆಳುವವರು ಅಭಿನಂದನೆಗೆ ಅರ್ಹರು.
ಹಿಂದೆ ಆಳಿದ ಕೇಂದ್ರ ಸರಕಾರಗಳು ವಿವಿಧ ಮುಖಬೆಲೆಯ ನಾಣ್ಯಗಳ ಮೇಲೆ ಬಸವಣ್ಣನವರ ಭಾವಚಿತ್ರ ಮುದ್ರಿಸುವುದರ ಮೂಲಕ ಜಾತೀಯತೆಯ ವಿರುದ್ಧ ಸಿಡಿದೆದ್ದ ಮಹಾತ್ಮನಿಗೆ ಗೌರವ ಸೂಚಿಸಿ, ಜಾತ್ಯತೀತತೆಯ ಬೇರನ್ನು ಗಟ್ಟಿಗೊಳಿಸಲೆತ್ನಿಸಿವೆ. ಬಸವಣ್ಣನವರು ನಾಣ್ಯದ ಮೇಲೆ ಮುದ್ರಿಸಲ್ಪಟ್ಟ ಪ್ರಥಮ ಕನ್ನಡಿಗರೂ ಆಗಿದ್ದಾರೆ. ಹೀಗಿದ್ದರೂ ಹಿಂದಿನ ಎಲ್ಲ ರಾಜ್ಯ ಸರಕಾರಗಳು, ರಾಜ್ಯ ರಾಜಧಾನಿಯ ಯಾವುದಾದರೊಂದು ಪ್ರಮುಖ ಸ್ಥಳ, ನಿಲ್ದಾಣ ಅಥವಾ ಯೋಜನೆಗೆ ನಮ್ಮ ಹೆಮ್ಮೆಯ ಕನ್ನಡಿಗ ಬಸವಣ್ಣನವರ ಹೆಸರಿಡುವ ಬಗ್ಗೆ ಯೋಚಿಸದೆ ಅವರನ್ನು ಅವಜ್ಞೆಗೆ ಒಳಪಡಿಸಿವೆ. ‘ನಮ್ಮ ಮೆಟ್ರೊ’ಗೆ ಬಸವಣ್ಣನವರ ಹೆಸರಿಡುವಂತೆ ಒತ್ತಾಯಿಸುತ್ತಿರುವುದರಲ್ಲಿ ಯಾವ ಜಾತೀಯತೆಯ ಹುನ್ನಾರವೂ ಅಡಗಿಲ್ಲ. ಜಾತಿ, ಲಿಂಗ, ಧರ್ಮದ ಭೇದವಿಲ್ಲದೇ ಸಮಾನತೆಯಲ್ಲಿ,ಕಾಯಕ ನಿಷ್ಠೆಯಲ್ಲಿ ನಂಬಿಕೆಯಿಟ್ಟು ಕಾಯಕವೇ ಕೈಲಾಸ ಎಂದು ಸಮಾಜದ ಎಲ್ಲ ವರ್ಗದ ಜನರನ್ನು ಒಂದುಗೂಡಿಸಿದ, 12ನೆ ಶತಮಾನದ ಸಂದರ್ಭದಲ್ಲಿ ಸಂಸ್ಕೃತದಿಂದ ಕನ್ನಡ ಭಾಷೆಗೆ ಅಪಾಯ ಎದುರಾದ ಸಂದರ್ಭದಲ್ಲಿ ನೆಲದ ಭಾಷೆಯಾದ ಕನ್ನಡದಲ್ಲಿ ವಚನಗಳನ್ನು ರಚಿಸಿ ಕನ್ನಡವನ್ನು ಮತ್ತು ಕನ್ನಡ ಸಾಹಿತ್ಯವನ್ನು ಬೆಳೆಸುವಲ್ಲಿ ಅಪಾರ ಕೊಡುಗೆ ನೀಡಿದ ವ್ಯಕ್ತಿಗೆ ನಾವು ಸಲ್ಲಿಸುವ ಸಣ್ಣ ಗೌರವವಾಗಬಹುದು.

                                                                                           -ರಮಾನಂದ ಅಂಕೋಲಾ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X