ಪಾಜಕ ಕ್ಷೇತ್ರದ ಕೆರೆಯಲ್ಲಿ ಮುಳುಗಿ ಮೃತ್ಯು
ಶಿರ್ವ, ಮೇ 10: ಕುರ್ಕಾಲು ಗ್ರಾಮದ ಪಾಜಕ ಕ್ಷೇತ್ರದ ವಾಸುದೇವ ತೀರ್ಥದಲ್ಲಿ ಸ್ನಾನ ಮಾಡುತ್ತಿದ್ದ ಮೈಸೂರಿನ ಯುವಕ ನೋರ್ವ ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ಇಂದು ಬೆಳಗ್ಗೆ 7:45ರ ಸುಮಾರಿಗೆ ನಡೆದಿದೆ.
ಮೃತರನ್ನು ಮೈಸೂರು ಜಿಲ್ಲೆಯ ಕುವೆಂಪು ನಗರ ನಿವಾಸಿ ಬಿ.ಎಲ್. ಪ್ರಹ್ಲಾದ್ ರಾವ್ ಎಂಬವರ ಮಗ ವಿಜಯೇಂದ್ರ(35) ಎಂದು ಗುರುತಿ ಸಲಾಗಿದೆ. ಪ್ರಹ್ಲಾದ್ ರಾವ್ ಮೇ 9ರಂದು ಕುಟುಂಬದೊಂದಿಗೆ ಉಪನಯನ ಕಾರ್ಯಕ್ರಮಕ್ಕೆಂದು ಪಾಜಕ ಕ್ಷೇತ್ರಕ್ಕೆ ಬಂದಿದ್ದರು. ಕಾರ್ಯಕ್ರಮ ಮುಗಿಸಿ ರಾತ್ರಿ ಪಾಜಕ ಕ್ಷೇತ್ರದಲ್ಲಿ ವಸತಿ ಗೃಹ ದಲ್ಲಿ ಉಳಿದುಕೊಂಡಿದ್ದರು.
ಇಂದು ಬೆಳಗಿನ ಜಾವ ಪಾಜಕ ಕ್ಷೇತ್ರದ ವಾಸುದೇವ ತೀರ್ಥದಲ್ಲಿ ಪ್ರಹ್ಲಾದ್ ರಾವ್, ಮಕ್ಕಳಾದ ರಾಘವೇಂದ್ರ ಹಾಗೂ ವಿಜಯೇಂದ್ರ ಮತ್ತು ಮೊಮ್ಮಗ ಸಂಧನ್ವ ಕಶ್ಯಪ್ ಸ್ನಾನ ಮಾಡುತ್ತಿದ್ದಾಗ ವಿಜಯೇಂದ್ರ ಆಕಸ್ಮಿಕವಾಗಿ ಕಾಲು ಜಾರಿ ನೀರಿ ನಲ್ಲಿ ಮುಳುಗಿ ಮೃತಪಟ್ಟರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದವರು ಮೃತದೇಹವನ್ನು ಮೇಲಕ್ಕೆತ್ತಿದರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





