ಅತ್ಯುತ್ತಮ ವನ್ಯಜೀವಿ ತಾಣ ಪ್ರಶಸ್ತಿ ಗೆದ್ದ ಮಧ್ಯಪ್ರದೇಶ
ಭೋಪಾಲ,ಮೇ 10: ಲೋನ್ಲಿ ಪ್ಲಾನೆಟ್ ಗ್ರೂಪ್ ನೀಡುವ ‘ಅತ್ಯುತ್ತಮ ಭಾರತೀಯ ವನ್ಯಜೀವಿ ತಾಣ’ಪ್ರಶಸ್ತಿಯು ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆ(ಎಂಪಿಟಿ)ಯ ಮುಡಿಗೇರಿದೆ.
ಸೋಮವಾರ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಎಂಪಿಟಿಯ ಅಧ್ಯಕ್ಷರ ಪರವಾಗಿ ಅವರ ವಿಶೇಷ ಕರ್ತವ್ಯಾಧಿಕಾರಿ ವಿನೋದ್ ಕುಮಾರ್ ಅವರು ನಟಿ ಆ್ಯಮಿ ಜಾಕ್ಸನ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಮಧ್ಯಪ್ರದೇಶವು ಒಂಬತ್ತು ರಾಷ್ಟ್ರೀಯ ಉದ್ಯಾನವನಗಳು ಸೇರಿದಂತೆ 25 ವನ್ಯಜೀವಿ ಅಭಯಧಾಮಗಳನ್ನು ಹೊಂದಿವೆ.
ವೃಕ್ಷಜಂತು ಜಾಲದ ಸಂರಕ್ಷಣೆೆಗಾಗಿ ಮಧ್ಯಪ್ರದೇಶ ಸರಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಫಲವಾಗಿ ಕಾನ್ಹಾ ಮತ್ತು ಪೆಂಚ್ ಇಂದು ಏಷ್ಯಾದಲ್ಲಿಯೇ ಅತ್ಯಂತ ಸುಂದರ ರಾಷ್ಟ್ರೀಯ ಉದ್ಯಾನವನಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.
Next Story





