ಲೋಕಸಭೆಯಲ್ಲಿ ಕಾಂಗ್ರೆಸ್ ಧರಣಿ
ಹೊಸದಿಲ್ಲಿ,ಮೇ 10: ಸೋನಿಯಾ ಗಾಂಧಿಯವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರ ದಾಳಿಯ ವಿಷಯವನ್ನೆತ್ತಲು ಪಕ್ಷಕ್ಕೆ ಅನುಮತಿ ನಿರಾಕರಿಸಿದ್ದಕ್ಕಾಗಿ ಕಾಂಗ್ರೆಸ್ ಸದಸ್ಯರು ಮಂಗಳವಾರ ಲೋಕಸಭೆಯಲ್ಲಿ ಧರಣಿಯನ್ನು ನಡೆಸಿದರು.ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷವು ಹಕ್ಕುಚ್ಯುತಿ ಸೂಚನೆಯನ್ನು ನೀಡಿತ್ತು.
ಸದನವು ಬರ,ಕುಡಿಯುವ ನೀರಿನ ಕೊರತೆ ಮತ್ತು ನದಿಗಳ ಜೋಡಣೆ ಕುರಿತು ಚರ್ಚೆಯನ್ನು ಕೈಗೆತ್ತಿಕೊಂಡಿದ್ದರೆ,ಕಾಂಗ್ರೆಸ್ ಸದಸ್ಯರು ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಸದನದ ಬಾವಿಯಲ್ಲಿ ಧರಣಿ ಕುಳಿತರು.
ಭೋಜನ ವಿರಾಮದ ಬಳಿಕ ಸದನವು ಮರುಸಮಾವೇಶಗೊಂಡಾಗ, ನಾವು ಬೆಳಗ್ಗೆಯಿಂದ ವಿಷಯವನ್ನೆತ್ತಲು ಪ್ರಯತ್ನಿಸಿದ್ದೇವಾದರೂ ನಮಗೆ ಅವಕಾಶ ನೀಡಿಲ್ಲ ಎಂದು ಹೇಳಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಭಟನೆಗೆ ಮುಂದಾದರು.
Next Story





