Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ವಿಶಾಖಪಟ್ಟಣದಲ್ಲಿ ಮುಳುಗಿತು ಧೋನಿಯ ಧೋನಿ

ವಿಶಾಖಪಟ್ಟಣದಲ್ಲಿ ಮುಳುಗಿತು ಧೋನಿಯ ಧೋನಿ

ಸನ್‌ರೈಸರ್ಸ್‌ಗೆ 4 ರನ್‌ಗಳ ರೋಚಕ ಜಯ

ವಾರ್ತಾಭಾರತಿವಾರ್ತಾಭಾರತಿ11 May 2016 12:25 AM IST
share
ವಿಶಾಖಪಟ್ಟಣದಲ್ಲಿ ಮುಳುಗಿತು ಧೋನಿಯ ಧೋನಿ

 ವಿಶಾಖಪಟ್ಟಣ, ಮೇ 10: ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್‌ನ 40ನೆ ಪಂದ್ಯದಲ್ಲಿ ಪುಣೆ ಸೂಪರ್‌ಜಯಂಟ್ಸ್ ವಿರುದ್ಧ 4 ರನ್‌ಗಳ ರೋಚಕ ಜಯ ಗಳಿಸಿದೆ. ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 137 ರನ್ ಮಾಡಬೇಕಿದ್ದ ಪುಣೆ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 133 ರನ್ ಗಳಿಸಲಷ್ಟೇ ಶಕ್ತವಾಯಿತು. 30 ರನ್ (20ಎ,1ಬೌ,2ಸಿ) ಗಳಿಸಿದ್ದ ನಾಯಕ ಧೋನಿ ಗೆಲುವಿಗೆ 6 ರನ್‌ಗಳ ಆವಶ್ಯಕತೆ ಇದ್ದಾಗ ರನೌಟಾಗಿರುವ ಕಾರಣದಿಂದಾಗಿ ಪುಣೆಗೆ ಗೆಲುವು ದೊರೆಯಲಿಲ್ಲ.ಮ್ಯಾಚ್ ಫಿನಿಶರ್ ಧೋನಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಎಡವಿದರು.

ಸನ್‌ರೈಸರ್ಸ್‌ ತಂಡಕ್ಕೆ ಸವಾಲು ಕಠಿಣವಾಗಿರಲಿಲ್ಲ. ಆದರೆ ಕೆಟ್ಟ ಹೊಡೆತಗಳಿಗೆ ಯತ್ನಿಸಿ ಬ್ಯಾಟ್ಸ್‌ಮನ್‌ಗಳು ವಿಕೆಟ್ ಕೈ ಚೆಲ್ಲಿಸಿದರು. ಇನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ ಓವರ್‌ನ ಮೊದಲ ಎಸೆತದಲ್ಲಿ ಭುವನೇಶ್ವರ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಉಸ್ಮಾನ್ ಖ್ವಾಜಾ(11) ರನೌಟಾದರು. ಮೂರನೆ ವಿಕೆಟ್‌ಗೆ ಜಾರ್ಜ್ ಬೈಲಿ ಮತ್ತು ಆರ್.ಅಶ್ವಿನ್ ಜೊತೆಯಾಗಿ 49 ರನ್ ಸೇರಿಸಿದರು. ಜಾರ್ಜ್ ಬೈಲಿ 34 ರನ್ ಮತ್ತು ಅಶ್ವಿನ್ 29 ರನ್ ಗಳಿಸಿದರು. ಸೌರಭ್ ತಿವಾರಿ(9) ಮಿಂಚಲಿಲ್ಲ. 15 ಓವರ್‌ಗಳಲ್ಲಿ 86ಕ್ಕೆ ಐದು ವಿಕೆಟ್ ಕಳೆದುಕೊಂಡಿದ್ದ ಪುಣೆ ತಂಡದ ಬ್ಯಾಟಿಂಗ್‌ನ್ನು ನಾಯಕ ಎಂ.ಎಸ್.ಧೋನಿ ಮತ್ತು ತಿಸ್ಸರಾ ಪೆರೆರಾ ಮುನ್ನಡೆಸಿದರು. ಆದರೆ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಇವರ ಜೊತೆಯಾಟದಲ್ಲಿ ಪುಣೆ ಗೆಲುವಿನ ಹತ್ತಿರಕ್ಕೆ ಬಂದಿದ್ದರೂ ಕೊನೆಯ ಓವರ್‌ನಲ್ಲಿ ಆಶೀಷ್‌ ನೆಹ್ರಾ ಮ್ಯಾಜಿಕ್‌ನಿಂದ ಪುಣೆ ಗೆಲುವಿನಂಚಿನಲ್ಲಿ ಎಡವಿತು.
ಕೊನೆಯ ಓವರ್‌ನಲ್ಲಿ 14 ರನ್ ಬೇಕಿತ್ತು. ಆದರೆ ಆಶೀಶ್ ನೆಹ್ರಾ 9 ರನ್ ಬಿಟ್ಟುಕೊಟ್ಟರು. 19.3ನೆ ಓವರ್‌ನಲ್ಲಿ ತಿಸ್ಸರಾ ಪೆರೆರಾ (17) , 19.5ನೆ ಓವರ್‌ನಲ್ಲಿ ಧೋನಿ(30) ರನೌಟಾದರು. ಕೊನೆಯ ಓವರ್‌ನಲ್ಲಿ ಝಾಂಪ(0) ಔಟಾಗುವುದರೊಂದಿಗೆ ಪುಣೆಯ ಇನಿಂಗ್ಸ್ ಮುಕ್ತಾಯಗೊಂಡಿತು.
ಆಶೀಶ್ ನೆಹ್ರಾ 29ಕ್ಕೆ 3 ವಿಕೆಟ್ ಉಡಾಯಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಭುವನೇಶ್ವರ ಕುಮಾರ್,್ ಸ್ರಾನ್, ಹೆನ್ರಿಕ್ಸ್ ತಲಾ 1 ವಿಕೆಟ್ ಪಡೆದರು.
ಝಾಂಪ ದಾಳಿಗೆ ಸಿಲುಕಿದ ಸನ್‌ರೈಸರ್ಸ್‌ 137/8:ಲೆಗ್ ಸ್ಪಿನ್ನರ್ ಆ್ಯಡಮ್ ಝಾಂಪ ದಾಳಿಗೆ ಸಿಲುಕಿದ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್‌ನ 40ನೆ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 137 ರನ್ ಗಳಿಸಿತ್ತು.
ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ತಂಡ ದೊಡ್ಡ ಮೊತ್ತ ಸವಾಲು ಸೇರಿಸುವಲ್ಲಿ ವಿಫಲಗೊಂಡಿತು.
ಝಾಂಪ 19ಕ್ಕೆ 6 ವಿಕೆಟ್ ಉಡಾಯಿಸುವ ಮೂಲಕ 9ನೆ ಆವೃತ್ತಿಯ ಐಪಿಎಲ್‌ನಲ್ಲಿ 6 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು. 2008ರಲ್ಲಿ ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ತಂಡದಲ್ಲಿ ಸುಯೈಲ್ ತನ್ವೀರ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 14 ರನ್‌ಗೆ 6 ವಿಕೆಟ್ ಪಡೆದಿದ್ದರು. ಆ ಬಳಿಕ ಇದೇ ಮೊದಲ ಬಾರಿ ಬೌಲರೊಬ್ಬರು ಈ ಸಾಧನೆ ಮಾಡಿದ್ಧಾರೆ.
24ರ ಹರೆಯದ ಆಸ್ಟ್ರೇಲಿಯದ ಬೌಲರ್ ಝಾಂಪ ಅವರು ಯುವರಾಜ್ ಸಿಂಗ್(23), ಕೇನ್ ವಿಲಿಯಮ್ಸನ್(32), ಮೊಯ್ಸಿಸ್ ಹೆನ್ರಿಕ್ಸ್(10) ,ದೀಪಕ್ ಹೂಡಾ(14), ನಮನ್ ಓಜಾ(7) ಮತ್ತು ಭುವನೇಶ್ವರ ಕುಮಾರ್(1) ಇವರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ದಾಖಲೆ ಬರೆದರು.
 ಝಾಂಪ ಐಪಿಎಲ್‌ನಲ್ಲಿ ಈ ವರೆಗೆ ಅತ್ಯುತ್ತಮ ಸಾಧನೆ ಮಾಡಿರುವ ಎರಡನೆ ಬೌಲರ್ ಎನಿಸಿಕೊಂಡರು. ಆರ್.ಅಶ್ವಿನ್(16ಕ್ಕೆ1) ಮತ್ತು ಆರ್‌ಪಿ ಸಿಂಗ್(23ಕ್ಕೆ1) ಅವರು ಝಾಂಪಗೆ ಸಾಥ್ ನೀಡಿದರು.
ಶಿಖರ್ ಧವನ್ 27 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 33 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಯುವರಾಜ್ 21 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಇರುವ 23 ರನ್ ಬಾರಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X