ಯುಪಿಎಸ್‌ಸಿ ಫಲಿತಾಂಶ: ನಿಡ್ಡೋಡಿ ಗ್ರಾಮೀಣ ಪ್ರತಿಭೆ ಮಿಶಾಲ್ ಕ್ಟೀನಿ ಡಿ’ ಕೋಸ್ಟ 387ನೆ ರ್ಯಾಂಕ್

ಮೂಡಬಿದಿರೆ, ಮೇ 11: ನಿಡ್ಡೋಡಿ ಗ್ರಾಮದ ನೀರುಡೆ ನಿವಾಸಿ ಮಿಶಾಲ್ ಕ್ವೀನಿ ಡಿ’ಕೋಸ್ಟ ಅವರಿಗೆ 2015 ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ 387ನೆ ರ್ಯಾಂಕ್ ಬಂದಿದೆ.
ಅವರು ಲಾಜರಸ್ ಡಿ’ಕೋಸ್ಟ -ನ್ಯಾನ್ಸಿ ಡಿ’ಕೋಸ್ಟ ಅವರ ದ್ವಿತೀಯ ಪುತ್ರಿ.
ನೀರುಡೆಯ ಸೈಂಟ್ ಫ್ರಾನ್ಸಿಸ್ ಹಿ. ಪ್ರಾ. ಶಾಲೆ, ಕಿನ್ನಿಗೋಳಿಯ ಲಿಟ್ಲ್ ಫ್ಲವರ್ ಪ್ರೌಢಶಾಲೆಯಲ್ಲಿ ಕಲಿತ ಮಿಶಾಲ್ ಮೂಡುಬಿದಿರೆ ಆಳ್ವಾಸ್ ಪ.ಪೂ. ಕಾಲೇಜಿನಲ್ಲಿ 92.6 ಶೇ. ಅಂಕಗಳೊಂದಿಗೆ ಬೆಂಗಳೂರಿನ ಆರ್‌ವಿಸಿಇ ಕಾಲೇಜಿಗೆ ಸೇರಿ ಇನ್‌ಫೋರ್ಮೇಶನ್ ಆ್ಯಂಡ್ ಸೈನ್ಸ್‌ಎಂಜಿನಿಯರಿಂಗ್ ನಲ್ಲಿ 9.45 ಗ್ರೇಡ್‌ನೊಂದಿಗೆ ಎಂಜಿನಿಯರಿಂಗ್ ಪದವಿ ಗಳಿಸಿದರು.
ಹೊಸದಿಲ್ಲಿಯ ವಾಜಿರಾಂ ಆ್ಯಂಡ್ ರವಿ, ಅನರ್ಘ್ಯ ಐಎಎಸ್ ಅಕಾಡಮಿಯಲ್ಲಿ ಅವರು ತರಬೇತಿ ಪಡೆದಿದ್ದಾರೆ.
Next Story





