ಹಾಕಿಇಂಡಿಯಾ ನಾಯಕ ಸರ್ದಾರ್‌ಸಿಂಗ್‌ಗೆ ಲೈಂಗಿಕ ಶೋಷಣೆ ಆರೋಪದಲ್ಲಿ ಕ್ಲೀನ್‌ಚಿಟ್!
ನ್ಯಾಯಕ್ಕಾಗಿ ಹೋರಾಡುವೆ ಎಂದ ದೂರಿತ್ತ ಮಹಿಳೆ

ಲುಧಿಯಾನ, ಮೇ 11: ಭಾರತೀಯ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್‌ವಿರುದ್ಧ ಹೊರಿಸಲಾಗಿದ್ದ ಲೈಂಗಿಕ ಶೋಷಣೆ ಆರೋಪದಲ್ಲಿ ಪಂಜಾಬ್ ಪೊಲೀಸ್ ಕ್ಲೀನ್ ಚಿಟ್ ನೀಡಿದೆ ಎಂದು ವರದಿಯಾಗಿದೆ. ಸದಾನ ಸಿಂಗ್ ವಿರುದ್ಧ ಮಹಿಳೆಯೊಬ್ಬರು ಆರೋಪ ಹೊರಿಸಿ ತಾನು ಅವರ ಭಾವಿ ವಧುವಾಗಿದ್ದೇನೆ ಎಂದು ಹೇಳಿದ್ದರು. ಆದರೆ ಸರ್ದಾರ್ ಸಿಂಗ್ ಮಹಿಳೆಯ ಆರೋಪವನ್ನು ನಿರಾಕರಿಸಿದ್ದರು.
ಕಳೆದ ಸೋಮವಾರ ಚಂಡಿಗಡದಲ್ಲಿ ಆರ್ಶ್‌ಪಾಲ್ ಕೌರ್ ಮೊತ್ತಮೊದಲಬಾರಿ ಮಾಧ್ಯಮಗಳ ಮುಂದೆ ಹಾಜರಾಗಿದ್ದು, ತನ್ನ ವಕೀಲರ ಜೊತೆ ಪತ್ರಿಕಾಗೋಷ್ಠಿ ನಡೆಸಿ ಪೊಲೀಸರನ್ನು ಸಹ ಟೀಕಿಸಿದ್ದಾರೆ. ಪೊಲೀಸರು ಸರ್ದಾರ್ ಸಿಂಗ್‌ರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ತನ್ನ ಮತ್ತು ಸರ್ದಾರ್ ನಡುವೆ 2012ರಲ್ಲಿ ಸಂಬಂಧ ಪ್ರಾರಂಭವಾಯಿತು. 2014ರಲ್ಲಿ ತಮ್ಮಿಬ್ಬರ ನಿಶ್ಚಿತಾರ್ಥ ನಡೆದಿದೆ ಎಂದು ಅರ್ಶ್‌ಪಾಲ್ ಕೌರ್ ಹೇಳಿದ್ದಾರೆ. ತಾನು ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಿಕೊಳ್ಳಬೇಕಾಯಿತು.ಆ ನಂತರ ಸರ್ದಾರ್ ತನ್ನಿಂದ ದೂರವಾಗುತ್ತಾ ಬಂದರಲ್ಲದೆ ತನ್ನನ್ನು ನಿರ್ಲಕ್ಷಿಸಿದರು ಮಾತ್ರವಲ್ಲ ಮದುವೆ ಆಗುವುದಕ್ಕೂ ನಿರಾಕರಿಸಿದರುಎಂದು ಹೇಳಿದ್ದಾರೆ. ಸರ್ದಾರ್ ಸಿಂಗ್ ತನ್ನನ್ನು ಲೈಂಗಿಕ ಶೋಷಣೆ ಮಾಡಿದ್ದು ಮಾತ್ರವಲ್ಲ ಮಾನಸಿಕ ಮತ್ತು ಭಾವನಾತ್ಮಕ ಶೋಷಣೆಯನ್ನೂ ಮಾಡಿದ್ದಾರೆ ಎಂದು ಹರ್ಶ್‌ಪಾಲ್ ಕೌರ್ ಆರೋಪಿಸಿದ್ದಾರೆ. ತಾನೋರ್ವ ಹಾಕಿ ಆಟಗಾರ್ತಿಯಾಗಿದ್ದೇನೆ. ಬ್ರಿಟನ್‌ನ ಅಂಡರ್-19 ಹಾಕಿ ತಂಡದಲ್ಲಿ ಆಡಿದ್ದೇನೆ. ತನ್ನ ತಂದೆ ಬ್ರಿಟನ್‌ನಲ್ಲಿ ಹಾಕಿ ಕೋಚ್ ಆಗಿದ್ದಾರೆ ಎಂದಿರುವ ಹರ್ಶ್‌ಪಾಲ್, ಸರ್ದಾರ್ ಸಿಂಗ್‌ರೊಂದಿಗೆ ಈ ಪ್ರಕರಣದಲ್ಲಿ ಖಂಡಿತಾ ರಾಜಿಯಾಗುವ ಪ್ರಶ್ನೆಯೇ ಇಲ್ಲ. ನ್ಯಾಯಕ್ಕಾಗಿ ಹೋರಾಡುವೆ ಎಂದು ಹೇಳಿರುವುದಾಗಿ ವರದಿಯಾಗಿದೆ.





