ದೇಶದಲ್ಲಿ ಬರಪರಿಸ್ಥಿತಿ ಎದುರಿಸಲು ಪ್ರತ್ಯೇಕ ಟಾಸ್ಕ್‌ಪೋರ್ಸ್ ಕೇಂದ್ರ ಸರಕಾರ ರಚಿಸಬೇಕು: ಸುಪ್ರೀಂಕೋರ್ಟ್

ಹೊಸದಿಲ್ಲಿ, ಮೇ 11: ಸರ್ವೋಚ್ಚ ನ್ಯಾಯಲಯವು ಬರ ಪರಿಸ್ಥಿತಿಯ ಕುರಿತು ಸಲ್ಲಿಸಲಾದ ಅರ್ಜಿಯೊಂದರಲ್ಲಿ ತೀರ್ಪು ನೀಡಿ ಕೇಂದ್ರ ಸರಕಾರ ಈ ಪರಿಸ್ಥಿತಿಯನ್ನು ಪರಿಹರಿಸಲು ಸ್ಪೆಶಲ್ ಟಾಸ್ಕ್ ಪೊರ್ಸ್‌ನ್ನು ರಚಿಸಬೇಕೆಉ ಎಂದು ಹೇಳಿದೆ. ಆದರೆ ಸುಪ್ರೀಂಕೋರ್ಟ್ ಮೂರು ಭಾಗಗಳಾಗಿ ಬರ ಪರಿಸ್ಥಿತಿಯ ಕುರಿತು ತೀರ್ಪು ನೀಡಲಿದೆ. ಇಂದು ನೀಡಿರುವ ತೀರ್ಪು ಅದರ ಮೊದಲ ಭಾಗವಾಗಿದೆ. ದೇಶದ ಸರ್ವೋಚ್ಚ ನ್ಯಾಯಲಯವು ಕೇಂದ್ರ ಸರಕಾರ ಮಾತ್ರವಲ್ಲ ರಾಜ್ಯಗಳಿಗೂ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದಿದ್ದುದಕ್ಕಾಗಿ ತರಾಟೆಗೆ ತೆಗೆದುಕೊಂಡಿದೆ. ಸವೋರ್ಚ್ಚ ನ್ಯಾಯಾಲಯವು ರಾಜ್ಯಗಳು ಬರಗ್ರಸ್ತ ಎಂದು ಘೋಷಿಸುವಾಗ ಅದರಲ್ಲಿ ಆತ್ಮಹತ್ಯೆ ಮತ್ತು ರೈತರ ವಲಸೆಯನ್ನೂ ಸೇರಿಸಿಕೊಳ್ಳಬೇಕು ಎಂದು ಹೇಳಿದೆ. ಸರ್ವೋಚ್ಚ ನ್ಯಾಯಲಯ ಕೇಂದ್ರ ಸರಕಾರದ ಕೃಷಿ ಸಚಿವರಿಗೆ ಬಿಹಾರ, ಹರಿಯಾಣ, ಗುಜರಾತ್‌ನ ಮುಖ್ಯ ಕಾರ್ಯದಶಿಗಳ ಜೊತೆ ಒಂದು ವಾರದೊಳಗೆ ಸಭೆಯನ್ನು ನಿರ್ಧರಿಸಬೇಕು. ಮತ್ತು ಅಲ್ಲಿ ಬರ ಪರಿಸ್ಥಿತಿ ಇದೆಯೇ ಇಲ್ಲವೇ ಎಂದು ತಿಳಿದುಕೊಳ್ಳಬೇಕೆಂದು ಆದೇಶಿಸಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶ ಪ್ರಕಾರ ಬರಪರಿಸ್ಥಿತಿಯ ಕುರಿತು ತಯಾರಿಸಿರುವ ಡ್ರಾಫ್ಟ್‌ನ್ನು ಕೂಡಾ ರಿವೈರ್ ಮಾಡಲಾಗುವುದು ಮತ್ತುಅದರಲ್ಲಿ ರಾಜ್ಯ ಯಾವಾಗ ಬರಘೋಷಿಸಬೇಕೆಂದುಸಮಯವನ್ನು ನಿರ್ಧರಿಸಲಾಗುತ್ತದೆ. ಬರಪರಿಸ್ಥಿತಿಯನ್ನು ಎದುರಿಸಲಿಕ್ಕಾಗಿ ಸರಕಾರ ಆಧುನಿಕ ತಂತ್ರಜ್ಞಾನವನ್ನೂ ಸರಕಾರ ಬಳಸಿಕೊಳ್ಳಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದೆ ಎಂದು ವರದಿಯಾಗಿದೆ. ಇದಕ್ಕಿಂತ ಮೊದಲು ಎಪ್ರಿಲ್ 27ರಂದು ಸರ್ವೋಚ್ಚನ್ಯಾಯಲಯ ಐಪಿಎಲ್ ಮ್ಯಾಚ್‌ನ ವಿಚಾರದಲ್ಲಿ ಮುಂಬೈ ಮತ್ತು ಎಮ್‌ಸಿಎಯ ಅರ್ಜಿಯನ್ನುವಿಚಾರಣೆಗೆತ್ತಿಕೊಂಡಿತ್ತು.ಮಹಾರಾಷ್ಟ್ರದಲ್ಲಿ ಮಾರ್ಚ್ ಒಂದರನಂತರ ಐಪಿಎಲ್ ಪಂದ್ಯಾಟಗಳಿಗೆ ತಡೆ ವಿಧಿಸಿತ್ತು.





