ಒತ್ತಡ ಮುಕ್ತರಾಗಲು ಹಲವು ಸರಳ ಉಪಾಯಗಳು
ಪ್ರತೀ ದಿನ ಒತ್ತಡ ಮುಕ್ತರಾಗಲು ಈ ಕೆಳಗಿನವುಗಳನ್ನು ಅಭ್ಯಾಸ ಮಾಡಬಹುದು.
ನಗುವುದನ್ನು ಕಲಿಯಿರಿ
ನಮಗೆಲ್ಲರಿಗೂ ಮನೆ ಮತ್ತು ವೃತ್ತಿಯ ಜವಾಬ್ದಾರಿಗಳಿವೆ. ಅದರ ಬಗ್ಗೆ ಅತಿಯಾಗಿ ಯೋಚಿಸುವುದು ನೋವಿಗೆ ಕಾರಣವಾಗಬಹುದು. ಮಾನಸಿಕ ಮತ್ತು ದೈಹಿಕ ನೋವು ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಪ್ರಿಯವಾದ ಹಾಸ್ಯ ಸನ್ನಿವೇಶಗಳನ್ನು ನೋಡಿ. ಪ್ರಿಯ ಸ್ನೇಹಿತರ ಜೊತೆಗೆ ಮಜಾ ಸನ್ನಿವೇಶಗಳ ಬಗ್ಗೆ ಮಾತನಾಡಿ ನಗಿ. ಪ್ರತೀ ಬಾರಿ ನೀವು ದೊಡ್ಡದಾಗಿ ನಕ್ಕಾಗ ಆಮ್ಲಜನಕವು ಎಲ್ಲಾ ಅಂಗಗಳಿಗೂ ಹರಿದು ರಕ್ತ ಪರಿಚಲನೆ ಹೆಚ್ಚಾಗುತ್ತದೆ ಮತ್ತು ಒತ್ತಡ ತನ್ನಿಂತಾನಾಗೇ ಕಡಿಮೆಯಾಗುತ್ತದೆ.
ಗೊಂದಲ ಬೇಡ
ಹಲವಾರು ವಿಷಯಗಳ ನಡುವೆ ಸಿಲುಕಿಕೊಂಡಿದ್ದೀರಾ? ಬಹಳ ಕೆಲಸ ಒಟ್ಟಿಗೆ ಸೇರಿ ನಿಮ್ಮನ್ನು ಒತ್ತಡದಲ್ಲಿ ಹಾಕಿದೆಯೇ? ಯಾವಾಗಲೂ ಕಾತುರತೆ ಮತ್ತು ಆತಂಕದ ಸ್ಥಿತಿಯಲ್ಲೇ ಇರುತ್ತೀರಾ? ಹಾಗಿದ್ದರೆ ಗೊಂದಲ ನೀಗಿಸಿ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಎಲ್ಲವನ್ನೂ ಒಟ್ಟಿಗೆ ಮಾಡಲು ಹೋಗಬೇಡಿ. ಅದು ನಿಮ್ಮನ್ನು ಇನ್ನಷ್ಟು ಒತ್ತಡಕ್ಕೆ ನೂಕಲಿದೆ. ಸಣ್ಣ ಜಾಗ ಮಾಡಿಕೊಂಡು ನಂತರ ದೊಡ್ಡ ವಿಷಯಗಳಿಗೆ ಕೈ ಹಾಕಿ. ಹೀಗೆ ಹೆಚ್ಚು ಒತ್ತಡವಿಲ್ಲದ ಜೀವನ ತೃಪ್ತಿಕರವಾಗಲಿದೆ.
ಮನೆಕೆಲಸ ಮಾಡಿ
ಇದು ವಿಚಿತ್ರ ಎನಿಸಬಹುದು. ಆದರೆ ನಿತ್ಯವೂ ವಿಭಿನ್ನ ಕೆಲಸ ಮಾಡುವುದು ಉತ್ತಮ. ಪ್ರಿಯ ಸಂಗೀತ ಅಥವಾ ಟಿವಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಡಬೇಕಾದ ವಿಷಯಗಳ ಪಟ್ಟಿ ಮಾಡಿ ಕೆಲಸ ಶುರು ಮಾಡಿ. ಕ್ಯಾಲರಿ ಕಡಿಮೆ ಮಾಡಲು ವ್ಯಾಯಾಮ ಮಾಡಿ. ಇದೆಲ್ಲ ಒತ್ತಡ ಕಡಿಮೆ ಮಾಡಲಿದೆ.
ಜ್ಯೂಸ್ ಕುಡಿಯಿರಿ
ವಿಟಮಿನ್ ಸಿ ಇರುವ ಕಿತ್ತಳೆ ರಸ ನಿಮ್ಮ ಒತ್ತಡ ಕಡಿಮೆ ಮಾಡಿ ಹಾರ್ಮೋನುಗಳಿಗೆ ತಾಜಾತನ ನೀಡುತ್ತದೆ. ವಿಟಮಿನ್ ಸಿ ಹೆಚ್ಚಿರುವ ಕಿತ್ತಳೆ ರಸ, ಗ್ರೇಪ್ ಫ್ರುಟ್, ಸ್ಟ್ರಾಬೆರಿ ಮತ್ತು ಸ್ವೀಟ್ ರೆಡ್ ಪೆಪ್ಪರುಗಳ ರಸ ಕುಡಿಯುವುದು ನಿರೋಧಕ ಶಕ್ತಿ ಏರಿಸಲಿದೆ.
ದೊಡ್ಡ ಧ್ವನಿಯಲ್ಲಿ ಹಾಡಿ
ಕಳೆದ ಬಾರಿ ದೊಡ್ಡ ಧ್ವನಿಯಲ್ಲಿ ಹಾಡಿದ್ದು ಯಾವಾಗ? ರೇಡಿಯೋ ಜೊತೆಗೆ ನಿಮ್ಮ ಧ್ವನಿಯೂ ಬೆರೆಯಲಿ. ನೀವು ಎಷ್ಟೇ ಕೆಟ್ಟದಾಗಿ ಹಾಡಿದರೂ ಪರವಾಗಿಲ್ಲ, ಹೀಗೆ ಧ್ವನಿಗೂಡಿಸಿ ಹಾಡುವುದರಿಂದ ಒತ್ತಡ ಕಡಿಮೆಯಾಗಲಿದೆ. ಹಾಡುವುದು ಉಸಿರಾಟ, ಹೃದಯ ಮತ್ತು ನಿರೋಧಕ ವ್ಯವಸ್ಥೆಗೆ ಉತ್ತಮ.
ನಡೆದಾಡಿ
ಒತ್ತಡ ಕಡಿಮೆ ಮಾಡಲು ಉತ್ತಮ ದಾರಿ ವ್ಯಾಯಾಮ. ದೇಹದಲ್ಲಿ ಎಂಡ್ರೊಫಿನ್ಸ್ ಉತ್ಪನ್ನವಾಗಿ ತಾಜಾತನ ಸಿಗುತ್ತದೆ. ಬೆಚ್ಚಗಿನ ಹವೆಯಲ್ಲಿ ವ್ಯಾಯಾಮ ಅಥವಾ ವೇಗದ ನಡಿಗೆ ಒತ್ತಡ ಕಡಿಮೆ ಮಾಡಲಿದೆ.
ಆಳವಾಗಿ ಉಸಿರಾಡಿ
ಲ್ಯಾವೆಂಡರ್ ಅಥವಾ ರೋಸ್ಮೆ ಸೆಂಟು ಹಚ್ಚಿ ಆಳವಾಗಿ ಉಸಿರಾಡಿ. ಇದು ಒತ್ತಡ ಹಾರ್ಮೋನ್ ಕೊರ್ಟಿಸಾಲ್ ರಿಲ್ಯಾಕ್ಸ್ ಆಗಲು ನೆರವಾಗುತ್ತದೆ. ಸೆಂಟು ಇಷ್ಟವಾಗದಿದ್ದರೆ ಆಳವಾಗಿ ಉಸಿರಾಟ ಅಭ್ಯಾಸ ಮಾಡಿ. ಇದು ನಿಮ್ಮ ರಕ್ತನಾಳಗಳಿಗೆ ಆಮ್ಲಜನಕ ಕಳುಹಿಸಿ ಒತ್ತಡ ನಿವಾರಿಸಿ ಶಾಂತವಾಗಲು ನೆರವಾಗುತ್ತದೆ.
ಕೃಪೆ : Times of India