ಜೋಕಟ್ಟೆ: ಶಾಲೆಯ ಸಮೀಪದ ಮನೆಗೆ ಬೆಂಕಿ

ಜೋಕಟ್ಟೆ, ಮೇ 11: ಐತಿಹಾಸಿಕ 'ಸಾಹಿರಿ ಮಹಲ್' ಹಳೆ ಮನೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಸಾವು ನೋವು ಸಂಬವಿಸಿಲ್ಲ ಎಂದು ತಿಳಿದುಬಂದಿದೆ.
ಬೆಂಕಿ ಅನಾಹುತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ವಾಗಿರಬಹುದು ಎಂದು ಶಂಕಿಸಲಾಗಿದೆ ಎಮ್.ಆರ್.ಪಿ.ಎಲ್ ಘಟಕ ಮತ್ತು ಅಗ್ನಿ ಶಾಮಕ ದಳ ದ ಹಾಗೂ ನಾಗರಿಕರಿಂದ ಬೆಂಕಿ ಯನ್ನು ಆರಿಸುವ ಪ್ರಯತ್ನ ಮಾಡುತ್ತಿದ್ದಾರೆ.
150 ವರ್ಷಗಳ ಇತಿಹಾಸವಿರುವ ಐತಿಹಾಸಿಕ ಜೋಕಟ್ಟೆಯ 'ಸಾಹಿರಿ ಮಹಲ್' ಆಕಸ್ಮಿಕ ಬೆಂಕಿಗೆ ಆಹುತಿಯಾಗಿದ್ದು, ಎಮ್.ಆರ್.ಪಿ.ಎಲ್. ಮತ್ತು ಅಗ್ನಿಶಾಮಕದಳ ದವರೊಂದಿಗೆ ಬೆಂಕಿ ನಂದಿಸಲು ಎಸ್.ಡಿ.ಪಿ.ಐ. ಮುಲ್ಕಿ, ಮೂಡಬಿದಿರೆ ಕ್ಷೇತ್ರಾಧ್ಯಕ್ಷರಾದ ಎ.ಕೆ.ಅಶ್ರಫ್ ಮತ್ತು ಕಾರ್ಯಕರ್ತರು ಸಹಕರಿಸುತ್ತಿದ್ದಾರೆ.
Next Story





