ನಿಮ್ಮ ಕಂಪ್ಯೂಟರ್ ಗೆ ವಾಟ್ಸ್ ಆಪ್ ಡೌನ್ ಲೋಡ್ ಮಾಡಿಕೊಳ್ಳುವುದು ಹೀಗೆ

ವಾಷಿಂಗ್ಟನ್, ಮೇ 11 : ವಾಟ್ಸ್ ಆಪ್ ಬಕೆದಾರರಿಗೊಂದು ಸಂತಸದ ಸುದ್ದಿ. ವಿಂಡೋಸ್ 8 ಹಾಗೂ ಮೇಲ್ಪಟ್ಟು ಮತ್ತು ಮ್ಯಾಕ್ ಓಎಸ್ 10.9 + ಸಾಧನಗಳಿಗೆ ಈಗ ವಾಟ್ಸ್ ಆಪ್ ನ ಡೆಸ್ಕ್ ಟಾಪ್ ಆ್ಯಪ್ ಡೌನ್ ಲೋಡ್ ಗೆ ಲಭ್ಯವಿದೆ. ಇಲ್ಲಿಯ ತನಕ ಈ ಮೆಸೇಜಿಂಗ್ ಸರ್ವಿಸಿಂಗನ್ನು ಪರ್ಸನಲ್ ಕಂಪ್ಯೂಟರ್ ಅಥಾ ಮ್ಯಾಕ್ ಬುಕ್ ನ ಇಂಟರ್ನೆಟ್ ಬ್ರೌಸರ್ ನಲ್ಲಿ ತೆರೆಯಲು ಇದ್ದ ಒಂದೇ ಒಂದು ಆಯ್ಕೆ ವಾಟ್ಸ್ಆಪ್ ವೆಬ್ ಆಗಿತ್ತು.
ವಾಟ್ಸ್ ಆಪ್ ಡೆಸ್ಕ್ ಟಾಪ್ ಆ್ಯಪ್ ಡೌನ್ ಲೋಡ್ ಮಾಡುವುದು ಹೀಗೆ :
ಮೊದಲು ನೀವು ವಾಟ್ಸ್ ಆಪ್ ನ ಅಧಿಕೃತ ವೆಬ್ ಸೈಟ್ ವಾಟ್ಸ್ ಆಪ್.ಕಾಂಗೆ ಹೋಗಿ ಅಲ್ಲಿಂದ ಆ್ಯಪ್ ಡೌನ್ ಲೋಡ್ ಮಾಡಿ. ಅದು ಇನ್ ಸ್ಟಾಲ್ ಆದ ಮೇಲೆ ಐಕಾನ್ ಮೇಲೆ ಕ್ಲಿಕ್ ಮಾಡಿ ಅದನ್ನು ತೆರೆದಾಗ ವಾಟ್ಸ್ ಆಪ್ ವೆಬ್ ನಲ್ಲಿದ್ದಂತೆ ಕ್ಯೂ ಆರ್ ಸ್ಕ್ಯಾನ್ ಕೋಡ್ ಕಾಣುವಿರಿ.
ನಿಮ್ಮ ಸ್ಮಾರ್ಟ್ ಫೋನಿನಲ್ಲಿ ವಾಟ್ಸ್ ಆಪ್ ವೆಬ್ ಅನ್ನು ಸೆಟ್ಟಿಂಗ್ಸ್ ನಲ್ಲಿ ತೆರೆದು ಮತ್ತೆ ಡೆಸ್ಕ್ ಟಾಪ್ ನಲ್ಲಿ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಿ. ಆಗ ನಿಮ್ಮ ಫೋನಿನಲ್ಲಿರುವ ವಾಟ್ಸ್ ಆಪ್ ನಿಮ್ಮ ಡೆಸ್ಕ್ ಟಾಪ್ ಆ್ಯಪ್ ನೊಂದಿಗೆ ಹೊಂದಿಕೊಂಡು ನೀವು ನಿಮ್ಮ ಡೆಸ್ಕ್ ಟಾಪ್ ನಿಂದಲೇ ಚ್ಯಾಟ್ ಮಾಡಬಹುದಾಗಿದೆ.
ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಕಾಣುವಂತಹುದೇ ವಿಷಯವನ್ನು ನೀವು ನಿಮ್ಮ ಡೆಸ್ಕ್ ಟಾಪ್ವಾಟ್ಸ್ ಆಪ್ ನಲ್ಲಿ ಕಾಣುತ್ತಿರುವುದರಿಂದ ಚ್ಯಾಟಿಂಗ್ ಮುಂದುವರಿಸಲು ನಿಮಗೆ ನಿರಂತರ ಇಂಟರ್ನೆಟ್ ಸಂಪರ್ಕ ಬೇಕಾಗುತ್ತದೆ. ಡೆಸ್ಕ್ ಟಾಪ್ ನಲ್ಲಿ ನೀವು ಪ್ರತ್ಯೇಕ ಬ್ರೌಸರ್ ಟ್ಯಾಬ್ ತೆರೆಯದೆ ನೇರವಾಗಿ ಆ್ಯಪ್ ಉಪಯೋಗಿಸಬಹುದಾಗಿದೆ.







