ಕೇರಳದ ಸೋಲಾರ್ ಹಗರಣ: ಸರಿತಾರಿಂದ ಮುಖ್ಯಮಂತ್ರಿ ಚಾಂಡಿ ವಿರುದ್ಧ ಮತ್ತೆ ಭಾರೀ ಆರೋಪ!

ಕೊಚ್ಚಿ, ಮೇ 11: ಸೋಲಾರ್ ಹಗರಣವಲ್ಲದೆ ಇತರ ಹಲವು ವ್ಯವಹಾರಗಳಲ್ಲಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಗಾಗಿ ತಾನು ಮಧ್ಯವರ್ತಿಯಾಗಿದ್ದೆ ಎಂದು ಸರಿತಾ ಎಸ್.ನಾಯರ್ ಹೇಳಿದ್ದಾರೆ. ಸೋಲಾರ್ ಆಯೋಗಕ್ಕೆ ಇನ್ನಷ್ಟು ಸಾಕ್ಷ್ಯಗಳನ್ನು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಅವರು ಎರಡು ಪೆನ್‌ಡ್ರೈವ್‌ಗಳು ಕೆಲವು ದಾಖಲೆಗಳಿದ್ದ ಸಾಕ್ಷ್ಯಗಳನ್ನು ಆಯೋಗಕ್ಕೆ ಹಸ್ತಾಂತರಿಸಿದ್ದಾರೆ. ಮುಖ್ಯಮಂತ್ರಿ, ಸಚಿವರುಗಳು ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳ ವಿರುದ್ಧ ಸಾಕ್ಷ್ಯಗಳಿರುವ ದಾಖಲೆಯನ್ನೂ , ಜೈಲಲ್ಲಿ ಬರೆದ ಪತ್ರವನ್ನೂ ಸರಿತಾ ಆಯೋಗದ ಮುಂದೆ ಹಾಜರು ಪಡಿಸಿದರೆಂದು ವರದಿಯಾಗಿದೆ.
ಕೊಚ್ಚಿನ್ ಪೋರ್ಟ್‌ಟ್ರಸ್ಟ್‌ನ ಜಾಗವನ್ನು ಹಸ್ತಾಂತರಿಸುವುದಕ್ಕೆ ಸಂಬಂಧಿಸಿ ತಾನು ಮಧ್ಯವರ್ತಿಯಾಗಿ ವರ್ತಿಸಿದ್ದರ ಸಾಕ್ಷ್ಯಗಳನ್ನು ಮುಂದಿನ ಶುಕ್ರವಾರ ಆಯೋಗಕ್ಕೆ ನೀಡಲಿದ್ದೇನೆ ಎಂದು ಸರಿತಾ ಹೇಳಿದ್ದಾರೆ. ಕೇರಳದಿಂದ ಸಹಿಸಿಕೊಳ್ಳಲು ಸಾಧ್ಯವಿಲ್ಲದ ಹಲವು ಸಾಕ್ಷ್ಯಗಳು ಅದರಲ್ಲಿರುತ್ತವೆ ಎಂದು ಸರಿತಾ ತಿಳಿಸಿದ್ದಾರೆ.
ಈ ಸರಕಾರ ಪುನಃ ಅಧಿಕಾರಕ್ಕೆಬಂದರೆ ತನ್ನನ್ನೂ ತನ್ನ ಕುಟುಂಬವನ್ನೂ ಮುಗಿಸಿಬಿಡುವುದೇ ಎಂದು ಹೆದರಿಕೆಯಾಗುತ್ತಿದೆ.ಸೋಲಾರ್ ವ್ಯವಹಾರದಲ್ಲಿ ರಾಜಕಾರಣಿಗಳ ಪಾಲು ಏನೆಂದು ಬಹಿರಂಗ ಪಡಿಸುವುದಿಲ್ಲ ಎಂದು ಈ ಮೊದಲು ನಿರ್ಧರಿಸಿದ್ದೆ ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ಮಾತ್ರ ಮಾನಹಾನಿಯಾಗಿದೆ. ತನಿಖೆಗೆ ಆಗ್ರಹಿಸಿ ಕೋರ್ಟ್‌ಗೆ ಹೋದಾಗಲೂ ತನಗೆ ನ್ಯಾಯ ಸಿಗಲಿಲ್ಲ. ಕೋರ್ಟ್ ಇವೆಲ್ಲ ತನ್ನಿಂದ ನಂಬಲು ಸಾಧ್ಯವಿಲ್ಲ ಎಂಬ ಪರಾಮರ್ಶೆ ನೀಡಿತು ಎಂದು ಸರಿತಾ ಹೇಳಿದರು. ಈಗ ರಾಜಕಾರಣಿಗಳು ತನ್ನ ವಿರುದ್ಧ ಮಾನನಷ್ಟ ಕೇಸು ಹಾಕಿದ್ದರಿಂದ ಇನ್ನು ಯಾವುದನ್ನೂ ಗುಟ್ಟಾಗಿಡುವುದಿಲ್ಲ. ತಾನು ಬರೆದ ಪತ್ರ ಮಾಧ್ಯಮಗಳಿಗೆ ಸೋರಿಕೆಯಾಗಿರುವ ಪರಿಸ್ಥಿತಿಯಲ್ಲಿ ಇನ್ನು ಏನನ್ನೂ ಮುಚ್ಚಿ ಇಡುವುದಕ್ಕೆ ಅರ್ಥವೂಇಲ್ಲ ಎಂದು ಸರಿತಾ ಹೇಳಿರುವುದಾಗಿ ವರದಿಯಾಗಿದೆ.







