2 ಕಾರುಗಳು ಜಖಂ, ಓರ್ವನಿಗೆ ಗಾಯ
ಮನೆಯ ಆವರಣಕ್ಕೆ ನುಗ್ಗಿದ ಕಾರು

ಮಡಿಕೇರಿ, ಮೇ 11: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮನೆಯ ತಡೆಗೋಡೆಗೆ ಅಪ್ಪಳಿಸಿ ನಂತರ ಮನೆಯ ಶೆಡ್‌ನಲ್ಲಿ ನಿಲ್ಲಿಸಿದ್ದ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದ ಘಟನೆ ಸುಂಟಿಕೊಪ್ಪ ಸಮೀಪ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಕಾರು ಸಂಪೂರ್ಣ ಜಖಂಗೊಂಡಿದ್ದು, ಓರ್ವನ ಕಾಲು ಮುರಿತಕ್ಕೊಳಗಾಗಿದೆ. ಮಧ್ಯರಾತ್ರಿ ಕುಶಾಲನಗರ ಕಡೆಯಿಂದ ಮಡಿಕೇರಿಗೆ ತೆರಳುತ್ತಿದ್ದ ಕಾರು 7 ನೆ ಹೊಸಕೋಟೆ ರಾಜ್ಯ ಹೆದ್ದಾರಿ ಬಳಿ ಚಾಲಕನ ನಿಯಂತ್ರಣ ತಪ್ಪಿದೆ. ಸ್ಥಳೀಯ ನಿವಾಸಿ ಕೆ.ಕೆ.ರಾಜೇಂದ್ರ ಅವರ ಮನೆಯ ತಡೆಗೋಡೆಗೆ ಅಪ್ಪಳಿಸಿ ಬಂದು ಶೆಡ್‌ನಲ್ಲಿ ನಿಲ್ಲಿಸಿದ್ದ ಕಾರಿಗೆ ಢಿಕ್ಕಿಯಾಗಿದೆ. ಪರಿಣಾಮ ಎರಡೂ ವಾಹನಗಳು ನಜ್ಜುಗುಜ್ಜಾಗಿವೆೆ. ಕಾರಿನಲ್ಲಿ 4 ಮಂದಿ ಸಂಚರಿಸುತ್ತಿದ್ದು, ಅವಘಡದಿಂದ ಓರ್ವನ ಕಾಲುಮುರಿತಕ್ಕೊಳಗಾಗಿದ್ದು, ಹೆಚ್ಚಿನ ಅನಾಹುತ ತಪ್ಪಿದೆ ಎಂದು ತಿಳಿದು ಬಂದಿದೆ.
Next Story





