ಅಂಕೋಲಾ ತಾಲೂಕು ಪಂಚಾಯತ್ ಅಧ್ಯಕ್ಷೆ ಸುಜಾತಾ, ಉಪಾಧ್ಯಕ್ಷೆ ತುಳಸಿ ಆಯ್ಕೆ

ಅಂಕೋಲಾ, ಮೇ 11: ತಾಲೂಕು ಪಂಚಾಯತ್‌ನ ನೂತನ ಅಧ್ಯಕ್ಷೆಯಾಗಿ ಸುಜಾತಾ ಟಿ. ಗಾಂವಕರ, ಉಪಾಧ್ಯಕ್ಷೆ ಯಾಗಿ ತುಳಸಿ ಸುಕ್ರು ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಪಂಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಹೊಂದಿದ್ದು, ಸಾಮಾನ್ಯ ಮಹಿಳೆಗೆ ಮೀಸಲಿಟ್ಟಿದ ಅಧ್ಯಕ್ಷ ಸ್ಥಾನಕ್ಕೆ ಸದಸ್ಯೆ ಶಾಂತಿ ಆಗೇರ ಅವರು ಸುಜಾತ ಗಾಂವಕರ ಹೆಸರನ್ನು ಸೂಚಿಸಿದರು. ಚುನಾವಣಾಧಿಕಾರಿ ಡಿ. ಶೋಭಾ ಘೋಷಿಸಿದರು. ಈ ಸಂದರ್ಭದಲ್ಲಿ ಶಾಸಕ ಸತೀಶ ಸೈಲ್, ತಹಶೀಲ್ದಾರ್ ವಿ.ಜಿ.ಲಾಂಜೇಕರ್, ತಾಪಂ ಇಒ ವಿಲಾಸರಾಜ್, ಜಿಪಂ ಸದಸ್ಯೆ ಉಷಾ ಉದಯ ನಾಯ್ಕ, ಜಿಪ ಮಾಜಿ ಅಧ್ಯಕ್ಷ ರಮಾನಂದ ಬಿ. ನಾಯಕ, ಜಿಪಂ ಮಾಜಿ ಅಧ್ಯಕ್ಷೆ ಸರಸ್ವತಿ ಗೌಡ, ಮಾಜಿ ಸದಸ್ಯ ವಿನೋದ ಬಿ. ನಾಯಕ, ತಾಪಂ ಸದಸ್ಯರಾದ ಮಂಜುನಾಥ ದತ್ತಾ ನಾಯ್ಕ, ಸಂಜಯ ಕುಚಿನಾಡು, ವಿಲ್ಸನ್ ಡಿಕೋಸ್ತಾ, ನಂದಾ ಆರ್. ನಾಯ್ಕ, ಪ್ರಿಯಾ ವಿನೋದ ನಾಯ್ಕ, ಸವಿತಾ ಗೌಡ, ಬೀರಾ ಬೈರು ಗೌಡ, ವೀಣಾ ಉದಯ ಸಿದ್ದಿ, ಪ್ರಮುಖರಾದ ಸಾಯಿ ಗಾಂವಕರ, ಪಾಂಡು ರಂಗ ಗೌಡ, ಪುರುಷೋತ್ತಮ ನಾಯ್ಕ, ಹೂವಾ ಖಂಡೇಕರ, ಸುರೇಶ ನಾಯಕ, ರಾಜೇಶ ನಾಯ್ಕ, ಮಾದೇವ ಗೌಡ, ಮೊನ್ನಪ ನಾಯ್ಕ ಭಾವಿಕೇರಿ, ಮಂಜುಳಾ ವೇರ್ಣೇಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





