ಮೋದಿ ಟೀಕೆಗೆ ಸಿಪಿಎಂ ಪ್ರತ್ಯುತ್ತರ
‘ಸೊಮಾಲಿಯ’ ಹೇಳಿಕೆ
ಹೊಸದಿಲ್ಲಿ, ಮೇ 11 : ಕೇರಳ ರಾಜ್ಯವನ್ನು ಸೊಮಾಲಿಯಕ್ಕೆ ಹೋಲಿಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ಟೀಕೆಗೆ ಪ್ರತ್ಯುತ್ತರವಾಗಿ ಪ್ರತಿಕ್ರಿಯಿಸಿರುವ ಸಿಪಿಎಂ, ಆಫ್ರಿಕಾ ದೇಶಗಳ ಮಾನವ ಅಭಿವೃದ್ಧಿ ಸೂಚ್ಯಂಕಗಿಂತಲೂ ಕೇರಳ ರಾಜ್ಯ ಮುಂದಿದೆ ಎಂದು ತಿಳಿಸಿದೆ.
ಸೋಮಾಲಿಯ ಎಚ್‌ಡಿಐ ಸೂಚ್ಯಂಕ 0.285ರಷ್ಟು (229 ರ್ಯಾಂಕ್) ಯಿದ್ದರೆ, ಕೇರಳ ರಾಜ್ಯ 0.712 ರಷ್ಟು ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್‌ಡಿಐ )ಒಳಗೊಂಡಿದೆ.ಇದು ಭಾರತದಲ್ಲಿ ಅತೀ ಹೆಚ್ಚು ಎಚ್‌ಡಿಐ ಹೊಂದಿರುವ ಏಕೈಕ ರಾಜ್ಯ ಕೇರಳ ಆಗಿದೆ. ಇದು ಜಾಗತಿಕವಾಗಿ 104 ನೆ ರ್ಯಾಂಕ್ ಸ್ಥಾನದಲ್ಲಿದೆ
ಎಂದು ಪ್ರಧಾನ ಮಂತ್ರಿಯ ಹೆಸರನ್ನು ಉಲ್ಲೇಖಿಸದೇ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಟ್ವೀಟ್‌ನಲ್ಲಿ ಹೇಳಿದ್ದಾರೆ.ಮಾಧ್ಯಮಗಳ ವರದಿಯ ಪ್ರಕಾರ , ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಸೋಮಾಲಿಯಕ್ಕಿಂತ ಹೆಚ್ಚಿದೆ ಮತ್ತು ಕೇರಳದ ನಿರುದ್ಯೋಗ ಪ್ರಮಾಣ ರಾಷ್ಟ್ರ ಮಟ್ಟಕ್ಕೆ ಹೋಲಿಸುವುದಾದರೆ ಮೂರು ಪಟ್ಟು ಹೆಚ್ಚಿದೆ ಎಂದು ರವಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿಯವರು ಹೇಳಿದ್ದರೆನ್ನಲಾಗಿದೆ.ಪ್ರಧಾನಿ ಮೋದಿಯವರ ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.





