16ರ ವಿಕೆಟ್ ಕೀಪರನ್ನು ಹೊಡೆದು ಸಾಯಿಸಿದ ಬ್ಯಾಟ್ಸ್ ಮ್ಯಾನ್

ಢಾಕಾ : ನೋ-ಬಾಲ್ ವಿಷಯವಾಗಿ ಅಂಪೈರನ್ನು ವ್ಯಂಗ್ಯವಾಡಿದ ಹದಿಹರೆಯದ ಕ್ರಿಕೆಟರ್ ಒಬ್ಬನನ್ನು ಕೈಯಲ್ಲಿ ಸ್ಟಂಪ್ ಹಿಡಿದುಕೊಂಡು ಬಂದ ಬ್ಯಾಟ್ಸ್ ಮ್ಯಾನ್ ಹೊಡೆದು ಸಾಯಿಸಿದ ಆಘಾತಕಾರಿ ಘಟನೆಢಾಕಾದಿಂದ ಬುಧವಾರ ವರದಿಯಾಗಿದೆ.
ಮೃತ ಹುಡುಗನನ್ನು 16 ವರ್ಷದ ಬಾಬುಲ್ ಶಿಕ್ದರ್ ಎಂದು ಗುರುತಿಸಲಾಗಿದೆ. ಬಾಬುಲ್ ಸ್ಥಳೀಯವಾಗಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯವೊಂದರಲ್ಲಿವಿಕೆಟ್ ಕೀಪರ್ ಆಗಿದ್ದ.ಅಂಪೈರ್ ಬ್ಯಾಟ್ಸ್ ಮ್ಯಾನ್ ಒಬ್ಬನನ್ನು ಔಟ್ ಎಂದು ಘೋಷಿಸಿದಾಗ ಈ ಹಿಂದಿನ ಬಾಲ್ ಡೆಲಿವರಿಯಾದಾಗಲೂ ಔಟ್ ಎಂದು ಘೋಷಿಸಿ ನಂತರ ನೋಬಾಲ್ ಎಂದು ಹೇಳಿ ಬ್ಯಾಟ್ಸ್ ಮೆನ್ ಗೆ ಜೀವದಾನ ನೀಡಿದ್ದ ಅಂಪೈರ್ ಈ ಬಾರಿಯೂ ಹಾಗೆಯೇ ಮಾಡಬಹುದು ಎಂದು ಬಾಬುಲ್ ಹೇಳಿದನೆನ್ನಲಾಗಿದೆ.
ಇದರಿಂದ ಕುಪಿತನಾದ ಬ್ಯಾಟ್ಸ್ ಮ್ಯಾನ್ ಸ್ಟಂಪ್ ತೆಗೆದು ಅದರಿಂದ ಬಾಬುಲ್ ತಲೆಯ ಹಿಂಬದಿಗೆ ಹೊಡೆದೇ ಬಿಟ್ಟಿದ್ದ. ಕೂಡಲೇ ನೆಲಕ್ಕುರುಳಿದ ಬಾಬುಲ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತ ಪಟ್ಟಿದ್ದ.
ಆರೋಪಿ ಬ್ಯಾಟ್ಸ್ ಮ್ಯಾನ್ ಸ್ಥಳದಿಂದ ಕಾಲ್ಕಿತ್ತಿದ್ದು ಆತನಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.





