ಬೈಕ್ ಢಿಕ್ಕಿ: ಕೊಳ್ನಾಡು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಮೃತ್ಯು
ಮಂಗಳೂರು, ಮೇ 11: ರಸ್ತೆ ಬದಿ ನಿಂತಿದ್ದಾಗ ಬೈಕ್ವೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಮ ಮಲಾರು (48) ಇಂದು ಮೃತಪಟ್ಟಿದ್ದಾರೆ.
ರಾಮ ಮಲಾರು ಬುಧವಾರ ಮಧ್ಯಾಹ್ನ ಕೊಳ್ನಾಡು ಪಂಚಾಯತ್ ಕಚೇರಿ ಮುಂದಿನ ಸಾಲೆತ್ತೂರು-ಮುಡಿಪು ರಸ್ತೆ ಬದಿಯಲ್ಲಿ ನಿಂತಿದ್ದ ಸಂದರ್ಭದಲ್ಲಿ ಬೈಕ್ವೊಂದು ಢಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ರಸ್ತೆಗಪ್ಪಳಿಸಲ್ಪಟ್ಟ ಅವರು ತಲೆಗೆ ಗಂಭೀರ ಸ್ವರೂಪ ಗಾಯಕ್ಕೊಳಗಾಗಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
Next Story