ಮಂಗಳೂರಿನಲ್ಲಿ ಗುಡುಗು ಸಹಿತ ಮಳೆ
ಮಂಗಳೂರು, ಮೇ 12: ನಗರದ ಹಲವೆಡೆ ಇಂದು ರಾತ್ರಿ ಸಾಧಾರಣ ಮಳೆ ಸುರಿದ ಬಗ್ಗೆ ವರದಿಯಾಗಿದೆ.
ಮಂಗಳೂರು ನಗರ ವ್ಯಾಪ್ತಿ ಹಾಗೂ ದೇರಳಕಟ್ಟೆ, ಮುಡಿಪು, ಉಳ್ಳಾಲ ಮತ್ತು ಕೊಣಾಜೆ ವ್ಯಾಪ್ತಿಯಲ್ಲಿ ಸುಮಾರು ಅರ್ಧ ಗಂಟೆ ಕಾಲ ಗಾಳಿ, ಮಿಂಡು, ಗುಡುಗು ಸಹಿತ ಮಳೆಯಾಗಿದೆ.
ಬುಧವಾರ ನಗರ ವ್ಯಾಪ್ತಿಯ ಕೆಲವೆಡೆ ಮಾತ್ರ ಸುಮಾರು 10 ನಿಮಿಷ ಕಾಲ ಮಳೆ ಸುರಿದಿತ್ತು. ಇಂದು ರಾತ್ರಿ ಸುಮಾರು 8:15ರಿಂದ ಪ್ರಾರಂಭಗೊಂಡ ಮಳೆಯು ಅರ್ಧ ಗಂಟೆ ಕಾಲ ಮುಂದುವರಿದಿತ್ತು.
Next Story