‘ಮಂಗಳೂರು ಚಲೋ’ ಜಾಥಾದಲ್ಲಿ ಪಾಲ್ಗೊಳ್ಳಲು ಮುಸ್ಲಿಂ ಸೆಂಟ್ರಲ್ ಕಮಿಟಿ ಮನವಿ
ಮಂಗಳೂರು, ಮೇ 12: ದ.ಕ. ಜಿಲ್ಲೆಯ ಜೀವನದಿಯಾದ ನೇತ್ರಾವತಿಯನ್ನು ಉಳಿಸುವ ಪ್ರಯುಕ್ತ ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ಮೇ 16ರಂದು ನೇತ್ರಾವತಿ ಉಳಿಸಿ ಸಂಯುಕ್ತ ರಕ್ಷಣಾ ಸಮಿತಿಯ ಆಶ್ರಯದಲ್ಲಿ ನಡೆಯಲಿರುವ ‘ಮಂಗಳೂರು ಚಲೋ’ ಪ್ರತಿಭಟನಾ ಜಾಥಾದಲ್ಲಿ ಜಿಲ್ಲೆಯ ಜನತೆ ಜಾತಿ, ಮತ ಬೇಧವಿಲ್ಲದೆ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ದ.ಕ ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಗೂ ಮಾಜಿ ಎಂಎಲ್‌ಸಿ ಕೆ.ಎಸ್.ಮುಹಮ್ಮದ್ ಮಸೂದ್ ಕರೆ ನೀಡಿದ್ದಾರೆ.
Next Story





