ಲಾರಿ-ಬಸ್ ಢಿಕ್ಕಿ: ಗಾಯ

ಮಡಿಕೇರಿ, ಮೇ 12: ಚಾಲಕನ ನಿಯಂತ್ರಣ ತಪ್ಪಿದ ಮರಳು ತುಂಬಿದ ಲಾರಿಯೊಂದು ಕೆಎಸ್ಸಾರ್ಟಿಸಿ ಬಸ್‌ಗೆ ಢಿಕ್ಕಿಯಾಗಿ ಬಳಿಕ ರಸ್ತೆಗುರುಳಿದ ಘಟನೆ ಮಡಿಕೇರಿ ಸಮೀಪ ಬೋಯಿಕೇರಿ ತಿರುವಿನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಬಸ್ ನಿರ್ವಾಹಕಿ ಸೇರಿದಂತೆ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಲಾರಿ ಚಾಲಕ ಹಾಗೂ ನಿರ್ವಾಹಕ ಘಟನೆ ನಡೆದ ಸ್ಥಳದಿಂದ ಪರಾರಿಯಾಗಿದ್ದಾರೆ. ಕುಶಾಲನಗರ ಕಡೆಗೆ ಸಾಗುತ್ತಿದ್ದ ಮರಳಿನ ಲಾರಿ ಎದುರು ಭಾಗದಿಂದ ಬಂದ ಬಸ್‌ಗೆ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.
ರಸ್ತೆಯ ಮಧ್ಯದಲ್ಲಿ ಲಾರಿ ಮಗುಚಿದ ಕಾರಣ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಡಿಕೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಲಾರಿಯನ್ನು ತೆರವುಗೊಳಿಸಲು ಕ್ರಮಕೈಗೊಂಡು ಪ್ರಕರಣ ದಾಖಲಿಸಿಕೊಂಡರು.
Next Story





