ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ: ಆಳ್ವಾಸ್ ಮಹಿಳಾ ತಂಡ ಚಾಂಪಿಯನ್

ಮೂಡುಬಿದಿರೆ, ಮೇ 12: ಕರ್ನಾಟಕ ರಾಜ್ಯ ಕಬಡ್ಡಿ ಸಂಸ್ಥೆ ಹಾಗೂ ಕೋಲಾರ ಶ್ರೀನಿವಾಸಪುರದ ಜನ್ಮಭೂಮಿ ವೇದಿಕೆ ವತಿಯಿಂದ ಮೇ 8ರಿಂದ 10 ರವರೆಗೆ ಜರಗಿದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಆಳ್ವಾಸ್ ಮೂಡುಬಿದಿರೆಯ ಮಹಿಳಾ ಕಬಡ್ಡಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಜಯರಾಮ್ ಕಬಡ್ಡಿ ಕ್ಲಬ್ ಬೆಂಗಳೂರು ತಂಡವನ್ನು 30-15 ಅಂಕಗಳ ಅಂತರದೊಂದಿಗೆ ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಇದಕ್ಕೂ ಮೊದಲು ನಡೆದ ಸೆಮಿಫೈನಲ್ಸ್‌ನಲ್ಲಿ ಆಳ್ವಾಸ್ ತಂಡವು ಕರ್ನಾಟಕ ರಾಜ್ಯ ಪೊಲೀಸ್ ತಂಡವನ್ನು ಮತ್ತು ಜಯರಾಮ್ ಕಬಡ್ಡಿ ಕ್ಲಬ್ ತಂಡವು ಶ್ರೀಮಾತಾ ಬೆಂಗಳೂರು ತಂಡವನ್ನು ಪರಾಭವಗೊಳಿಸಿ ಫೈನಲ್ ಪ್ರವೇಶಿಸಿದ್ದವು.
ವಿಜೇತ ತಂಡದ ರಂಜಿತಾ ಡಿ.ಕೆ. ಸವ್ಯಸಾಚಿ ಪ್ರಶಸ್ತಿ ಪಡೆದುಕೊಂಡರು.
Next Story





