ರವೀಂದರ್, ಬಬಿತಾ ಒಲಿಂಪಿಕ್ಸ್‌ಗೆ ಅರ್ಹತೆ
ಹೊಸದಿಲ್ಲಿ, ಮೇ 12: ಎದುರಾಳಿ ಕುಸ್ತಿಪಟುಗಳು ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಕಾರಣ ಭಾರತದ ಕುಸ್ತಿಪಟುಗಳಾದ ರವೀಂದರ್ ಖತ್ರಿ ಹಾಗೂ ಬಬಿತಾ ಕುಮಾರಿ ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಈಮೂಲಕ ಭಾರತದ 8 ಮಂದಿ ಕುಸ್ತಿಪಟುಗಳು ರಿಯೋಗೆ ಅರ್ಹತೆ ಪಡೆದಿದ್ದಾರೆ.
ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಕಿರ್ಜಿಸ್ತಾನದ ಕೆಂಝೀವ್ ಝಾನರ್ಬೆಕ್ ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದ ಕಾರಣ ಗ್ರಿಕೊ-ರೊಮನ್ 85 ಕೆಜಿ ತೂಕದ ವಿಭಾಗದಲ್ಲಿ ಖತ್ರಿ ಒಲಿಂಪಿಕ್ಸ್ ಟಿಕೆಟ್ ಪಡೆದಿದ್ದಾರೆ.
ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ 53 ಕೆಜಿ ಫ್ರೀಸ್ಟೈಲ್‌ನಲ್ಲಿ ಮಂಗೋಲಿಯದ ಸುಮಿಯಾ ಎರ್ಡಿನೆಚಿಮೆಗ್ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಬಬಿತಾ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ.
Next Story





