ಬಂಟ್ವಾಳ: ಕಂದಾಯ ನಿರೀಕ್ಷಕರಿಗೆ ಹಲ್ಲೆ
ಬಂಟ್ವಾಳ, ಮೇ 12: ಇಲ್ಲಿನ ಕಂದಾಯ ನಿರೀಕ್ಷಕ ಆಸ್ೀ ಇಕ್ಬಾಲ್‌ರ ಕಚೇರಿಗೆ ನುಗ್ಗಿದ ಬಿ.ಕಸ್ಬಾ ಗ್ರಾಮದ ಮಣಿ ನಿವಾಸಿ ವಿಶ್ವನಾಥ ಗೌಡ ಎಂಬಾತ ನಿರೀಕ್ಷಕರನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ ಘಟನೆ ಗುರುವಾರ ಬಿ.ಸಿ.ರೋಡ್‌ನಲ್ಲಿ ನಡೆದಿದೆ. ಈ ಬಗ್ಗೆ ಕಂದಾಯ ನಿರೀಕ್ಷಕರು ಆಸ್ಿ ಇಕ್ಬಾಲ್ ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಪತ್ರಿಕೆಗೆ ತಿಳಿಸಿದ್ದಾರೆ.
Next Story





