Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಎಲ್‌ಡಿಎಫ್‌ಗೆ ನೂರಕ್ಕೂ ಹೆಚ್ಚು ಸ್ಥಾನ:...

ಎಲ್‌ಡಿಎಫ್‌ಗೆ ನೂರಕ್ಕೂ ಹೆಚ್ಚು ಸ್ಥಾನ: ಪಿಣರಾಯಿ

ಯುಡಿಎಫ್-ಬಿಜೆಪಿ ಅನೈತಿಕ ಮೈತ್ರಿಯನ್ನು ಕೇರಳದ ಜನತೆ ಸೋಲಿಸುತ್ತಾರೆ

ಸಂದರ್ಶನ: ರೂಮಿ ತಲ್ಹಸಂದರ್ಶನ: ರೂಮಿ ತಲ್ಹ12 May 2016 11:46 PM IST
share
ಎಲ್‌ಡಿಎಫ್‌ಗೆ ನೂರಕ್ಕೂ ಹೆಚ್ಚು ಸ್ಥಾನ: ಪಿಣರಾಯಿ

ಕಾಸರಗೋಡು, ಮೇ 12: ಕೇರಳದಲ್ಲಿ ಮೇ 16 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರ ಅಂತಿಮ ಹಂತದಲ್ಲಿದೆ. ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ನಂತರ ರಾಜ್ಯದಲ್ಲಿ ಸಿಪಿಎಂ ಪಕ್ಷದ ಎರಡನೆ ಅತ್ಯಂತ ಹಿರಿಯ ನಾಯಕ, ಪಕ್ಷದ ಪಾಲಿಟ್‌ಬ್ಯುರೋ ಸದಸ್ಯ ಪಿಣರಾಯಿ ವಿಜಯನ್. ದೇಶದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ರಾಜ್ಯವೊಂದರ ಕಾರ್ಯದರ್ಶಿಯಾಗಿ (1998-2015) ಪಕ್ಷವನ್ನು ಮುನ್ನಡೆಸಿದವರು ಎಂಬ ದಾಖಲೆ ಇವರದ್ದು . 25ನೆ ವರ್ಷಕ್ಕೆ ಅಸೆಂಬ್ಲಿ ಪ್ರವೇಶಿಸಿ, ಒಟ್ಟು ನಾಲ್ಕು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಪಿಣರಾಯಿ ಈ ಚುನಾವಣೆಯಲ್ಲಿ ಎಡರಂಗದ ಪ್ರಚಾರದ ಮುಂಚೂಣಿಯಲ್ಲಿರುವ ನಾಯಕರಲ್ಲೊಬ್ಬರು. ಮಾಜಿ ಮುಖ್ಯಮಂತ್ರಿ ಅಚ್ಯುತಾನಂದನ್ ಅವರಿಗೆ ಈಗಾಗಲೇ 90 ವರ್ಷ ದಾಟಿರುವುದರಿಂದ ಎಡರಂಗ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಅವರ ಬಳಿಕದ ಸ್ಥಾನದಲ್ಲಿರುವವರು. ಚುನಾವಣಾ ಪ್ರಚಾರಕ್ಕೆ ಗುರುವಾರ ಕಾಸರಗೋಡಿಗೆ ಬಂದ ಪಿಣರಾಯಿ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದರು. ಆ ಮಾತುಕತೆ ಇಲ್ಲಿದೆ:

ವಾರ್ತಾಭಾರತಿ: ಹೇಗಿದೆ ಚುನಾವಣಾ ಪ್ರಚಾರ ?

ಪಿಣರಾಯಿ: ಎಡರಂಗದ ಚುನಾವಣಾ ಪ್ರಚಾರ ಅತ್ಯುತ್ತಮವಾಗಿದೆ. ನಮಗೆ ಕೇರಳದಲ್ಲಿ ಎಲ್ಲೆಡೆ ಜನರಿಂದ ಬೆಂಬಲ ವ್ಯಕ್ತವಾಗಿದೆ. ಮತದಾರರಿಂದ ಸ್ವಾಗತ ಸಿಗುತ್ತಿದೆ. ಯುಡಿಎಫ್ ತೀವ್ರ ಸಂಕಷ್ಟದಲ್ಲಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಇನ್ನು ಬಿಜೆಪಿಗೆ ರಾಜ್ಯದ ಯಾವುದೇ ಭಾಗದಲ್ಲೂ ಜನಬೆಂಬಲ ಇಲ್ಲ. ಹಾಗಾಗಿ ಈ ಬಾರಿ ನಮಗೆ ಅತ್ಯುತ್ತಮ ವಾತಾವರಣವಿದೆ. ಒಮ್ಮೆ ಯುಡಿಎಫ್, ಒಮ್ಮೆ ಎಲ್‌ಡಿಎಫ್ ಕೇರಳದಲ್ಲಿ ಅಧಿಕಾರಕ್ಕೆ ಬರುವ ಸಂಪ್ರದಾಯವಿದೆ ಎಂಬ ಕಾರಣಕ್ಕೆ ನಾನು ಹೀಗೆ ಹೇಳುತ್ತಿಲ್ಲ. ಈ ಬಾರಿ ಯುಡಿಎಫ್‌ನ ದುರಾಡಳಿತದಿಂದ ಕೇರಳಿಗರು ಬೇಸತ್ತು ಹೋಗಿದ್ದಾರೆ. ಇದರಿಂದ ಕೇರಳವನ್ನು ಹೊರತರಲು ಕೇವಲ ಎಲ್‌ಡಿಎಫ್ ಗೆ ಮಾತ್ರ ಸಾಧ್ಯ ಎಂದು ಅವರು ಮನಗಂಡಿದ್ದಾರೆ. ಹೀಗಾಗಿ ನಮ್ಮನ್ನೇ ಈ ಬಾರಿ ಬೆಂಬಲಿಸುತ್ತಾರೆ.

ವಾರ್ತಾಭಾರತಿ: ಆದರೆ ಯುಡಿಎಫ್ ಹಾಗೂ ಬಿಜೆಪಿ ನಡುವೆ ಸ್ಪರ್ಧೆಯಿದೆ ಎಂಬಂತೆ ಮುಖ್ಯಮಂತ್ರಿ ಉಮ್ಮಞನ್ ಚಾಂಡಿ ಮಾತನಾಡಿದ್ದಾರೆ.

ಪಿಣರಾಯಿ: ಅದು ಅವರ ಅವಕಾಶವಾದಿ, ಹತಾಶ ಚುನಾವಣಾ ರಾಜಕೀಯದ ನಡೆ. ಬಿಜೆಪಿಗೆ ಸ್ವಲ್ಪ ಲಾಭ ಮಾಡಿಕೊಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳಲು ಅವರು ಮಾಡುತ್ತಿರುವ ಆಟ. ಇದು ಅತ್ಯಂತ ಹಳೆಯ ತಂತ್ರಗಾರಿಕೆ. ವಡಗರ ಲೋಕಸಭಾ ಕ್ಷೇತ್ರ ಹಾಗು ಬೇಪೋರ್ ವಿಧಾನಸಭಾ ಕ್ಷೇತ್ರಗಳಲ್ಲಿ 1991 ರಲ್ಲಿ ಕುಖ್ಯಾತ ‘ಕೋಲಿಬಿಯ (ಕಾಂಗ್ರೆಸ್-ಲೀಗ್- ಬಿಜೆಪಿ)’ ಮೈತ್ರಿಯ ಮೂಲಕ ಎಡರಂಗವನ್ನು ಸೋಲಿಸಲು ಅವರು ಹೊರಟಿದ್ದರು. ಆದರೆ ಕೇರಳದ ಜಾತ್ಯತೀತ, ಪ್ರಜ್ಞಾವಂತ ಮತದಾರರು ಆ ತಂತ್ರವನ್ನು ಸಾರಾಸಗಟಾಗಿ ತಿರಸ್ಕರಿಸಿ ಅವರನ್ನು ಸೋಲಿಸಿಬಿಟ್ಟರು. ಆದರೆ ಅವರು ಇನ್ನೂ ಪಾಠ ಕಲಿತಿಲ್ಲ.

ವಾರ್ತಾಭಾರತಿ: ಯುಡಿಎಫ್‌ನ ಈ ನಡೆಯಿಂದ ಈ ಬಾರಿ ಬಿಜೆಪಿ ವಿಧಾನಸಭೆಗೆ ಪ್ರವೇಶಿಸಬಹುದೇ?

ಪಿಣರಾಯಿ: ಇಲ್ಲವೇ ಇಲ್ಲ. ಏಕೆಂದರೆ ಕೇರಳದಲ್ಲಿ ಜಾತ್ಯತೀತ ಮನೋಭಾವನೆ ಜನರಲ್ಲಿ ಅತ್ಯಂತ ಪ್ರಬಲವಾಗಿದೆ. ‘ಕೋಲಿಬಿ ಯ (ಕಾಂಗ್ರೆಸ್-ಲೀಗ್- ಬಿಜೆಪಿ) ’ ರೀತಿಯ ರಾಜಕಾರಣವನ್ನು ಅವರು ಈ ಬಾರಿಯೂ ಸೋಲಿಸುತ್ತಾರೆ. ಅವರು ಇಂತಹ ರಾಜಕಾರಣ ವನ್ನು ಬಹಳ ಬೇಗ ಗುರುತಿಸುತ್ತಾರೆ . ಯಾವುದೇ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಈ ಬಾರಿಯೂ ಒಂದೇ ಒಂದು ಕ್ಷೇತ್ರವೂ ಅವರಿಗೆ ಸಿಗುವುದಿಲ್ಲ.

ವಾರ್ತಾಭಾರತಿ: ಈ ಬಾರಿ ಬಿಜೆಪಿ ಆಕ್ರಮಣಕಾರಿ ಪ್ರಚಾರ ನಡೆಸುತ್ತಿದೆ. ರಾಜ್ಯದ ಕೆಲವು ಜನಪ್ರಿಯ ಮುಖಗಳು ಆ ಪಕ್ಷದಲ್ಲಿ ಕಾಣುತ್ತಿವೆ.ಇದರಿಂದ...

ಪಿಣರಾಯಿ: ಇದರಿಂದ ಅಂತಹ ಕೆಲವು ವ್ಯಕ್ತಿಗಳಿಗೆ ಮಾತ್ರ ಪ್ರಯೋಜನವಾಗುತ್ತಿದೆ. ಹೆಲಿಕಾಪ್ಟರ್, ಹಣ ಹಾರುತ್ತಿವೆ. ಇದರಿಂದ ಕೆಲವು ಮಂದಿಗೆ ಲಾಭವಾಗುತ್ತದೆ. ಆದರೆ ಬಿಜೆಪಿ ಗೆಲ್ಲುವುದಿಲ್ಲ.

ವಾರ್ತಾಭಾರತಿ: ಬಿಜೆಪಿಗೆ ಕಮ್ಯುನಿಸ್ಟ್ ಕಾರ್ಯಕರ್ತರೇ ಹೆಚ್ಚಾಗಿ ಹೋಗುತ್ತಿದ್ದಾರೆ ಹಾಗೂ ಬಿಜೆಪಿ ಎಡರಂಗದ ಮತಗಳನ್ನೇ ಸೆಳೆಯುತ್ತದೆ ಎಂಬ ಅಭಿಪ್ರಾಯವಿದೆ.

ಪಿಣರಾಯಿ: ಇಲ್ಲ. ಅಂತಹ ಪರಿಸ್ಥಿತಿ ಇಲ್ಲ. ಹಾಗಿದ್ದರೆ ಈ ಚುನಾವಣೆ ಸಂದರ್ಭದಲ್ಲಿ ನಾವು ದುರ್ಬಲರಾಗಬೇಕಿತ್ತು. ಆದರೆ ನೀವು ನೋಡಿ, ರಾಜ್ಯದ ಎಲ್ಲೆಡೆ ನಾವು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿ ಕೊಂಡೇ ಹೋಗುತ್ತಿದ್ದೇವೆ.

‘ಕನ್ನಡಿಗರ ಹಿತರಕ್ಷಣೆಗೆ ಬದ್ಧ’

ವಾರ್ತಾಭಾರತಿ: ಕಾಸರಗೋಡಿನಲ್ಲಿ ಕನ್ನಡಿಗರ ಮೇಲೆ ಮಲಯಾಳ ಹೇರುವ ಪ್ರಯತ್ನ ನಡೆದಿದೆ. ಯಾವುದೇ ಮೈತ್ರಿಕೂಟವೂ ನಮ್ಮ ಸಹಾಯಕ್ಕೆ ಬರುವುದಿಲ್ಲ ಎಂಬ ಅಸಮಾಧಾನ ಅವರಲ್ಲಿದೆ. ಈ ಬಗ್ಗೆ ನೀವು ಏನು ಹೇಳುತ್ತೀರಿ?

ಪಿಣರಾಯಿ: ನಾವು ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡಲು ಬದ್ಧರಾಗಿದ್ದೇವೆ. ಅದು ಕನ್ನಡಿಗರಿರಲಿ, ತಮಿಳಿಗರಿರಲಿ ನಾವು ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನಮ್ಮ ಸರಕಾರ ಬಂದ ಮೇಲೆ ಈ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

ವಾರ್ತಾಭಾರತಿ: ಎಡರಂಗ ಎಷ್ಟು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ?

ಪಿಣರಾಯಿ: ಈ ಬಾರಿ ಎಲ್‌ಡಿಎಫ್ 100 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ. ಅಂತಹ ವ್ಯಾಪಕ ಜನಬೆಂಬಲ ನಮಗೆ ವ್ಯಕ್ತವಾಗಿದೆ.

ವಾರ್ತಾಭಾರತಿ: ಕೇರಳ ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಮುಂದಿದ್ದರೂ ಕೈಗಾರಿಕೆ, ಉದ್ಯಮಗಳಿಗೆ ಪೂರಕ ವಾತಾವರಣ ಹೊಂದಿಲ್ಲ. ಇದಕ್ಕೆ ಎಡರಂಗವೇ ಕಾರಣ ಎಂಬ ದೂರಿದೆ..

ಪಿಣರಾಯಿ: ಇದು ವಾಸ್ತವ ಅಲ್ಲ. ಈ ಹಿಂದೆ ನಮ್ಮ ಸರ ಕಾರಗಳಿದ್ದಾಗ ಇಲ್ಲಿಗೆ ಬಂದಿರುವ ಉದ್ಯಮಿಗಳು, ಕೈಗಾರಿಕೆಗಳು ಕೇರಳ ಉದ್ಯಮ ಸ್ನೇಹಿಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ, ಹೇಳಿದ್ದಾರೆ. ಸಮಸ್ಯೆ ಇರುವುದು, ಕಳೆದ 5 ವರ್ಷಗಳಲ್ಲಿ ಕೇರಳಕ್ಕೆ ಒಂದೇ ಒಂದು ಹೊಸ ಕೈಗಾರಿಕೆ ಬಂದಿಲ್ಲ. ಇದಕ್ಕೆ ಪ್ರಮುಖ ಕಾರಣ, ರಾಜ್ಯದಲ್ಲಿರುವ ವಿದ್ಯುತ್ ಅಭಾವವನ್ನು ನೀಗಿಸುವಲ್ಲಿ ಯುಡಿಎಫ್ ಸರಕಾರ ವಿಫಲವಾಗಿರುವುದು. ಇನ್ನು ಸರಕಾರಿ ವಿಳಂಬ ಧೋರಣೆಯೂ ಕೈಗಾರಿಕೆಗಳು ಬಾರದೇ ಇರಲು ಕಾರಣ. ಈ ಸಮಸ್ಯೆಯನ್ನು ನಮ್ಮ ಸರಕಾರ ಪರಿಹರಿಸಲಿದೆ. ಉದ್ಯಮಗಳನ್ನು ಉತ್ತೇಜಿಸಲು ಏಕ ಗವಾಕ್ಷಿ ವ್ಯವಸ್ಥೆಯನ್ನು ನಾವು ತರಲಿದ್ದೇವೆ. ಹೊಸ ಹೊಸ ಉದ್ಯಮಗಳನ್ನು ಇಲ್ಲಿ ಪ್ರಾರಂಭಿಸಲು ಬೇಕಾಗುವ ಸೌಲಭ್ಯ, ಸಹಕಾರ ನಾವು ನೀಡಲಿದ್ದೇವೆ. ಇನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ನಾವು ವಿಶೇಷ ಗಮನ ನೀಡಲಿದ್ದೇವೆ. ಇಲ್ಲಿ ಸಿಲಿಕಾನ್ ವ್ಯಾಲಿ ರೂಪಿಸಿ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ ನಮ್ಮ ಮುಂದಿದೆ. ಇನ್ನು ರಾಜ್ಯದಲ್ಲಿ ಮೂಲಭೂತ ಸೌಲಭ್ಯವನ್ನು ಹೆಚ್ಚಿಸಲು ನಾವು ಆದ್ಯತೆ ನೀಡುತ್ತೇವೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳು ಚೆನ್ನಾಗಿಲ್ಲ. ಈ ಬಗ್ಗೆ ತಕ್ಷಣ ನಾವು ಗಮನ ಹರಿಸಿ ಕೆಲಸ ಮಾಡುತ್ತೇವೆ.

ವಾರ್ತಾಭಾರತಿ: ರಾಜ್ಯದ ಖಜಾನೆಯಲ್ಲಿ ದುಡ್ಡಿಲ್ಲ, ಭಾರೀ ಸಾಲ ತಲೆಯ ಮೇಲಿದೆ. ಇದು ಕೇವಲ ಯುಡಿಎಫ್ ನಿಂದಾಗಿ ಆಗಿದೆಯೇ, ಎಲ್‌ಡಿಎಫ್ ಕೂಡ ಇದಕ್ಕೆ ಕಾರಣವಲ್ಲವೇ ?

ಪಿಣರಾಯಿ: ಇಲ್ಲ. ಮೊದಲು ಆಡಳಿತ ನಡೆಸುವವರಿಗೆ ಮೈಂಡ್ (ಮನಸ್ಸು, ಬುದ್ಧಿ) ಇರಬೇಕು, ಆಗ ಮನಿ (ಹಣ) ಬರುತ್ತದೆ. ಈಗಿರುವ ಯುಡಿಎಫ್ ಸರಕಾರಕ್ಕೆ ಆ ‘ಮೈಂಡ್’ ಇಲ್ಲ. ಅದೇ ಈಗ ಕೇರಳದ ಸಮಸ್ಯೆ.

ವಾರ್ತಾಭಾರತಿ: ರಾಜ್ಯದ ಅಲ್ಪಸಂಖ್ಯಾತರು ಈ ಬಾರಿ ಯಾರನ್ನು ಬೆಂಬಲಿಸಲಿದ್ದಾರೆ ?

ಪಿಣರಾಯಿ: ಇಲ್ಲಿ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂಬ ಪ್ರಶ್ನೆ ಬರುವುದಿಲ್ಲ. ಈ ರಾಜ್ಯದ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಹೆಚ್ಚಿನವರು ಜಾತ್ಯತೀತ ಮನೋಭಾವದವರು. ಅವರು ಈ ಬಾರಿ ಬಹುದೊಡ್ಡ ಸಂಖ್ಯೆಯಲ್ಲಿ ಎಲ್‌ಡಿಎಫ್ ಅನ್ನು ಬೆಂಬಲಿಸಲು ಮುಂದೆ ಬಂದಿದ್ದಾರೆ. ಇಲ್ಲಿ ಜಾತ್ಯತೀತ ವ್ಯವಸ್ಥೆಗೆ ಧಕ್ಕೆ ಬಂದಿರುವುದನ್ನು ಅವರು ಗಮನಿಸಿದ್ದಾರೆ. ಹಾಗಾಗಿ ನಮಗೆ ಈ ಬಾರಿ ಎಲ್ಲರೂ ಬೆಂಬಲಿಸಲಿದ್ದಾರೆ.

ವಾರ್ತಾಭಾರತಿ: ಪ್ರಧಾನಿ ಮೋದಿ ಕೇರಳವನ್ನು ಸೊಮಾಲಿಯಕ್ಕೆ ಹೋಲಿಸಿದ್ದಾರೆ...

ಪಿಣರಾಯಿ: ಅವರಿಗೆ ಕೇರಳದ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಕೇರಳ ಇಡೀ ದೇಶದಲ್ಲೇ ಸಾಕ್ಷರತೆ, ಜನರ ಜೀವನ ಮಟ್ಟಗಳಲ್ಲಿ ಅತ್ಯುತ್ತಮ ಸ್ಥಾನದಲ್ಲಿದೆ. ಮೋದಿಯವರ ಗುಜರಾತ್ ಈ ಎಲ್ಲ ಕ್ಷೇತ್ರಗಳಲ್ಲಿ ಕೇರಳಕ್ಕಿಂತ ಬಹಳ ಹಿಂದಿದೆ. ಕಳೆದ 5 ವರ್ಷಗಳಲ್ಲಿ ಯುಡಿಎಫ್ ನಿಂದಾಗಿ ಕೇರಳದ ಅಭಿವೃದ್ಧಿ ನಿಂತಿದೆ. ಆದರೂ ಕೇರಳ, ಗುಜರಾತ್ ಸಹಿತ ದೇಶದ ಹಲವು ರಾಜ್ಯಗಳಿಗಿಂತ ಮುಂದಿದೆ. ಯುಡಿಎಫ್ ವೈಫಲ್ಯವೂ ಕೇರಳವನ್ನು ಬೇರೆ ರಾಜ್ಯಗಳಿಗಿಂತ ಹಿಂದೆ ಒಯ್ಯುಲು ಸಾಧ್ಯವಾಗಿಲ್ಲ. ಕಳೆದೈದು ವರ್ಷಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಅಷ್ಟೇ.

ವಾರ್ತಾಭಾರತಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಎಡರಂಗಕ್ಕೆ ದೇಶದಲ್ಲಿ ಅಷ್ಟು ಉತ್ತಮ ಪರಿಸ್ಥಿತಿ ಇಲ್ಲ. ಮುಂದಿನ ದಿನಗಳಲ್ಲಿ ಏನಾಗಬಹುದು ?

ಪಿಣರಾಯಿ: ಅದು ಆಗ. ಈಗ ಜನರಿಗೆ ಪರಿಸ್ಥಿತಿಯ ಅರಿವಾಗಿದೆ. ಯುಪಿಎ ಸರಕಾರದ ನವಉದಾರೀಕರಣ ನೀತಿಯಿಂದಾಗಿ ಜನರು ಸಂಕಷ್ಟ ಎದುರಿಸಿದಾಗ ಅದರ ಲಾಭವನ್ನು ಬಿಜೆಪಿ ಪಡೆಯಿತು. ಮೋದಿ ಸರಕಾರ ಬಂದು ನಮಗೆ ಒಳ್ಳೆಯ ದಿನಗಳು ಬರಬಹುದು ಎಂದು ನಂಬಿ ಜನರು ಬೆಂಬಲಿಸಿದರು. ಆದರೆ ಈಗ ಆ ಸರಕಾರಕ್ಕೂ ಈ ಸರಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಜನರ ಬದುಕು ಇನ್ನಷ್ಟು ಕಷ್ಟಕರವಾಗಿದೆ. ಇಂತಹ ಜನವಿರೋಧಿ ಆರ್ಥಿಕ ನೀತಿಗಳ ವಿರುದ್ಧ ಕೇವಲ ಎಡರಂಗ ಮಾತ್ರ ಸಮರ್ಥವಾಗಿ ಹೋರಾಡುತ್ತದೆ ಎಂಬುದು ಜನರಿಗೆ ತಿಳಿದಿದೆ. ಹಾಗಾಗಿ ನಮ್ಮ ಜನಬೆಂಬಲ ಹೆಚ್ಚಾಗುತ್ತಿದೆ.

ವಾರ್ತಾಭಾರತಿ: ಯುವಕರು ಕಮ್ಯುನಿಸ್ಟ್ ಪಕ್ಷಗಳಿಂದ ದೂರ ಸರಿಯುತ್ತಿದ್ದಾರೆ ಎಂಬ ಭಾವನೆಯಿದೆ..

ಪಿಣರಾಯಿ : ಹಾಗೆ ಎಲ್ಲಾ ಕಡೆ ಇಲ್ಲ. ಕೇರಳದಲ್ಲಿ ಯುವಜನತೆ ಹೆಚ್ಚೆಚ್ಚು ನಮ್ಮ ಪಕ್ಷದ ಕಡೆ ಬರುತ್ತಿದ್ದಾರೆ. ಇನ್ನು ಕೆಲವೆಡೆ ಕಡಿಮೆ ಇರಬಹುದು. ಆದರೆ ಅವರು ಬರುತ್ತಲೇ ಇಲ್ಲ ಎನ್ನುವಂತಿಲ್ಲ. ಆದರೆ ಯುವಜನರನ್ನು ಸೆಳೆಯುವ ಕೆಲಸ ಇನ್ನಷ್ಟು ಆಗಬೇಕಿದೆ.

ವಾರ್ತಾಭಾರತಿ: ಎಲ್‌ಡಿಎಫ್ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗುತ್ತಾರೆ ?

ಪಿಣರಾಯಿ: ನಮ್ಮ ಮೈತ್ರಿಕೂಟದಲ್ಲಿ ಹಲವು ಸಮರ್ಥ ನಾಯಕರಿದ್ದಾರೆ. ಆದರೆ ಈಗ ನಮ್ಮ ಗಮನ ಕೇವಲ ಚುನಾವಣೆಯತ್ತ. ಚುನಾವಣೆ ಮುಗಿದ ಬಳಿಕ ನಾವು ಕುಳಿತು ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂದು ನಿರ್ಧರಿಸುತ್ತೇವೆ. ಆದರೆ ಈ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ನಾವಿದನ್ನು ಸೌಹಾರ್ದಯುತವಾಗಿ ನಿರ್ಧರಿಸುತ್ತೇವೆ.

ವಾರ್ತಾಭಾರತಿ: ಎಲ್‌ಡಿಎಫ್ ನಾಯಕತ್ವದಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯವಿಲ್ಲವೇ ?

ಪಿಣರಾಯಿ: ಈಗ ಯಾವುದೇ ಸಮಸ್ಯೆ, ಭಿನ್ನಾಭಿಪ್ರಾಯವಿಲ್ಲ. ಸಮಸ್ಯೆ ಇದ್ದದ್ದು ಒಂದಾನೊಂದು ಕಾಲದಲ್ಲಿ . ಅದನ್ನು ನಾವು ಇತ್ಯರ್ಥ ಮಾಡಿಕೊಂಡಿದ್ದೇವೆ. ಈಗ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ.

ಫೋಟೊ: ಫಾರೂಕ್ ಅಬ್ದುಲ್ಲಾ ಕೊಪ್ಪ

share
ಸಂದರ್ಶನ: ರೂಮಿ ತಲ್ಹ
ಸಂದರ್ಶನ: ರೂಮಿ ತಲ್ಹ
Next Story
X