ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್: ಇಂಟರ್‌ಪೋಲ್‌ಗೆ ಇ.ಡಿ. ಮನವಿ

ಮುಂಬೈ, ಮೇ 12: ಮಾಜಿ ಮದ್ಯ ದೊರೆ ವಿಜಯ ಮಲ್ಯರ ವಿರುದ್ಧ ರೆಡ್‌ಕಾರ್ನರ್ ನೋಟಿಸೊಂದನ್ನು ಹೊರಡಿಸುವಂತೆ ಅಂತಾರಾಷ್ಟ್ರೀಯ ಪೊಲೀಸಿಂಗ್ ಪ್ರಾಧಿಕಾರವಾಗಿರುವ ಇಂಟರ್‌ಪೋಲ್‌ಗೆ ಜಾರಿ ನಿರ್ದೇಶನಾಲಯವು ಮನವಿ ಮಾಡಿದೆಯೆಂದು ಗುರುವಾರ ಮೂಲಗಳು ತಿಳಿಸಿವೆ.
ಮಲ್ಯರು ತಮ್ಮ ದೇಶದಲ್ಲಿರಲು ಸೂಕ್ತ ದಾಖಲೆ ಪಡೆದಿದ್ದಾರೆಂಬ ನೆಲೆಯಲ್ಲಿ ಅವರ ಗಡಿಪಾರಿಗೆ ಬ್ರಿಟನ್ ನಿರಾಕರಿಸಿದ ಬೆನ್ನಿಗೆ ಈ ಕ್ರಮ ಕೈಗೊಳ್ಳಲಾಗಿದೆ. ವಿಶ್ವಾದ್ಯಂತ ಮಲ್ಯರ ಬಂಧನಕ್ಕೆ ರೆಡ್‌ಕಾರ್ನರ್ ನೋಟಿಸ್ ಅಗತ್ಯವಾಗಿದೆ.
ರೆಡ್‌ಕಾರ್ನರ್ ನೋಟಿಸೆಂದರೆ ನಿರ್ದಿಷ್ಟ ದೇಶವೊಂದರ ಪರವಾಗಿ ಇಂಟರ್‌ಪೋಲ್ ಹೊರಡಿಸುವ ಬಂಧನಾದೇಶವಾಗಿರುತ್ತದೆ. ಭಾರತೀಯನಾಗಲಿ, ವಿದೇಶೀಯನಾಗಲಿ, ಭಾರತದಲ್ಲಿ ಅಪರಾಧವೊಂದನ್ನು ಮಾಡಿ ಬೇರೆ ದೇಶಕ್ಕೆ ಪರಾರಿಯಾದರೆ, ಸಂಬಂಧಿತ ವ್ಯಕ್ತಿಯ ವಿರುದ್ಧ ‘ಎ’ ಸರಣಿಯ (ಕೆಂಪು) ನೋಟಿಸ್ ಪ್ರಕಟಿಸುವಂತೆ ಅಧಿಕಾರಿಗಳು ಸಿಬಿಐಯ ಇಂಟರ್‌ಪೋಲ್ ವಿಭಾಗಕ್ಕೆ ಮನವಿ ಸಲ್ಲಿಸಬಹುದು.
Next Story





