ಕಬ್ಬಿನ ಹಾಲು ಯಂತ್ರದಲ್ಲಿ ಸಿಲುಕಿದ ಬಾಲಕನ ಕೈ; ಅಗ್ನಿಶಾಮಕ ದಳದಿಂದ ರಕ್ಷಣೆ
ಮಂಜೇಶ್ವರ, ಮೇ 12: ಕಬ್ಬಿನ ಹಾಲು ತೆಗೆಯುವ ಯಂತ್ರದ ಚಕ್ರದೆಡೆಯಲ್ಲಿ ಕೈ ಸಿಲುಕಿದ ಬಾಲಕನನ್ನು ಕಾಸರಗೋಡು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ರಾಮದಾಸನಗರ ಪಾರೆಕಟ್ಟೆಯಲ್ಲಿ ನಡೆದಿದೆ. ಪಾರೆಕಟ್ಟೆ ಶ್ರೀಕೃಷ್ಣ ನಿವಾಸದ ಬಿಜು (15) ನನ್ನು ಅಗ್ನಿಶಾಮಕ ದಳ ರಕ್ಷಿಸಿದೆ. ಪಾರೆಕಟ್ಟೆ ಪೊಲೀಸ್ ಏರ್‌ಕ್ಯಾಂಪ್ ರಸ್ತೆ ಬಳಿ ಈ ಬಾಲಕ ಕಬ್ಬಿನ ಜ್ಯೂಸ್ ತೆಗೆಯುವ ಕೇಂದ್ರ ನಡೆಸುತ್ತಿದ್ದು, ಅಲ್ಲಿ ಬಾಲಕ ಜ್ಯೂಸ್ ತೆಗೆಯುತ್ತಿದ್ದ ಸಂದರ್ಭ ಯಂತ್ರದಲ್ಲಿ ಕೈ ಸಿಲುಕಿಕೊಂಡು ತೋಳಿನ ಭಾಗದವರೆಗೆ ನುಸುಳಿತು. ಮಾತ್ರವಲ್ಲ ಮುಖವೂ ಯಂತ್ರಕ್ಕೆ ತಾಗಿ ಆತನ ತುಟಿಗಳು ಹರಿದು ರಕ್ತ ಹರಿಯಲಾರಂಭಿಸಿತು.
ಅದನ್ನು ಕಂಡ ಪೊಲೀಸರು ಮತ್ತು ಸ್ಥಳೀಯರು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಜ್ಯೂಸ್ ಯಂತ್ರದ ಬಿಡಿಭಾಗಗಳನ್ನು ಕಳಚಿ ಬಾಲಕನನ್ನು ರಕ್ಷಿಸಿದರು.
ಬಾಲಕನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story





