ಅತಿ ಮಲಿನ ನಗರ ಕಳಂಕದಿಂದ ದಿಲ್ಲಿ ಮುಕ್ತ: ಡಬ್ಲುಎಚ್‌ಒ ವರದಿ
ಹೊಸದಿಲ್ಲಿ, ಮೇ 12: ದಿಲ್ಲಿಯು ಇನ್ನು ವಿಶ್ವದ ಅತ್ಯಂತ ಮಲಿನ ನಗರವೆನಿಸದೆಂದು ವಿಶ್ವ ಆರೋಗ್ಯ ಸಂಘಟನೆಯ ನಗರ ವಾಯು ಗುಣಮಟ್ಟ ಮಾಹಿತಿ ಮೂಲ ಹೇಳುತ್ತಿದೆ.ಇರಾನ್‌ನ ಝಬೋಲ್ ನಗರವು ದಿಲ್ಲಿಯಿಂದ ಮುಂದೆ ನೆಗೆದು 9ನೆ ಸ್ಥಾನದಲ್ಲಿದೆ. ಭಾರತದ ಗ್ವಾಲಿಯರ್, ಅಲಹಾಬಾದ್, ಪಾಟ್ನಾ ಹಾಗೂ ರಾಯ್ಪುರಗಳು ಪಿಎಂ 2.5 ಸಾಂದ್ರತೆಯ ದೃಷ್ಟಿಯಲ್ಲಿ ದಿಲ್ಲಿಗಿಂತ ಹೆಚ್ಚು ಮಲಿನ ನಗರಗಳಾಗಿವೆ. ದಿಲ್ಲಿಯು ವಿಶ್ವದಲ್ಲೇ ಅತ್ಯಂತ ಮಲಿನವೆಂದು 2014ರ ಡಬ್ಲುಎಚ್‌ಒ ವರದಿ ಹೇಳಿತ್ತು. ಡಬ್ಲುಎಚ್‌ಒ ಮಾಹಿತಿ ಮೂಲವು 103 ದೇಶಗಳ 3 ಸಾವಿರ ನಗರಗಳನ್ನು ಪಟ್ಟಿ ಮಾಡಿದೆ. 2014ರ ವರದಿಯಲ್ಲಿ ಅದು ಕೇವಲ 1,600 ನಗರಗಳನ್ನಷ್ಟೇ ಸೇರಿಸಿತ್ತು.
Next Story





