ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪ್ರವೀಣ ರಾಷ್ಟ್ರಪಾಲ ನಿಧನ
ಹೊಸದಿಲ್ಲಿ,ಮೇ 12: ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಪ್ರವೀಣ ರಾಷ್ಟ್ರಪಾಲ(76) ಅವರು ಗುರುವಾರ ಬೆಳಗಿನ ಜಾವ ಇಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರು ಮೂವರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ಅವರ ಪತ್ನಿ ಎರಡು ವರ್ಷಗಳ ಹಿಂದೆಯಷ್ಟೇ ನಿಧನರಾಗಿದ್ದರು.
ರಾಜ್ಯಸಭೆಯಲ್ಲಿ ಗುಜರಾತನ್ನು ಪ್ರತಿನಿಧಿಸುತ್ತಿದ್ದ ರಾಷ್ಟ್ರಪಾಲ ಎಐಸಿಸಿ ಕಾರ್ಯದರ್ಶಿಯಾಗಿದ್ದು, ಉತ್ತರ ಪ್ರದೇಶದಲ್ಲಿ ಪಕ್ಷದ ವ್ಯವಹಾರಗಳ ಉಸ್ತುವಾರಿಯಾಗಿದ್ದರು. 13ನೇ ಲೋಕಸಭೆ(1999-2004)ಗೆ ಆಯ್ಕೆಯಾಗಿದ್ದ ಅವರು 2006-2012 ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು. 2012 ಎಪ್ರಿಲ್‌ನಲ್ಲಿ ರಾಜ್ಯಸಭೆಗೆ ಪುನರಾಯ್ಕೆಯಾಗಿದ್ದರು.
Next Story





